ಬೆಂಗಳೂರು: ಶೃಂಗಾರ ಆರಾಧಕರ ಮನದಾಳದ ರಾಣಿಯಾಗಿದ್ದ ಮೋಹಕ ಬೆಡಗಿ ಸನ್ನಿ ಲಿಯೋನ್ ಈಗ ‘ವೀರಮಹಾದೇವಿ’ ಆಗಿದ್ದಾರೆ. ತುಂಡು ಬಟ್ಟೆಯಲ್ಲಿ ತುಂಡೈಕ್ಳ ಮನ ಕೆಣಕುತ್ತಿದ್ದ ಸನ್ನಿ ಈಗ ಕತ್ತಿ ಹಿಡಿದು ಕುದುರೆ ಸವಾರಿ ಶುರು ಮಾಡಿದ್ದಾರೆ.
ಸನ್ನಿ ಲಿಯೋನ್ ಏನೇ ಮಾಡಿದ್ದರು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡ್ ಆಗುತ್ತೆ. ಈಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಲಿಯೋನ್ ಸೌಂಡ್ ಸಖತ್ ಜೋರಾಗಿದೆ. ಇದಕ್ಕೆ ಕಾರಣ ಸನ್ನಿ ಲಿಯೋನ್ ಬದಲಾಗಿರೋ ಹೊಸ ಅವತಾರ. ಸನ್ನಿ ಲಿಯೋನ್ ಈಗ ಕತ್ತಿ ಹಿಡಿದು ಕುದುರೆ ಸವಾರಿ ಶುರು ಮಾಡಿದ್ದಾರೆ.
ಐಟಂ ಸಾಂಗ್‍ಗೆ ಡ್ಯಾನ್ಸ್ ಮಾಡುತ್ತಿದ್ದ ಸನ್ನಿ ಲಿಯೋನ್ ಈಗ ಹೊಸ ಪ್ರಾಜೆಕ್ಟ್‍ಗೆ ಸೈನ್ ಮಾಡಿದ್ದಾರೆ. ಈ ಹೊಸ ಸಿನಿಮಾ ತೆಲುಗು, ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ರೆಡಿಯಾಗುತ್ತಿದೆ. ಇದೊಂದು ಐತಿಹಾಸಿಕ ಚಿತ್ರವಾಗಿದ್ದು, ವೀರಮಹಾದೇವಿ ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ.
ವೀರಮಹಾದೇವಿ ಇದೊಂದು ತಮಿಳು ಸಿನಿಮಾ ಆಗಿದ್ದು, ಕನ್ನಡದಲ್ಲೂ ಬಿಡುಗಡೆ ಆಗಲಿದೆ. ತಮಿಳು, ತೆಲುಗು, ಮಲೆಯಾಳಂ, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ವೀರಮಹಾದೇವಿ ಡಬ್ಬಿಂಗ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಕಾಲಿವುಡ್‍ನ ವಿ.ಸಿ ವಡಿವುದಯಾನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು ಬಿಗ್ ಬಜೆಟ್‍ನ ಸಿನಿಮಾ ಇದಾಗಿದೆ. ಈ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಪಾತ್ರಕ್ಕಾಗಿ ಸನ್ನಿ ಲಿಯೋನ್ ಕುದುರೆ ಸವಾರಿ, ಕತ್ತಿವರಸೆ ಸೇರಿದಂತೆ ಮಾರ್ಷಲ್ ಆರ್ಟ್ಸ್ ಕೂಡ ಕಲಿತಿದ್ದಾರೆ. ಸನ್ನಿ ಲಿಯೋನ್ ಅವರ ಈ ಹೊಸ ಸಿನಿಮಾ ಎಲ್ಲರಿಗೂ ಸಾಕಷ್ಟು ಕುತೂಹಲ ಮೂಡಿಸಿದೆ.