ಲಾಕ್‍ಡೌನ್ ನಂತ್ರ ಸನ್ನಿ ಮಾಡುವ ಮೊದಲ ಕೆಲ್ಸ ರಿವೀಲ್

Public TV
2 Min Read
Sunny Leone 7

ನವದೆಹಲಿ: ಕೊರೊನಾ ಭೀತಿಯಿಂದ ದೇಶ ಲಾಕ್‍ಡೌನ್ ಆದ ಕಾರಣ ಜನರು ಲಾಕ್‍ಡೌನ್ ಅವಧಿಯೂ ಮುಗಿಯುವುದನ್ನೇ ಕಾಯುತ್ತಿದ್ದಾರೆ. ಈಗ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಲಾಕ್‍ಡೌನ್ ಮುಗಿದ ನಂತರ ಮಾಡುವ ಮೊದಲ ಕೆಲಸವನ್ನು ರಿವೀಲ್ ಮಾಡಿದ್ದಾರೆ.

ಕೊರೊನಾ ಭೀತಿಯಿಂದ ಮನೆಯಲ್ಲೇ ಕುಳಿತು ಎಲ್ಲರೂ ಬೇಜಾರಗಿದ್ದಾರೆ. ಲಾಕ್‍ಡೌನ್ ಮುಗಿದ ತಕ್ಷಣ ಎಲ್ಲದರೂ ಟ್ರಿಪ್ ಹೋಗೋಣ ಹೊರಗೆ ಹೋಗೋಣ ಎಂದು ಪ್ಲಾನ್ ಮಾಡುತ್ತಿರುತ್ತಾರೆ. ಆದರೆ ಪಡ್ಡೆಹುಡುಗರ ಪಾಲಿನ ಕನಸಿನರಾಣಿ ಸನ್ನಿ ಮಾತ್ರ ಲಾಕ್‍ಡೌನ್ ಮುಗಿದ ಬಳಿಕ ನನ್ನ ಮೂರು ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡಿ ನೆಮ್ಮದಿಯಿಂದ ಉಸಿರಾಡುತ್ತೇನೆ ಎಂದು ಹೇಳಿದ್ದಾರೆ.

sunny leone

ಈ ವಿಚಾರವಾಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಸನ್ನಿ ಲಿಯೋನ್, ನನ್ನ ಮೂರು ಮಕ್ಕಳು ಬಹಳ ತುಂಟರು. ಯಾವಾಗಲೂ ಮನೆಯಲ್ಲಿ ಸಖತ್ ಗಲಾಟೆ ಮಾಡುತ್ತಾರೆ. ಅವರ ಜೊತೆ ಯಾರಾದರೂ ಒಬ್ಬರು ಇರಲೇಬೇಕು. ಹಾಗಾಗಿ ಲಾಕ್‍ಡೌನ್ ಮುಗಿದ ಬಳಿಕ ನಾನು ಮೊದಲು ಮಾಡುವ ಕೆಲಸವೆಂದರೆ ಅವರನ್ನು ಶಾಲೆಗೆ ಕಾರಿನಲ್ಲಿ ಡ್ರಾಪ್ ಮಾಡಿ ಮನೆಗೆ ಬಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತೇನೆ ಎಂದು ತಿಳಿಸಿದ್ದಾರೆ.

Sunny Leone

ನಾನು ದಿನ ನನ್ನ ಮೊದಲ ಮಗು ಬೆಳಗ್ಗೆ 6:30ಕ್ಕೆ ಎದ್ದಾಗ ಏಳುತ್ತೇನೆ. ನಂತರ 30 ನಿಮಿಷ ವ್ಯಾಯಾಮ ಮಾಡುತ್ತೇನೆ. ಅಷ್ಟೋತ್ತಿಗೆ ನನ್ನ ಮೂವರು ಮಕ್ಕಳು ಏಳುತ್ತಾರೆ. ಅವರನ್ನು ವಾಕಿಂಗ್ ಕರೆದುಕೊಂಡು ಹೋಗುತ್ತೇನೆ. ನಂತರ ಬಂದು ತಿಂಡಿ ತಿಂದು ಚಾಟ್ ಮಾಡುತ್ತೇನೆ. ಬಳಿಕ ಮಕ್ಕಳಿಗೆ ಊಟ ಮಾಡಿಸಿ ಅವರನ್ನು ಆಟವಾಡಿಸಲು ಕರೆದುಕೊಂಡು ಹೋಗುತ್ತೇನೆ. ಹೀಗೆ ಅವರನ್ನು ದಿನ ಬ್ಯುಸಿ ಇರುವಂತೆ ಮಾಡಿ ಕಾಲ ಕಳೆಯುತ್ತೇನೆ ಎಂದು ತಿಳಿಸಿದ್ದಾರೆ.

sunny leone

ಕೊರೊನಾ ವೈರಸ್ ಲಾಕ್‍ಡೌನ್ ಸಮಯವನ್ನು ತನ್ನ ಮೂವರು ಮಕ್ಕಳು ಮತ್ತು ಪತಿಯ ಜೊತೆ ಹಾಯಾಗಿ ಕಳೆಯುತ್ತಿರುವ ಸನ್ನಿ ತಮ್ಮ ಅಭಿಮಾನಿಗಳ ಜೊತೆಯೂ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಸನ್ನಿ ಲಿಯೋನ್ ಅವರಿಗೆ ನಾಲ್ಕು ವರ್ಷದ ಮಗಳು ನಿಶಾ ಮತ್ತು ಅವಳಿ ಪುತ್ರರಾದ ನೋವಾ ಮತ್ತು ಆಶರ್ ಇದ್ದಾರೆ.

sunny leone 1

ಸನ್ನಿ ಅವರು ಲಾಕ್‍ಡೌನ್ ಸಮಯದಲ್ಲೂ ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು, ಲಾಕ್ಡ್ ಅಪ್ ವಿತ್ ಸನ್ನಿ ಎಂಬ ಇನ್‍ಸ್ಟಾ ಲೈವ್ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಇದರಲ್ಲಿ ಮಾಧ್ಯಮಗಳಿಗೆ ವಿಶೇಷ ಸಂದರ್ಶನ ಮತ್ತು ಇತರೆ ಸೆಲೆಬ್ರಿಟಿಗಳೊಂದಿಗೆ ಲೈವ್ ಬಂದು ಮಾತನಾಡುತ್ತಾರೆ. ಲಾಕ್‍ಡೌನ್ ಸಮಯದಲ್ಲೂ ತನ್ನ ಅಭಿಮಾನಿಗಳ ಜೊತೆ ಮಾತನಾಡಲು ಈ ಕಾರ್ಯಕ್ರಮವನ್ನು ಮಾಡುತ್ತಿದ್ದೇನೆ ಎಂದು ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *