ಮುಂಬೈ: ಬಾಲಿವುಡ್ ಮಾದಕ ಬೆಡಗಿ ಸನ್ನಿ ಲಿಯೋನ್ ಆಸ್ಪತ್ರೆಗೆ ದಾಖಲಾಗಿದ್ದು, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಸನ್ನಿ ಲಿಯೋನ್ ಖಾಸಗಿ ವಾಹಿನಿಯೊಂದರ ರಿಯಾಲಿಟಿ ಶೋದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ಸ್ಥಳದಲ್ಲಿ ಸನ್ನಿ ಲಿಯೋನ್ಗೆ ಇದ್ದಕ್ಕಿದಂತೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ಅವರನ್ನು ಉತ್ತರಾಖಂಡ್ ರಾಜ್ಯದ ಉದಮ್ ಸಿಂಗ್ ನಗರ ಜಿಲ್ಲೆಯ ಬ್ರಿಜೇಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಸನ್ನಿ ಲಿಯೋನ್ ಸಹಜ ಸ್ಥಿತಿಗೆ ಮರಳಿದ್ದು, ಚೇತರಿಸಿಕೊಂಡಿದ್ದಾರೆ. ಪೂರ್ಣ ಚೇತರಿಕೆಯಾಗುವರೆಗೂ ಚಿಕಿತ್ಸೆ ಮುಂದುವರೆಯಲಿದೆ. ಶನಿವಾರ ಸಂಜೆಯೊಳಗೆ ಡಿಸ್ಚಾರ್ಜ್ ಮಾಡಲಿದ್ದೇವೆ ಅಂತಾ ವೈದ್ಯರು ತಿಳಿಸಿದ್ದಾರೆ.
ಅಪೆಂಡಿಕ್ಸ್ ನೋವಿನ ಸಂಬಂಧ ಸನ್ನಿ ಲಿಯೋನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮುಂದಿನ ಕೆಲವು ದಿನ ಯಾವುದೇ ಶೂಟಿಂಗ್ ನಲ್ಲಿ ಭಾಗಿಯಾಗಲ್ಲ ಅಂತಾ ಸನ್ನಿ ಲಿಯೋನ್ ಅವರ ಮ್ಯಾನೇಜರ್ ತಿಳಿಸಿದ್ದಾರೆ.
Love each year that we host this show together! #biglittlebro @RannvijaySingha @MTVSplitsvilla pic.twitter.com/3sC1F55ACG
— Sunny Leone (@SunnyLeone) June 20, 2018