ಪೇಟಾಕ್ಕಾಗಿ ಬೆತ್ತಲಾದ ಸನ್ನಿ ಲಿಯೋನ್-ವೆಬರ್ ದಂಪತಿ

Public TV
1 Min Read
SUNNEY LEONE

ಮುಂಬೈ: ಹಾಟ್ ಬೇಬಿ ಸನ್ನಿ ಲಿಯೋನ್ ತನ್ನ ಬೋಲ್ಡ್ ಫೋಟೋಶೂಟ್‍ನಿಂದ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆದರೆ ಈಗ ನಟಿ ಸನ್ನಿ ಮತ್ತು ಸಂಗೀತಗಾರ ಪತಿಯಾದ ಡೇನಿಯಲ್ ವೆಬರ್ ಪ್ರಾಣಿಹಿಂಸೆ-ಮುಕ್ತ ಫ್ಯಾಶನ್ ಉತ್ತೇಜಿಸಲು ಬೆತ್ತಲಾಗಿ ಜಾಹಿರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಾಣಿ ಹಿಂಸೆಯ ವಿರುದ್ಧ ಪೇಟಾ (ಪೀಪಲ್ ಫಾರ್ ದಿ ಎಥಿಕಲ್ ಟ್ರಿಟ್‍ಮೆಂಟ್ ಆಫ್ ಅನಿಮಲ್ಸ್) ನಡೆಸುತ್ತಿರೋ ಅಭಿಯಾನದಲ್ಲಿ ಸನ್ನಿ- ವೆಬರ್ ದಂಪತಿ ಕೈಜೋಡಿಸಿದ್ದಾರೆ. ಇಬ್ಬರು ಬೆತ್ತಲಾಗಿ ಪೋಸ್ ಕೊಟ್ಟಿದ್ದು, ವೆಬರ್ ಮೈಮೇಲೆ ಕೇವಲ ಟ್ಯಾಟೋ ಇದೆ. ನಿಮ್ಮ ಚರ್ಮದಲ್ಲೇ ಆರಾಮಾಗಿರಿ. ಪ್ರಾಣಿಗಳು ಅವುಗಳ ಚರ್ಮವನ್ನ ಇಟ್ಟುಕೊಳ್ಳಲಿ ಎಂಬ ಸಂದೇಶವನ್ನು ಸಾರಿದ್ದಾರೆ.

ಪೇಟಾ ಸನ್ನಿ ಮತ್ತು ಡೇನಿಯಲ್ ಬೆತ್ತಲಾಗಿ ಕಾಣಿಸಿಕೊಂಡಿರುವ ಪೋಸ್ಟರ್ ಟ್ವೀಟ್ ಮಾಡಿದ್ದು, ಅದರ ಮೇಲೆ ಇಂಕ್ ಡೋಂಟ್ ಮಿಂಕ್ ಅಂತಾ ಬರೆಯಲಾಗಿದೆ.

ಈ ಬಗ್ಗೆ ಸನ್ನಿ ಪ್ರತಿಕ್ರಿಯಿಸಿ, “ಈ ಜಗತ್ತಿನಲ್ಲಿ ನಾವು ಜೀವಸಲು ಹಲವಾರು ಸಸ್ಯಹಾರಿ ವಸ್ತುಗಳಿವೆ ಹಾಗೂ ಪ್ರತಿಯೊಬ್ಬರಿಗೂ ಆಯ್ಕೆಯ ಅವಕಾಶ ಕೂಡ ಇದೆ. ಯಾವುದೇ ಕ್ರೂರತೆಯನ್ನು ಯಾರೂ ಕೂಡ ಬೆಂಬಲಿಸಬಾರದು. ಸಿಂಥೆಟಿಕ್ ಲೆದರ್, ಮಾಕ್ ಕ್ರಾಕ್, ಫಾಕ್ಸ್ ಫರ್ ಇವುಗಳು ಕೂಡ ಕೆಲವು ಉತ್ತಮ ಆಯ್ಕೆಗಳು” ಎಂದಿದ್ದಾರೆ.

ನಾವು ಪ್ರಾಣಿಗಳಿಗೆ ಧ್ವನಿಯಾಗಬೇಕು, ನನಗೆ ಭರವಸೆ ಇದೆ ಎಲ್ಲರಿಗೂ ಅರ್ಥವಾಗುತ್ತದೆ ಎಂದು. ಅವುಗಳಿಲ್ಲದೆ ನಾವುಗಳು ಇಲ್ಲ. ಆದ್ದರಿಂದ ಇದನ್ನು ಅರಿತುಕೊಂಡು ಅವುಗಳಿಗೆ ಗೌರವ ನೀಡಬೇಕು ಎಂದು ಸನ್ನಿ ಪತಿ ವೆಬರ್ ಹೇಳಿದ್ರು.

https://twitter.com/Sachbang/status/935503559570882560

Sunney Leone 8

Old Images of Sunny Leone Profession

 

Sunny Leone 3 1

sunny leone 1

Sunny Leone 10

Sunny Leone 9

Sunny Leone 8

Share This Article
Leave a Comment

Leave a Reply

Your email address will not be published. Required fields are marked *