Tuesday, 17th July 2018

Recent News

ಭಾರೀ ವಿವಾದ ಸೃಷ್ಟಿಸಿದೆ ಸನ್ನಿ ಲಿಯೋನ್ ಕಾಂಡೋಮ್ ಜಾಹೀರಾತು

ಜೈಪುರ: ಬಾಲಿವುಡ್ ಮಾದಕ ನಟಿ ಸನ್ನಿ ಲಿಯೋನ್ ರಾಯಭಾರಿಯಾಗಿರುವ ಮ್ಯಾನ್ ಪೋರ್ಸ್ ಕಾಂಡೋಮ್ ಜಾಹೀರಾತು ತನ್ನ ಬರಹದ ಮೂಲಕ ಗುಜರಾತಿನಲ್ಲಿ ಭಾರೀ ವಿವಾದಕ್ಕೊಳಗಾಗಿದೆ.

ಜೈಪುರ ರಸ್ತೆಯ ಬದಿಗಳಲ್ಲಿ ದೊಡ್ಡ ಬ್ಯಾನರ್ ಗಳಲ್ಲಿ ಸನ್ನಿಯ ಮ್ಯಾನ್ ಪೋರ್ಸ್ ಕಾಂಡೋಮ್ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ. ಜಾಹೀರಾತಿನಲ್ಲಿ `ಈ ಬಾರಿ ನವರಾತ್ರಿಗೆ ಪ್ರೀತಿಯಿಂದ ಆಟವಾಡಿ’ (ಇಸ್ ನವರಾತ್ರಿ ಮೇ ಖೇಲೋ ಮಗರ್ ಪ್ಯಾರ್ ಸೇ) ಎಂಬ ಬರಹದಿಂದಾಗಿ ಭಾರೀ ಟೀಕೆಗೆ ಒಳಪಟ್ಟಿದೆ. ಈ ಸಂಬಂಧ ಕಾನ್ಫಿಡರೇಷನ್ ಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಸಂಸ್ಥೆಯು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರಿಗೆ ಪತ್ರವನ್ನು ಬರೆದಿದೆ.

ಇದು ನಮ್ಮ ಸಮಾಜ ಸಾಂಸ್ಕೃತಿಕ ಮೌಲ್ಯವನ್ನು ಹಾಳು ಮಾಡುತ್ತದೆ. ತನ್ನ ಕಂಪನಿಯ ಉತ್ಪನ್ನದ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಬೇಜವಾಬ್ದಾರಿಯ ಬರಹಗಳನ್ನು ಪ್ರಕಟಿಸುತ್ತಿದೆ. ಹೀಗಾಗಿ ಈ ಜಾಹೀರಾತನ್ನು ಬ್ಯಾನ್ ಮಾಡಬೇಕು. ಮ್ಯಾನ್ ಪೋರ್ಸ್ ಕಾಂಡೋಮ್ ಉತ್ಪಾದಕರು ಮತ್ತು ಉತ್ಪನ್ನದ ರಾಯಭಾರಿಯಾಗಿರುವ ಸನ್ನಿ ಲಿಯೋನ್ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಿಎಐಟಿ ಯ ರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಖಂಡೆಲ್ ವಾಲ್ ಆಗ್ರಹಿಸಿದ್ದಾರೆ.

ಜಾಹೀರಾತು ಪೋಸ್ಟರ್‍ಗಳನ್ನು ನೋಡಿದ ಸಾರ್ವಜನಿಕರು ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ನವರಾತ್ರಿ ನಂತರ ರಾಜ್ಯದಲ್ಲಿ ಹೆಚ್ಚಿನ ಗರ್ಭಪಾತ ಪ್ರಕರಣಗಳು ಹೆಚ್ಚಾಗುತ್ತವೆ. ಹೀಗಾಗಿ ಉತ್ಪಾದಕರಿಗೆ ಈ ಸಮಯ ಒಳ್ಳೆಯ ವ್ಯಾಪಾರ ತರಲಿದೆ ಎಂದು ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಈ ಹಿಂದೆ ಗುಜರಾತ್ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್, ನವರಾತ್ರಿ ಬಳಿಕ ಎರಡೂ-ಮೂರು ತಿಂಗಳಲ್ಲಿ ಗರ್ಭಪಾತದ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದೆ ಎಂದು ಹೇಳಿದ್ದರು.

 

Leave a Reply

Your email address will not be published. Required fields are marked *