ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಬಹುಭಾಷಾ ನಟಿಯಾಗಿ ಮಿಂಚ್ತಿರೋ ಕಲಾವಿದೆ. ಸದಾ ತಮ್ಮ ಅಭಿಮಾನಿಗಳ ಜತೆಗೆ ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಆಗುವ ಸನ್ನಿ, ಇದೀಗ ಎಲ್ಲರೂ ಅಚ್ಚರಿಪಡುವಂತಹ ವಿಡಿಯೋವೊಂದನ್ನ ಶೇರ್ ಮಾಡಿದ್ದಾರೆ. ಓರ್ವ ವ್ಯಕ್ತಿ ಮೇಲೆ ಫುಲ್ ಗರಂ ಆಗಿ ಚಪ್ಪಲಿ ಏಟು ಕೊಡುವ ಮೂಲಕ ಸನ್ನಿ ಸುದ್ದಿಯಾಗಿದ್ದಾರೆ.
View this post on Instagram
ಬಹುಭಾಷಾ ನಟಿಯಾಗಿ ಸೌಂಡ್ ಮಾಡುತ್ತಿರುವ ಸನ್ನಿ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಶೂಟ್ ಮತ್ತು ಚಿತ್ರದ ಅಪ್‌ಡೇಟ್ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡುತ್ತಾರೆ. ಈಗ ಓರ್ವ ವ್ಯಕ್ತಿ ಮೇಲೆ ಸನ್ನಿ ರೊಚ್ಚಿಗೆದ್ದು ಚಪ್ಪಲಿ ಏಟು ಕೊಟ್ಟಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಜೈಪುರ ಪ್ರವಾಸದಲ್ಲಿ `ರಾಬರ್ಟ್’ ನಟಿ ಆಶಾ ಭಟ್
View this post on Instagram
ಸ್ವಿಮಿಂಗ್ ಪೂಲ್‌ನಿಂದ ಕಟ್ಟೆಯ ಮೇಲೆ ಸನ್ನಿ ನಡೆದುಕೊಂಡು ಬರುತ್ತಿರುತ್ತಾರೆ. ಸಹಾಯಕನೊಬ್ಬ ಸನ್ನಿಗೆ ಬಿಸಿಲು ತಾಗದಂತೆ ಛತ್ರಿ ಹಿಡಿದುಕೊಂಡಿದ್ದಾರೆ. ಹಿಂಬದಿಯಿಂದ ಬಂದ ಮತ್ತೋರ್ವ ಸನ್ನಿ ಅನ್ನು ಪೂಲ್‌ಗೆ ತಳ್ಳಿ ಮಜಾ ತೆಗೆದುಕೊಳ್ತಾರೆ. ಬಳಿಕ ಗಾಬರಿಯಿಂದ ಕಿರುಚಿಕೊಳ್ಳುವ ಸನ್ನಿ, ಜೋರಾಗಿ ಆತನಿಗೆ ಬಯ್ಯುತ್ತಾರೆ. ಅಲ್ಲದೇ ಚಪ್ಪಲಿ ತೆಗೆದುಕೊಂಡು ಆತನ ಮೇಲೆ ಎಸೆಯುತ್ತಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.