ಮಾಜಿ ಪತಿಯ ಅಂತ್ಯಕ್ರಿಯೆ ನೆರವೇರಿಸಿದ ಕರಿಷ್ಮಾ ಕಪೂರ್

Public TV
1 Min Read
Sunjay Kapur funeral Karisma Kapoor daughter Samaira son Kiaan pay floral tributes to late businessman 2

ಬಾಲಿವುಡ್ ನಟಿ ಕರಿಷ್ಮಾ ಕಪೂರ್ (Karisma Kapoor) ಮಾಜಿ ಪತಿ ಸಂಜಯ್ ಕಪೂರ್ (Sunjay Kapur) ಅಂತ್ಯಕ್ರಿಯೆ ದೆಹಲಿಯಲ್ಲಿ ಇಂದು ನೆರವೇರಿತು. ದಂಪತಿ ವಿಚ್ಛೇದನ (Divorce) ಪಡೆದು ಅನೇಕ ವರ್ಷಗಳೇ ಉರುಳಿದ್ದರೂ ಮಕ್ಕಳಿಗಾಗಿ ಮಾಜಿ ದಂಪತಿ ಆಗಾಗ ಒಟ್ಟಾಗುತ್ತಿದ್ದರು. ಇದೀಗ ದೆಹಲಿಯಲ್ಲಿ (Delhi) ನಡೆದ ಸಂಜಯ್ ಕಪೂರ್ ಅಂತಿಮ ಸಂಸ್ಕಾರ ಪ್ರಕ್ರಿಯೆಯನ್ನು ಸಂಜಯ್ ಕರಿಷ್ಮಾ ದಂಪತಿಯ ಮಕ್ಕಳು ನಡೆಸಿದ್ದಾರೆ. ಕರಿಷ್ಮಾ ಕೂಡ ಸಹಜವಾಗಿಯೇ ಬಹಳ ಬೇಸರದಿಂದ ಮಾಜಿ ಪತಿಯ ಅಂತ್ಯಕ್ರಿಯೆ ನಡೆಸಿದ್ದಾರೆ.

53 ವರ್ಷದ ಸಂಜಯ್ ಕಪೂರ್ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೇ ಜೂನ್ 12ರಂದು ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ (England) ಪೊಲೋ ಮ್ಯಾಚ್‌ನಲ್ಲಿ ಪಾಲ್ಗೊಂಡಿದ್ದ ವೇಳೆ ಅಲ್ಲಿಯೇ ಪ್ರಾಣ ಬಿಟ್ಟಿದ್ದರು. ಇದೀಗ ಅವರ ಪಾರ್ಥೀವ ಶರೀರವನ್ನು ದೆಹಲಿಗೆ ತರಲಾಗಿತ್ತು. ಇದನ್ನೂ ಓದಿ: ಮೋಹದ ಬಣ್ಣ ನೀಲಿ: ಯೋಗರಾಜ್ ಭಟ್ಟರ ಹೊಸ ಪ್ರಯೋಗ

Sunjay Kapur funeral Karisma Kapoor daughter Samaira son Kiaan pay floral tributes to late businessman 1

2003ರಲ್ಲಿ ಉದ್ಯಮಿ ಸಂಜಯ್ ಕಪೂರ್ ಜೊತೆ ವಿವಾಹವಾಗಿದ್ದ ಕರಿಷ್ಮಾ ಬಳಿಕ 2016ರಲ್ಲಿ ದೂರಾಗಿದ್ದರು. ಈ ದಂಪತಿ ಸಮೈರಾ ಹೆಸರಿನ ಪುತ್ರಿ ಹಾಗೂ ಕಿಯಾನ್ ಹೆಸರಿನ ಪುತ್ರನನ್ನ ಹೊಂದಿದ್ದಾರೆ. ಕರಿಷ್ಮಾ ಕಪೂರ್‌ರಿಂದ ವಿಚ್ಚೇದನ ಪಡೆದ ಬಳಿಕ ಸಂಜಯ್ ಕಪೂರ್ ಮಾಡೆಲ್ ಪ್ರಿಯಾ ಸಚ್‌ದೇವ್ ಜೊತೆ ವಿವಾಹವಾಗಿರುತ್ತಾರೆ.

ಕಪೂರ್ ಕುಟುಂಬಸ್ಥರು ಅಗಲಿದ ಸಂಜಯ್ ಕಪೂರ್‌ರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ ಕರಿಷ್ಮಾ ಸಹೋದರಿ ಕರೀನಾ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಹಲವರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಟಾಕ್ಸಿಕ್ ನಟಿಗಾಗಿ ಬೆಂಗಳೂರಿನಿಂದ ಮುಂಬೈಗೆ ಲೊಕೇಶನ್ ಶಿಫ್ಟ್ !

13 ವರ್ಷಗಳ ಕಾಲ ದಾಂಪತ್ಯ ನಡೆಸಿ ಸಂಜಯ್‌ರಿಂದ ಕರಿಷ್ಮಾ ದೂರಾಗಿದ್ದರು. ಹೀಗಾಗಿ ಅತ್ಯಂತ ಭಾವುಕತೆಯಿಂದ ಮಾಜಿ ಪತಿಯನ್ನ ಬೀಳ್ಕೊಟ್ಟಿದ್ದಾರೆ. ತಂದೆಯ ಅಂತ್ಯಕ್ರಿಯೆನ್ನು ಪುತ್ರ ಕಿಯಾನ್ ನೆರವೇರಿಸಿದ್ದಾರೆ. ಸಂಜಯ್ ಕಪೂರ್ ಹಾಲಿ ಪತ್ನಿ ಪ್ರಿಯಾ ಸಚ್‌ದೇವ್ ಕೂಡ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

Share This Article