ಮುಂಬೈ: ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ (Sunil Shetty) ತನ್ನ ಫೇವ್ರೆಟ್ ಕ್ರಿಕೆಟರ್ ಯಾರೆಂಬುದನ್ನು ಹೆಸರಿಸಿದ್ದಾರೆ. ಈ ಹಿಂದೆ ಪ್ರತಿ ಪಂದ್ಯದಲ್ಲೂ ಕೆ.ಎಲ್ ರಾಹುಲ್ ಅವರನ್ನ ಹಾಡಿ ಹೊಗಳುತ್ತಿದ್ದ ಸುನೀಲ್ ಶೆಟ್ಟಿ ನನ್ನ ಫೆವ್ರೆಟ್ ಕ್ರಿಕೆಟರ್ ಕೆ.ಎಲ್ ರಾಹುಲ್ (KL Rahul) ಅಲ್ಲ ಎಂದಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಕೆ.ಎಲ್ ರಾಹುಲ್ ನನ್ನ ಮಗ ಇದ್ದಂತೆ, ಆದ್ರೆ ನನ್ನ ಫೆವ್ರೆಟ್ ಸ್ಟಾರ್ ಕ್ರಿಕೆಟರ್ ಎಂದಿಗೂ ವಿರಾಟ್ ಕೊಹ್ಲಿ (Virat Kohli). ಆತ ನಿಜವಾದ ಚೇಸ್ ಮಾಸ್ಟರ್ ಎಂದು ಹೇಳಿದ್ದಾರೆ.
Sunil Shetty said, “KL Rahul is my son, but Virat Kohli is definitely my favourite cricketer. He is a master of chasing”. pic.twitter.com/l02Mnk9DI0
— Mufaddal Vohra (@mufaddal_vohra) October 31, 2023
ಸಚಿನ್ ದಾಖಲೆ ಮುರಿಯುವ ಸನಿಹದಲ್ಲಿ ಕಿಂಗ್: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ (Virat Kohli) ಒಟ್ಟು 78 ಶತಕಗಳನ್ನು ಸಿಡಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 48 ಶತಕ ಗಳಿಸಿರುವ ಕಿಂಗ್ ಕೊಹ್ಲಿ, ಈ ಟೂರ್ನಿಯಲ್ಲಿ ಇನ್ನೆರಡು ಶತಕಗಳನ್ನು ಸಿಡಿಸಿದರೆ, ಸಚಿನ್ ತೆಂಡೂಲ್ಕರ್ ಅವರ (49 ಶತಕ) ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್ ಮದುವೆ
ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿಗೆ ಶತಕ ಸಿಡಿಸುವ ಅವಕಾಶವಿತ್ತು. ನಿಧಾನಗತಿಯ ಬ್ಯಾಟಿಂಗ್ ಆರಂಭಿಸಿದ್ದ ಕೊಹ್ಲಿ, ಕೊನೆಯಲ್ಲಿ ಬಿರುಸಿನ ಆಟಕ್ಕೆ ತಿರುಗಿದರು. 103 ಎಸೆತಗಳಲ್ಲಿ 95 ರನ್ ಗಳಿಸಿ ಆಡುತ್ತಿದ್ದಾಗ ಗೆಲುವಿಗೆ ಇನ್ನೂ 5 ರನ್ ಬಾಕಿಯಿತ್ತು. ಕೊಹ್ಲಿಯ ಶತಕಕ್ಕೂ ಅಷ್ಟೇ ರನ್ ಬೇಕಿತ್ತು. ಈ ವೇಳೆ 104ನೇ ಎಸೆತದಲ್ಲಿ ಸಿಕ್ಸರ್ ಸಿಡಿಸಲು ಯತ್ನಿಸಿದ ಕೊಹ್ಲಿ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ಇದನ್ನೂ ಓದಿ: ಕೊನೆಗೂ ಪಾಕಿಗೆ ಜಯ – ಸೆಮಿ ರೇಸ್‌ನಿಂದ ಬಾಂಗ್ಲಾ ಔಟ್
ಕೋಟ್ಯಂತರ ಅಭಿಮಾನಿಗಳ ಆಸೆಗೆ ತಣ್ಣೀರು ಎರಚಿದಂತಾಯಿತು. ಆದ್ದರಿಂದ ಕೊಹ್ಲಿ ಈ ಪಂದ್ಯದಲ್ಲಾದರೂ 49ನೇ ಶತಕ ಸಿಡಿಸಲಿ ಎಂದು ಅಭಿಮಾನಿಗಳು ಆಶಿಸಿದ್ದಾರೆ. ಪಾಕಿಸ್ತಾನ ತಂಡದ ಸ್ಟಾರ್ ಕ್ರಿಕೆಟರ್ ಮೊಹಮ್ಮದ್ ರಿಜ್ವಾನ್ ಸಹ ಕೊಹ್ಲಿ 49 ಮತ್ತು 50ನೇ ಶತಕವನ್ನು ಇದೇ ವಿಶ್ವಕಪ್‌ನಲ್ಲಿ ಸಿಡಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಕಿಂಗ್ ಕೊಹ್ಲಿ, ರೋಹಿತ್ ಬಯೋಪಿಕ್‌ನಲ್ಲಿ ನಟಿಸುತ್ತಾರಾ ಶಾಹಿದ್ ಕಪೂರ್?
ಕೆ.ಎಲ್ ರಾಹುಲ್ ಮತ್ತು ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೇ ವರ್ಷಾರಂಭ ಜನವರಿ 23ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿತ್ತು. ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲೇ ಮದುವೆ ನೆರವೇರಿತ್ತು. ಇದನ್ನೂ ಓದಿ: ಬಾತುಕೋಳಿ ತಲೆಗೆ ಕೊಹ್ಲಿ ಫೋಟೊ ಹಾಕಿ ತಗ್ಲಾಕ್ಕೊಂಡ ಇಂಗ್ಲೆಂಡ್ ಫ್ಯಾನ್ಸ್ – ಇಂಗ್ಲೆಂಡ್ ಆರ್ಮಿಗೆ ಭಾರತ್ ಆರ್ಮಿ ಕೌಂಟರ್
Web Stories