ನವದೆಹಲಿ: ದೆಹಲಿಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ್ದ 8.5 ಕೋಟಿ ರೂ. ಹಣ ನನ್ನದೇ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಸುನಿಲ್ ಶರ್ಮಾ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಡಿ ವಿಚಾರಣೆಗೆ ಹಾಜರಾಗಿದ್ದ ಸುನಿಲ್ ಶರ್ಮಾ, ಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ ಹಣ ನನ್ನದು. ಈಗಾಗಲೇ ಆ ಹಣಕ್ಕೆ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ. ಆಂಜನೇಯವರ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಅವರ ಮುಂದೆ ಕುಳಿತು ಹೇಳಿಕೆ ನೀಡಲಾರೆ. ನಾನು ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಮುಂದೆ ಹೇಳಿಕೆ ನೀಡಲ್ಲ ಎಂದು ಸುನಿಲ್ ಶರ್ಮಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಪದೇ ಪದೇ ಕ್ರಾಸ್ ಆಗಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಗಾಬರಿಯಲ್ಲಿ ಏನೇನು ಉತ್ತರಗಳನ್ನು ಹೇಳುತಿದ್ದೀನಿ. ನಿಮ್ಮ ಪ್ರಶ್ನೆಗಳು ಏನಿದೆ ಕೇಳಿ ಎಲ್ಲದಕ್ಕೂ ಉತ್ತರಿಸುತ್ತೇನೆ. ನೀವು ನನಗೆ ಮುಖಾಮುಖಿಯಾಗಿ ಉತ್ತರ ನೀಡುವಂತೆ ಒತ್ತಡ ಹಾಕುವಂತಿಲ್ಲ. ನಾನು ವಿಚಾರಣೆಗೆ ಬಂದಿದ್ದು, ಬಂಧನ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಬಂಧನ ಮಾಡಲ್ಲ ಎಂದು ನೀವೇ ಒಪ್ಪಿಕೊಂಡಿದ್ದೀರಿ ಎಂದಿದ್ದಾರೆ ಎನ್ನಲಾಗಿದೆ.
Advertisement
Advertisement
ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಳೆದೊಂದು ವಾರದಿಂದ ಇಡಿ ವಿಚಾರಣೆಗೆ ಒಳಗಾಗಿರುವ ಡಿ.ಕೆ ಶಿವಕುಮಾರ್‍ಗೆ ಶೇವಿಂಗ್ ಮಾಡೋಕು ಅನುಮತಿ ಇಲ್ಲ. ಇಡಿ ಅಧಿಕಾರಿಗಳನ್ನು ಕೇಳಿದರೆ ಅನುಮತಿ ನಿರಾಕರಿಸಿದರು. ಹೀಗಾಗಿ ಕ್ಷೌರ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟಿಗೆ ಡಿಕೆಶಿ ಅರ್ಜಿ ಸಲ್ಲಿಸಿದ್ದಾರೆ. ಜೊತೆ ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಪೆನ್ನು, ಪೇಪರ್ ಬೇಕು ಅಂತಲೂ ಮನವಿ ಮಾಡಿದ್ದಾರೆ. ಕೋರ್ಟ್ ಸೋಮವಾರ ಅರ್ಜಿ ವಿಚಾರಣೆ ನಡೆಸಲಿದೆ.