– ಸರ್ಕಾರ ಮುಲ್ಲಾ, ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ: ಶಾಸಕ ಟೀಕೆ
ಉಡುಪಿ: ಜಾತಿಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಮುಲ್ಲಾ ಆಗಿದ್ದ ಸಿದ್ದರಾಮಯ್ಯ ಈಗ ಫಾದರ್ ಆಗಲು ಹೊರಟಿದ್ದಾರೆ ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ (Sunil Kumar) ಟೀಕಿಸಿದ್ದಾರೆ.
ಉಡುಪಿಯಲ್ಲಿ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸಿಎಂ ಕಚೇರಿ ಕ್ರೈಸ್ತ ಮಿಷನರಿಗಳ ನೆರಳಲ್ಲಿ ಕೆಲಸ ಮಾಡುತ್ತಿದೆ. ಕ್ರಿಶ್ಚಿಯನ್ ಜೊತೆ ಇರುವ 47 ಉಪಜಾತಿ ಪಟ್ಟಿ ಕೈಬಿಡದಿದ್ದರೆ ಆಯೋಗಕ್ಕೆ ಮುತ್ತಿಗೆ ಹಾಕುವ ದಿನ ಬರಬಹುದು ಎಂದು ಎಚ್ಚರಿಸಿದ್ದಾರೆ.
ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಆಗ ಟಿಪ್ಪು ಪೋಷಾಕು, ಈಗ ಪಾದ್ರಿ ರೂಪದ ಆಡಳಿತ. ಸರ್ಕಾರ ಮುಲ್ಲಾ ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ. ಸಿಎಂ ಫಾದರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ. ಫಾದರ್ ಸಿದ್ದರಾಮಯ್ಯ ಹಿಂದೆ ಯಾರದೋ ಓಲೈಕೆ ಅಡಗಿದೆ. ರಾಜ್ಯದ ಹಿತ ಅಡಗಿಲ್ಲ, ಸಾಮಾಜಿಕ ನ್ಯಾಯದ ಆಶಯ ಶಿಲುಬೆಗೆ ಏರಿಸಬೇಡಿ. ದಲಿತ ಒಬಿಸಿಯನ್ನು ಮತಾಂತರಕ್ಕೆ ಕೈಹಾಕಿರೋದು ದುರಂತ. ಫಾದರ್ ಸಿದ್ದರಾಮಯ್ಯ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕು. ಫಾದರ್ ಸಿದ್ದರಾಮಯ್ಯ ಸಂವಿಧಾನ ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಸಮಾಜ ಸಮಾಜ ಒಡೆದು ಕರ್ನಾಟಕದ ಪೋಪ್ ಆಗಲು ಹೊರಟರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಂದೂ ಕ್ರೈಸ್ತಗೆ ಕೊಕ್ – ಮತಾಂತರ ಆದವರಿಗೆ ಮೂಲ ಜಾತಿ ಅನ್ವಯ ಆಗಲ್ಲ
ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನ್ಯಾಯದ ಆಶಯವನ್ನು ಶಿಲುಬೆಗೇರಿಸಲಾಗಿದೆ. ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಆಗ ಟಿಪ್ಪು ಪೋಷಾಕು, ಈಗ ಪಾದ್ರಿ ರೂಪದ ಆಡಳಿತ. ಸರ್ಕಾರ ಮುಲ್ಲಾ ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ. ಸಿಎಂ ಫಾದರ್ ಸಿದ್ರಾಮಯ್ಯ ಆಗಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಸರ್ಕಾರ ಕ್ರಿಶ್ಚಿಯನ್+75 ಉಪಜಾತಿ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಬೇಕು. ನಾಳೆಯಿಂದ ಸಾರ್ವಜನಿಕ ವಿರೊಧ ನಡುವೆ ಆಯೋಗಕ್ಕೆ ಜನ ಮುತ್ತಿಗೆ ಹಾಕುವ ಇದನ್ನು ಮೊದಲು ಕೈಬಿಡಬೇಕು. ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಅಡಿಪಾಯ ಎಂದರು. ಈ ಗೊಂದಲದ ನಡುವೆ ಒಳ್ಳೆಯ ವರದಿ ಕೈಸೇರಲು ಸಾಧ್ಯವಿಲ್ಲ. ಕ್ರಿಶ್ಚಿಯನ್ ಹೆಸರು ತೆಗೆಯುವವರೆಗೆ ನಮ್ಮ ಹೋರಾಟ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಕ್ಕಲಿಗ ಸಮಾಜದ ಅಭಿಪ್ರಾಯದ ಬಗ್ಗೆ ಮಾತನಾಡಲು ಹೋಗುವುದಿಲ್ಲ: ಡಿಕೆಶಿ
ಕಾಂಗ್ರೆಸ್‌ನಲ್ಲಿ ಐದು ಒಳಪಂಗಡಗಳಾಗಿದೆ. ಜನರ ಹೋರಾಟ ಅನಿವಾರ್ಯ. ಕಾಂಗ್ರೆಸ್ ಯಾವಾಗಲೂ ಗೊಂದಲದಲ್ಲೇ ಇರೋದು. ಸಚಿವ ಸಂಪುಟದಲ್ಲಿ ಸಿಎಂ ಏಕಾಂಗಿಯದರು. ಸಚಿವ ಸಂಪುಟ ಒಡೆದು ಹೋಗಿದೆ. ನವೆಂಬರ್, ಡಿಸೆಂಬರ್ ಬೆಳವಣಿಗೆಯಿಂದ ಕಾಂಗ್ರೆಸ್ ಒಳಗೆ ಒಳಪಂಗಡವಾಗಿದೆ. ಜಾರಕಿಹೊಳಿ, ಡಿಕೆ, ಪರಮೇಶ್ವರ್, ಸಿದ್ದರಾಮಯ್ಯ ಸುರ್ಜೇವಾಲ ಪಂಗಡವಾಗಿದೆ. ಕ್ರೈಸ್ತ ಮಿಷನರಿ ನೆರಳು ಸಿಎಂ ಕಚೇರಿ ಮೇಲೆ ಬಿದ್ದಿದೆ. ಮೂಲ ಸಿದ್ದರಾಮಯ್ಯ ನಮಗೆ ಮರೆತುಹೋಗಿದ್ದಾರೆ. ಲಿಂಗಾಯತ ಧರ್ಮ ಪ್ರತ್ಯೇಕ ಚರ್ಚೆ ವಿಚಾರ ಬಿಜೆಪಿಗೆ ಸ್ಪಷ್ಟವಿದೆ. ಧರ್ಮ ಹಿಂದೂ ಅಂತ ಬರೆಸಬೇಕು ಎಂದು ರಾಜ್ಯಾಧ್ಯಕ್ಷರು ಹೇಳಿದ್ದಾರೆ. ಮಠಾಧೀಶರಿಗೆ, ಲಿಂಗಾಯತ ನಾಯಕರಿಗೆ ಮನವೊಲಿಸ್ತೇವೆ ಎಂದಿದ್ದಾರೆ.