ಮುಂಬೈ: ಹಿಂದಿಯ ‘ದಿ ಕಪಿಲ್ ಶರ್ಮಾ ಶೋ’ ಖ್ಯಾತಿಯ ಜನಪ್ರಿಯ ಹಾಸ್ಯ ನಟ ಸುನಿಲ್ ಗ್ರೋವರ್ ನಗರದ ಏಷ್ಯನ್ ಹಾರ್ಟ್ ಇನ್‍ಸ್ಟಿಟ್ಯೂಟ್‍ನಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಜನಪ್ರಿಯ ಹಾಸ್ಯ ಪಾಪ್ ಸೆಲೆಬ್ರೆಟಿಯಾದ ಭಯಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಸುನೀಲ್‍ರವರ ಹೆಲ್ತ್ ಅಪ್‍ಡೇಟ್ ಅನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟ ಸುನಿಲ್ ನಗರದ ಏಷ್ಯನ್ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಭಯ ಪಡುವ ಅವಶ್ಯಕತೆಯಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿ ಐಶ್ವರ್ಯಾಗೆ ಕೋವಿಡ್ ಪಾಸಿಟಿವ್
View this post on Instagram
ಸುನೀಲ್ ಅವರು ಆದಷ್ಟೂ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ಮುಂದೆ ಕಣ್ಣೀರಿಟ್ಟ ಶಕ್ತಿಧಾಮದ ಮಕ್ಕಳು
ಸುನಿಲ್ ಗ್ರೋವರ್ ಹಲವಾರು ಸ್ಮರಣೀಯ ವೇದಿಕೆಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಪಿಲ್ ಶರ್ಮಾ ಶೋ ಕಾರ್ಯಕ್ರಮದಲ್ಲಿ ಅವರ ಗುತ್ತಿ, ಡಾ ಮಶೂರ್ ಗುಲಾಟಿ ಹೀಗೆ ಮುಂತಾದ ಪಾತ್ರವನ್ನು ನಿರ್ವಹಿಸಿದ್ದಾರೆ.
View this post on Instagram
ಅವರು ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಭಾರತ್, ಪಟಾಖಾ, ಸೈಫ್ ಅಲಿ ಖಾನ್‍ರವರ ತಾಂಡವ್, ಸೂರ್ಯಕಾಂತಿ ಹೀಗೆ ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸುನಿಲ್ ಗ್ರೋವರ್ ತಮ್ಮ ಅನಾರೋಗ್ಯದ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.