Bengaluru CityCinemaLatestMain PostSandalwood

ಅಪ್ಪು ಸಮಾಧಿ ಮುಂದೆ ಕಣ್ಣೀರಿಟ್ಟ ಶಕ್ತಿಧಾಮದ ಮಕ್ಕಳು

-ಶಕ್ತಿಧಾಮದ ಮಕ್ಕಳಿಗೆ ಪ್ರಪಂಚ ಜ್ಞಾನ ನೀಡುವ ಸಲುವಾಗಿ ಪ್ರವಾಸ ಕೈಗೊಂಡಿದ್ದೇವೆ

 – ಶಕ್ತಿಧಾಮದ ಮಕ್ಕಳಿಂದ ಅಪ್ಪುಗೆ ನಮನ
– ಜೆಮ್ಸ್‌ ಸಿನಿಮಾಗೆ ವಾಯ್ಸ್ ಕೊಟ್ಟಿದ್ದೇನೆ

ಬೆಂಗಳೂರು: ಅಪ್ಪು ಸಮಾಧಿ ಇರುವ ಕಂಠೀರವ ಸ್ಟುಡಿಯೋಗೆ ಶಕ್ತಿಧಾಮದ ಮಕ್ಕಳು ಭೇಟಿಕೊಟ್ಟಿದ್ದಾರೆ. ಸಮಾಧಿ ಮುಂದೆ ಕಣ್ಣೀರಿಟ್ಟ ಮಕ್ಕಳು, ಶಕ್ತಿಧಾಮದ ಹೆಸರು ಎಷ್ಟು ಸುಂದರ ಎಂದು ಹಾಡುತ್ತಾ ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ.

ನಟ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳಿಗೆ ಪ್ರಪಂಚ ಜ್ಞಾನ ನೀಡುವ ಸಲುವಾಗಿ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಶಿವರಾಜ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಶಕ್ತಿಧಾಮ ಎಂದರೆ ಮಕ್ಕಳಿಗೆ ಊಟಾ ಹಾಕುತ್ತಾರೆ, ಓದುತ್ತಾರೆ ಎಂದು ಅಷ್ಟೇ ಅಲ್ಲ. ಅವರಿಗೆ ಪ್ರಪಂಚ ಜ್ಞಾನ ಬರಬೇಕು. ಹೀಗಾಗಿ ಅವರಿಗೆ ಹೊರ ಪ್ರಪಂಚ ತಿಳಿಬೇಕು ಅಂತ ಕೆಲವು ಕಡೆ ಪ್ರವಾಸ ಮಾಡುತ್ತಿದ್ದೇವೆ. ಫಸ್ಟ್ ಟೈಂ ಮಕ್ಕಳು ಬೆಂಗಳೂರಿಗೆ ಬಂದರು, ವಿಧಾನಸೌಧ, ನಾಳೆ ನಂದಿ ಬೆಟ್ಟ ಹೀಗೆ ಅನೇಕ ಕಡೆ ಕರೆದುಕೊಂಡು ಹೋಗುತ್ತಾ ಇದ್ದೇವೆ ಎಂದು ಹೇಳಿದ್ದಾರೆ.

ಅಪ್ಪಾಜಿ ಬೆಳಕು ಕೊಟ್ಟರು, ಅಮ್ಮ ಶಕ್ತಿಕೊಟ್ಟಿದ್ದಾರೆ ಶಕ್ತಿದಾಮಕ್ಕೆ. ಗೀತಾ ಮಕ್ಕಳ ಜೊತೆಯಲ್ಲೇ ಇದ್ದು ಮಕ್ಕಳಾಗಿದ್ದರು. ಗೀತಾ ಅಮ್ಮನ ಸ್ಥಾನದಲ್ಲಿ ನಿಂತು ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. 150ಕ್ಕೂ ಹೆಚ್ಚು ಮಕ್ಕಳಿದ್ದಾರೆ, ಇನ್ನೂ ಮಕ್ಕಳು ಸೇರುತ್ತಿದ್ದಾರೆ. ಶಕ್ತಿ ಧಾಮಕ್ಕೆ ಅನೇಕರು ಸಹಾಯ ಮಾಡುತ್ತಿದ್ದಾರೆ. ಈ ಮಕ್ಕಳಲ್ಲಿ ಟ್ಯಾಲೆಟ್ಸ್ ಇದೆ. ಮಕ್ಕಳ ಜೊತೆ ಮಕ್ಕಳಾಗಿ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ.

ಇನ್ನೊಂದು ಆಕ್ಟರ್ ಒಳಗೆ ಹೋಗಿ ಡಬ್ ಮಾಡೋದು ತುಂಬಾ ಕಷ್ಟ, ಒಬ್ಬ ನಾಯಕನಾಗಿ ಅವರ ವಾಯ್ಸ್ ಇಮಿಟೇಟ್ ಮಾಡೋದು ಕಷ್ಟವಾಗುತ್ತದೆ. ಏನೋ ಪ್ರಯತ್ನ ಮಾಡಿ ಜೆಮ್ಸ್‍ಗೆ ಇಡೀ ಸಿನಿಮಾಗೆ ವಾಯ್ಸ್ ಕೊಟ್ಟಿದ್ದೇನೆ. ಎರಡೂವರೆ ದಿನ ವಾಯ್ಸ್ ಡಬ್ ಮಾಡಿದ್ದೇನೆ. ಅಪ್ಪುಗೆ ವಾಯ್ಸ್ ಕೊಡೊದು ಬಹಳ ಕಷ್ಟವಾಗುತ್ತೆ ಎಂದು ಕೊಂಡಿದ್ದೇನೆ. ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಅನ್ಸುತ್ತೆ. ಬಹಳ ಕಷ್ಟ ಅಪ್ಪು ಇಲ್ಲದೇ ವಾಯ್ಸ್ ಕೊಡೋದು ಎಂದು ಹೇಳುತ್ತಾ ಭಾವಿಕರಾಗಿದ್ದಾರೆ.

Leave a Reply

Your email address will not be published.

Back to top button