ಟಾಲಿವುಡ್ನಲ್ಲಿ (Tollywood)ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಸೆಟ್ಟಿ ನಂತರ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸೂಚನೆ ಕಾಣಿಸುತ್ತಿದೆ. ಗುಟ್ಟಾಗಿ ಸಂದೀಪ್ ಕಿಶನ್ (Sundeep Kishan) ಮತ್ತು ರೆಗಿನಾ (Regina) ಡೇಟಿಂಗ್ ಮಾಡ್ತಿದ್ದಾರಾ ಎಂಬ ವದಂತಿ ಸದ್ದು ಮಾಡ್ತಿದೆ. ಇದಕ್ಕೆಲ್ಲಾ ಕಾರಣವಾಗಿರೋದು ಇತ್ತೀಚಿನ ರೆಗಿನಾ ಕುರಿತಾದ ಸಂದೀಪ್ ಕಿಶನ್ ಅವರ ಪೋಸ್ಟ್, ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ.
Advertisement
ಕನ್ನಡದ `ಸೂರ್ಯಕಾಂತಿ’ (Suryakanthi) ಸಿನಿಮಾ ಮೂಲಕ ಗಮನ ಸೆಳೆದ ನಟಿ ರೆಗಿನಾ ಮತ್ತೆ ಡೇಟಿಂಗ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಡಿ.13ರಂದು ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ರೆಗಿನಾ ಜೊತೆಗಿನ ವಿಶೇಷ ಫೋಟೋ ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಗಾಸಿಪ್ ಪ್ರಿಯರ ಬಾಯಿಗೆ ಈ ಜೋಡಿ ಆಹಾರವಾಗಿದ್ದಾರೆ. ಇದನ್ನೂ ಓದಿ: ಅಧಿಕೃತವಾಗಿ ಭಾವಿ ಪತ್ನಿಯ ಫೋಟೋ ಹಂಚಿಕೊಂಡ ಅಭಿಷೇಕ್ ಅಂಬರೀಶ್
Advertisement
Happpyyyy Birthdayyyy Papa…
Love you and Wishing you only the best of everything,always ♥️
Stay Happy..Stay Blessed ♥️@ReginaCassandra pic.twitter.com/pZGd9d5ibn
— Sundeep MICHAEL Kishan (@sundeepkishan) December 13, 2022
Advertisement
ಹ್ಯಾಪಿ ಬರ್ತ್ಡೇ ಪಾಪಾ, ನಿನ್ನನ್ನು ಪ್ರೀತಿಸುತ್ತೇನೆ, ನಿಮಗೆ ಸದಾ ಒಳ್ಳೆದಾಗಲಿ. ಯಾವಾಗಲೂ ಖುಷಿಯಾಗಿರು ಎಂದು ರೆಗಿನಾ ಜೊತೆಗಿನ ಸೆಲ್ಫಿಯನ್ನ ಸಂದೀಪ್ ಶೇರ್ ಮಾಡಿದ್ದಾರೆ. ಸೆಲ್ಫಿ ಮತ್ತು ಅಡಿಬರಹ, ಇದೀಗ ಡೇಟಿಂಗ್ ವದಂತಿಗೆ ಪುಷ್ಟಿ ನೀಡಿದೆ. ಇಷ್ಟಕ್ಕೂ ಇಬ್ಬರೂ ಡೇಟ್ ಮಾಡ್ತಿರೋದು ನಿಜಾನಾ ಅಥವಾ ಸ್ನೇಹಕ್ಕೂ ಮೀರಿದ ಬಂಧ ಇದ್ಯಾ ಎಂಬುದನ್ನ ಈ ಜೋಡಿ ಅಧಿಕೃತವಾಗಿ ತಿಳಿಸುವವೆರೆಗೂ ಕಾದುನೋಡಬೇಕಿದೆ.
Advertisement
ಇನ್ನೂ ಇತ್ತೀಚೆಗೆ ನಟಿ ಹುಡುಗರ ಲೈಂಗಿಕ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದರು. ಮ್ಯಾಗಿ ತರ ಎರಡೇ ನಿಮಿಷ ಎಂದು ಹೇಳುವ ಮೂಲಕ ನಟಿ, ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು.