ಇತ್ತೀಚೆಗಷ್ಟೇ ಭಾರತದ ಅಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ಜಿ 20 ಶೃಂಗಸಭೆ (G 20 Summit) ನಡೆದಿದೆ. ಈ ಸಭೆಯಲ್ಲಿ 20 ದೇಶದ ನಾಯಕರು ಭಾಗಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಹೀಗೆ ಆಗಮಿಸಿದ ಗಣ್ಯರಿಗೆ ಪ್ರಧಾನಿ ಉಡುಗೊರೆಗಳನ್ನು ನೀಡಿ ಕಳುಹಿಸಿದ್ದಾರೆ. ಈ ಮೂಲಕ ಒಂದು ಉತ್ತಮ ನೆನಪುಗಳೊಂದಿಗೆ ಎಲ್ಲಾ ದೇಶದ ನಾಯಕರು ಮರಳಿದ್ದಾರೆ ಎಂದರೆ ತಪ್ಪಾಗಲಾರದು.
ಹೌದು. ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖರಿಗೆ ಮೋದಿ (Narendra Modi) ಅತ್ಯದ್ಭುತ ಉಡುಗೊರೆಗಳನ್ನು ನೀಡಿದ್ದಾರೆ. ಅಂತೆಯೇ ಗಣ್ಯರು ಕೂಡ ಅಷ್ಟೇ ಪ್ರತಿಯಿಂದ ಉಡುಗೊರೆಗಳನ್ನು ಪಡೆದು ಸಂತಸ ವ್ಯಕ್ತಪಡಿಸಿದ್ದಾರೆ. ಈ ವಸ್ತುಗಳ ಪೈಕಿ ಶತಮಾನಗಳಷ್ಟು ಹಳೆಯದಾದ ಸಾಂಪ್ರದಾಯಿಕ ಸೃಷ್ಟಿಗಳು, ಸಾಟಿಯಿಲ್ಲದ ಕರಕುಶಲತೆ ಮತ್ತು ಗುಣಮಟ್ಟಕ್ಕಾಗಿ ಜಾಗತಿಕವಾಗಿ ಪ್ರಸಿದ್ಧವಾಗಿವೆ. ನುರಿತ ಕುಶಲಕರ್ಮಿಗಳ ಕೈಚಳಕದಿಂದ ರಚಿಸಲಾಗಿದೆ. ಹಾಗಾದರೆ ಮೋದಿಯವರು ಯಾರಿಗೆ, ಯಾವ ಗಿಫ್ಟ್ (Modi Gift) ನೀಡಿದ್ದಾರೆ ಎಂಬುದನ್ನು ನೋಡೋಣ.
Advertisement
Advertisement
* ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ 10 ವಸ್ತುಗಳನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ (Joe Baiden) ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಬೈಡೆನ್ ಪತ್ನಿ ಜಿಲ್ ಬೈಡೆನ್‍ಗೆ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್‍ನ ಹಸಿರು ವಜ್ರವನ್ನು ನೀಡಿದ್ದಾರೆ. ಜೊತೆಗೆ ‘ಉಪನಿಷತ್ತಿನ ಹತ್ತು ತತ್ವಗಳು’ ಪುಸ್ತಕದ ಮೊದಲ ಆವೃತ್ತಿ ಹಾಗೂ ಗಣೇಶನ ವಿಗ್ರಹವನ್ನು ಮೋದಿ ಗಿಫ್ಟ್ ಆಗಿ ನೀಡಿರುವುದು ಗಮನ ಸೆಳೆದಿದೆ.
Advertisement
ಪ್ರಮುಖವಾಗಿ ಮೈಸೂರಿನಿಂದ ತಂದ ಶ್ರೀಗಂಧದ ಮರದ ಕಟ್ಟಿಗೆಯಲ್ಲಿ ರಾಜಸ್ಥಾನದ ಜೈಪುರದ ಕುಶಲಕರ್ಮಿಯೊಬ್ಬರು ತಯಾರಿಸಿದ ಶ್ರೀಗಂಧದ ಪೆಟ್ಟಿಗೆಯನ್ನು ಜೋ ಬೈಡೆನ್ ದಂಪತಿಗೆ ಉಡುಗೊರೆಯಾಗಿ ನೀಡಲಾಗಿದೆ. ಈ ಶ್ರೀಗಂಧದ ಪೆಟ್ಟಿಗೆಯಲ್ಲಿ ಕೋಲ್ಕತ್ತಾದ ಐದನೇ ತಲೆಮಾರಿನ ಅಕ್ಕಸಾಲಿಗರ ಕುಟುಂಬವು ತಯಾರಿಸಿದ ಬೆಳ್ಳಿ ಗಣೇಶನ ವಿಗ್ರಹ ಹಾಗೂ ದೀಪ ಇದ್ದು, ಅದರ ಜೊತೆ 10 ವಸ್ತುಗಳಿರುವ ದಶದಾನವನ್ನು ಮೋದಿ ಮಾಡಿದ್ದಾರೆ.
Advertisement
* ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ (Rishi Sunak) ಅವರ ಪತ್ನಿ ಅಕ್ಷತಾ ಮೂರ್ತಿಗೆ (Akshata Murthy) ಬನಾರಸ್‍ನಲ್ಲಿ ತಯಾರಿಸಲಾಗುವ ಶಾಲುಗಳನ್ನು ನೀಡಿದ್ದಾರೆ. ಇವುಗಳನ್ನು ಕೈಯಲ್ಲೇ ಮೃದುವಾದ ರೇಷ್ಮೆಯ ದಾರಗಳಿಂದ ನೇಯಲಾಗಿದೆ. ಈ ಶಾಲುಗಳು ವಿಶ್ವಮಾನ್ಯ ಪಡೆದಿದೆ. ಇದನ್ನೂ ಓದಿ: 2024ರ ಜಿ20 ಶೃಂಗಸಭೆ ಬ್ರೆಜಿಲ್ ದೇಶಕ್ಕೆ ಶಿಫ್ಟ್ – ಬ್ರೆಜಿಲ್ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಿದ ಮೋದಿ
* ಇಂಡೋನೇಷ್ಯಾದ ಅಧ್ಯಕ್ಷರ ಪತ್ನಿಗೆ ಅಸ್ಸೋಂನಲ್ಲಿ ತಯಾರಿಸಲಾಗುವ ನೇಯ್ದ ಶಾಲುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ನುರಿತ ಕುಶಲಕರ್ಮಿಗಳು ಇವನ್ನು ತಯಾರಿಸಿದ್ದಾರೆ. ಇವುಗಳನ್ನು ಕೂಡ ರೇಷ್ಮೆಯಿಂದ ತಯಾರಿಸಲಾಗಿದ್ದು, ಈ ಶಾಲನ್ನು ಕದಮ್ ಮರದ ಪೆಟ್ಟಿಗೆಯಲ್ಲಿ ನೀಡಲಾಗಿದೆ. ಇದನ್ನೂ ಓದಿ: BRICS ಶೃಂಗಸಭೆ: ನೆಲದ ಮೇಲಿದ್ದ ತ್ರಿವರ್ಣ ಧ್ವಜವನ್ನು ಕೈಗೆತ್ತಿಕೊಂಡು ಗೌರವ ತೋರಿದ ಮೋದಿ
* ಫ್ರಾನ್ಸ್, ಜರ್ಮನಿ ಮತ್ತು ಸಿಂಗಾಪುರದ ನಾಯಕರು ಕಚ್‍ನ ‘ಅಗೇಟ್ ಬೌಲ್’ ಅನ್ನು ಸ್ವೀಕರಿಸಿದರು. ಚಾಲ್ಸೆಡೋನಿಕ್-ಸಿಲಿಕಾದಿಂದ ರೂಪುಗೊಂಡ ಅಮೂಲ್ಯವಾದ ಕಲ್ಲು ಇದಾಗಿದೆ. ರಾಜ್ಪಿಪ್ಲಾ ಮತ್ತು ರತನ್ಪುರದ ಭೂಗತ ಗಣಿಗಳಲ್ಲಿ ನದಿಪಾತ್ರಗಳಲ್ಲಿ ಇದು ಕಂಡುಬರುತ್ತದೆ. ಇದನ್ನು ವಿವಿಧ ಅಲಂಕಾರಿಕ ವಸ್ತುಗಳನ್ನು ಉತ್ಪಾದಿಸಲು ಹೊರತೆಗೆಯಲಾಗುತ್ತದೆ.
* ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಅವರಿಗೆ ಹಿಮಾಚಲದ ಮಂಡಿ ಮತ್ತು ಕುಲು ಜಿಲ್ಲೆಗಳಿಂದ ಕನಾಲ್ ಹಿತ್ತಾಳೆಯ ಸೆಟ್ ಅನ್ನು ಉಡುಗೊರೆಯಾಗಿ ನೀಡಲಾಯಿತು. ಕನಾಲ್ ಹಿತ್ತಾಳೆಯ ಸೆಟ್ ದೊಡ್ಡದಾದ ಹಾಗೂ ನೇರವಾದ ಹಿತ್ತಾಳೆಯ ತುತ್ತೂರಿಯಾಗಿದ್ದು, ಒಂದು ಮೀಟರ್‍ಗಿಂತಲೂ ಹೆಚ್ಚು ಉದ್ದವನ್ನು ಹೊಂದಿದೆ. ಗ್ರಾಮ ದೇವತೆಗಳ ಮೆರವಣಿಗೆಗಳಂತಹ ವಿಧ್ಯುಕ್ತ ಸಂದರ್ಭಗಳಲ್ಲಿ ಇದನ್ನು ಬಳಸಲಾಗುತ್ತದೆ. ಹಿಮಾಚಲ ಪ್ರದೇಶದ ಮಂಡಿ ಮತ್ತು ಕುಲು ಜಿಲ್ಲೆಗಳಲ್ಲಿ ನುರಿತ ಲೋಹದ ಕುಶಲಕರ್ಮಿಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ.
* ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಪಟಾನ್ ಪಟೋಲಾ (ಸ್ಕಾರ್ಫ್), ವರ್ಣರಂಜಿತ ದುಪಟ್ಟಾವನ್ನು ನೀಡಲಾಯಿತು. ಉತ್ತರ ಗುಜರಾತ್‍ನ ಪಟಾನ್ ಪ್ರದೇಶದಲ್ಲಿ ಸಾಲ್ವಿ ಕುಟುಂಬವು ನೇಯ್ದ ಸ್ಕಾರ್ಫ್ ಅನ್ನು ಎಷ್ಟು ಚೆನ್ನಾಗಿ ರಚಿಸಲಾಗಿದೆ ಎಂದರೆ ಅದರ ಮುಂಭಾಗ ಮತ್ತು ಹಿಮ್ಮುಖವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಸ್ಕಾರ್ಫ್ ಅನ್ನು ಅಲಂಕಾರಿಕ ‘ಸಡೇಲಿ’ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಲಾಗಿದೆ.
* ಗುಜರಾತ್‍ನ ಛೋಟಾ ಉದಯ್‍ಪುರದ ರಾಥ್ವಾ ಕುಶಲಕರ್ಮಿಗಳು ತಯಾರಿಸಿದ ಪಿಥೋರಾ ವಾಲ್ ಪೇಂಟಿಂಗ್ ಅನ್ನು ಪ್ರಧಾನಿಯವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ವರ್ಣಚಿತ್ರಗಳು ಬುಡಕಟ್ಟು ಜನಾಂಗದವರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಪೌರಾಣಿಕ ಜೀವನ ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುವ ಗುಹೆಯ ವರ್ಣಚಿತ್ರಗಳಾಗಿವೆ. ವರ್ಣಚಿತ್ರಗಳು ಆಸ್ಟ್ರೇಲಿಯಾದ ಸ್ಥಳೀಯ ಸಮುದಾಯಗಳ ಮೂಲನಿವಾಸಿಗಳ ಡಾಟ್ ಪೇಂಟಿಂಗ್‍ಗಳಿಗೆ ಗಮನಾರ್ಹವಾದ ಹೋಲಿಕೆಯನ್ನು ಹೊಂದಿವೆ.
* ನೀಲಗಿರಿ ಟೀ ಭಾರತದ ಚಹಾದಲ್ಲಿ ವಿಶಿಷ್ಟವಾದುದು. ಡಾರ್ಜಿಲಿಂಗ್ ಚಹಾವು ವಿಶ್ವದ ಅತ್ಯಂತ ಮೌಲ್ಯಯುತವಾಗಿದೆ. 5 ಸಾವಿರ ಅಡಿ ಎತ್ತರದಲ್ಲಿರುವ ಪಶ್ಚಿಮ ಬಂಗಾಳದ ಮಂಜಿನ ಬೆಟ್ಟಗಳ ಮೇಲೆ ಇರುವ ನೀಲಗಿರಿ ಗಿಡಗಳ ಚಿಗುರನ್ನು ಬಳಸಿ ಇದನ್ನು ತಯಾರು ಮಾಡಲಾಗುತ್ತದೆ. ಅತ್ಯಂತ ಪರಿಮಳ ಮತ್ತು ರುಚಿಕರ ಟೀ ಇದಾಗಿದೆ. ಇದರ ಜೊತೆಗೆ, ಆಂಧ್ರಪ್ರದೇಶದ ಅರಕು ಕಾಫಿ, ಮ್ಯಾಂಗ್ರೋವ್ ಜೇನುತುಪ್ಪ, ಕಾಶ್ಮೀರಿ ಪಶ್ಮಿನಾ(ಶಾಲು), ಉತ್ತರಪ್ರದೇಶದ ವಿಶೇಷವಾದ ಇತ್ತರ್ (ಸುಗಂಧ ದ್ರವ್ಯ) ಅನ್ನು ಕೂಡ ನೀಡಲಾಗಿದೆ.
* ವಿಶ್ವದ ಅತ್ಯಂತ ವಿಶಿಷ್ಟ ಮತ್ತು ದುಬಾರಿ ಆಹಾರ ಪದಾರ್ಥ ಕೇಸರಿ. ಇದು ಪಾಕಶಾಲೆಯಲ್ಲಿ ತನ್ನದೇ ಆದ ಸ್ಥಾನ ಹೊಂದಿದ್ದರೆ ಔಷಧೀಯ ಗುಣವೂ ಇದೆ.
Web Stories