ಬೆಂಗಳೂರು: ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಹಾಗೂ ಕಾಂಗ್ರೆಸ್ ಶಾಸಕರ ಪುತ್ರಿ ಲಕ್ಷ್ಮೀ ಮದುವೆಯಾದ ನಂತರ ನೇರವಾಗಿ ದುನಿಯಾ ವಿಜಯ್ ಮನೆಗೆ ಬಂದಿಳಿದಿದ್ದಾರೆ.
ದುನಿಯಾ ವಿಜಯ್ ಮನೆಯ ಹತ್ತಿರ ಬರುತ್ತಿದ್ದ ಹಾಗೇ ಶಾಸಕರ ಪುತ್ರಿ ಲಕ್ಷ್ಮೀ ನಾಯ್ಕ್ ಕಾರಿನಿಂದ ಇಳಿದು ವಿಜಯ್ ಮನೆಯೊಳಗೆ ಓಡಿ ಹೋದರು. ನಂತರ ಚಿತ್ರೀಕರಣ ಮಾಡಲು ಮುಂದಾದ ಮಾಧ್ಯಮದವರಿಗೆ ನಿರಾಕರಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಶಾಸಕರ ಪುತ್ರಿ ಜೊತೆ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪರಾರಿ – ಚಾಮುಂಡಿ ಬೆಟ್ಟದಲ್ಲಿ ವಿವಾಹ
ಇಬ್ಬರೂ ಫ್ರೆಶಪ್ ಆದ ನಂತರ ದುನಿಯಾ ವಿಜಯ್ ಇಂದು ಇಬ್ಬರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಿದ್ದಾರೆ. ನಂತರ ಪೊಲೀಸರ ಮುಂದೆ ಹಾಜರಾಗಿ ಲಕ್ಷ್ಮೀ ನಾಯ್ಕ್ ಹೇಳಿಕೆ ನೀಡಲಿದ್ದಾರೆ.
ಮಾಸ್ತಿಗುಡಿ ನಿರ್ಮಾಪಕ ಸುಂದರ್ ಹಾಗೂ ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಶಾಸಕರ ಯಲಹಂಕ ನ್ಯೂಟೌನ್ ಮನೆಯಿಂದ ಪುತ್ರಿ ನಾಪತ್ತೆಯಾಗಿದ್ದು, ಈ ಬಗ್ಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ಎರಡು ವಿಶೇಷ ತಂಡಗಳಿಂದ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಇದನ್ನೂ ಓದಿ: ಮದ್ವೆ ಬಗ್ಗೆ ಸ್ಪಷ್ಟನೆ ನೀಡಿ ತಂದೆಗೆ ಸಂದೇಶ ಕಳುಹಿಸಿದ ಶಾಸಕರ ಪುತ್ರಿ- ವಿಡಿಯೋ ನೋಡಿ
ಸುಂದರ್ ಮತ್ತು ಲಕ್ಷ್ಮೀ ನಾಯ್ಕ್ ಗುರುವಾರ ಚಾಮುಂಡಿ ಬೆಟ್ಟದಲ್ಲಿ ಮದ್ವೆಯಾಗಿದ್ದಾರೆ. ಹುಡುಗಿಯ ಪೋಷಕರು ಕೂಡ ಜೊತೆಯಲ್ಲಿಯೇ ಇದ್ದು, ಶಾಸಕರಿಗೆ ಇಷ್ಟವಿಲ್ಲದ ಕಾರಣ ರಾತ್ರಿ ಮನೆ ಬಿಟ್ಟು ಹೋಗಿ, ಗುರುವಾರ ಮದುವೆಯಾಗಿದ್ದಾರೆ.