ಮುಸ್ಲಿಂರ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ. ಮುಸ್ಲಿಂ ಬಾಂಧವರು ತಮ್ಮ ಸಂಪ್ರದಾಯದಂತೆ ಉಪವಾಸ ಆಚರಣೆಯಲ್ಲಿ ತೊಡಗಿಕೊಂಡು ಅಲ್ಲಾಹನ ಧ್ಯಾನದಲ್ಲಿ ಮಗ್ನರಾಗಿದ್ದಾರೆ. ಈ ಬಾರಿ ರಂಜಾನ್ ಮಾಸ ಬೇಸಿಗೆಯಲ್ಲಿ ಬಂದಿದ್ದು, ಉಪವಾಸ ನಿರತರಿಗೆ ದಣಿವಾಗುವುದು ಸಾಮಾನ್ಯ. ಹಾಗಾಗಿ ಸೆಹ್ರಿ ಮತ್ತು ಇಫ್ತಾರ್ ಸಮಯದಲ್ಲಿ ತಂಪಾದ ಪಾನೀಯ (ಎನರ್ಜಿ ಡ್ರಿಂಕ್)ಗಳನ್ನು ಕುಡಿಯುದರಿಂದ ದೇಹವನ್ನು ಕೂಲ್ ಆಗಿ ಇಟ್ಟುಕೊಳ್ಳಬಹುದು. ಹಾಗಾಗಿ ನಿಮಗಾಗಿ ಕೋಲ್ಡ್ ಸೋಂಪು ಶರಬತ್ತು ಮಾಡುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
ಬೇಕಾಗುವ ಸಾಮಾಗ್ರಿಗಳು
1. ಸಕ್ಕರೆ – 2 ಕಪ್
2. ಸೋಂಪು – ಒಂದು ಕಪ್
3. ಏಲಕ್ಕಿ – 35
4. ಗಸಗಸೆ -2 ಚಮಚ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಸೋಂಪು, ಒಂದು ಕಪ್ ಸಕ್ಕರೆ, ಏಲಕ್ಕಿ ಮತ್ತು ಗಸಗಸೆ ಎಲ್ಲವನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ.
* ರುಬ್ಬಿದ ಪುಡಿಯನ್ನು ಜರಡಿ ಹಿಡಿಯಿರಿ. ಮತ್ತೆ ಉಳಿದ ತರಿಯನ್ನು ಮಿಕ್ಸಿಗೆ ಹಾಕಿ ಅದಕ್ಕೆ ಮತ್ತೆ ಒಂದು ಕಪ್ ಸಕ್ಕರೆ ಹಾಕಿ ರುಬ್ಬಿಕೊಳ್ಳಿ.
* ಈಗ ಒಂದು ಗ್ಲಾಸ್‍ಗೆ ಎರಡು ಚಮಚ ರುಬ್ಬಿದ ಪುಡಿ ಹಾಕಿ, ಅದಕ್ಕೆ ಒಂದು ಗ್ಲಾಸ್ ನೀರು, 2 ಐಸ್ ಕ್ಯೂಬ್ ಹಾಕಿ ಮಿಕ್ಸ್ ಮಾಡಿದರೆ ಸೋಂಪು ಶರಬತ್ತು ಸಿದ್ಧ
* ಇನ್ನೊಂದು ಗ್ಲಾಸ್‍ಗೂ ಎರಡು ಚಮಚ ಪುಡಿ ಹಾಕಿ ಅದಕ್ಕೆ ಒಂದು ಗ್ಲಾಸ್ ಹಾಲು, 2 ಐಸ್ ಕ್ಯೂಬ್ ಹಾಕಿ ಮಿಕ್ಸ್ ಮಾಡಿದರೆ ಕುಡಿಯಲು ಪಾನೀಯ ರೆಡಿ.
* ಒಮ್ಮೆ ಹೆಚ್ಚು ಈ ರೀತಿ ಪೌಡರ್ ಮಾಡಿಟ್ಟುಕೊಂಡರೆ ಪ್ರತಿ ದಿನ ಶರಬತ್ತು ಮಾಡಿಕೊಳ್ಳಲು ಸಹಾಯವಾಗುತ್ತದೆ.