ಬೇಸಿಗೆಯಲ್ಲಿ ಚರ್ಮದ ರಕ್ಷಣೆಗೆ ಕೆಲವು ರಾಸಾಯನಿಕಗಳಿಂದ ಸಿದ್ಧಪಡಿಸಿದ ಕ್ರೀಮ್‍ಗಳನ್ನು ಹಲವರು ಬಳಸುತ್ತಾರೆ. ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ಪರಿಸರ ಮತ್ತು ಹವಾಮಾನಕ್ಕೆ ಅನುಗುಣವಾಗಿ ನಿಮ್ಮ ಚರ್ಮದ ಆರೈಕೆಗೆ ಇಲ್ಲಿದೆ ಪರಿಹಾರ.
* ದಿನಕ್ಕೆ ಎರಡು ಬಾರಿ ನಿಮ್ಮ ಮುಖವನ್ನು ಸ್ವಚ್ಛಗೊಳಿಸಬೇಕು. ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಒಂದು ನಿಮಿಷ ಮುಖವನ್ನು ಮೃದುವಾಗಿ ಮಸಾಜ್ ಮಾಡಬೇಕು. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನೂ ಓದಿ: ಮಜ್ಜಿಗೆಯಲ್ಲಿದೆ ಮದ್ದಿನ ಗುಣ- ಪ್ರತಿನಿತ್ಯ ಒಂದು ಲೋಟ ಮಜ್ಜಿಗೆ ಕುಡಿದು ನೋಡಿ
* ನಿಮ್ಮ ದೈನಂದಿನ ಆಹಾರದಲ್ಲಿ ಹಸಿರು ಎಲೆ, ತರಕಾರಿಗಳು, ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸುವುದು ಉತ್ತಮವಾಗಿದೆ. ಇದನ್ನೂ ಓದಿ: ಬಾಯಿ ದುರ್ವಾಸನೆ ಬರುತ್ತಿದ್ಯಾ? ಹಾಗಿದ್ರೆ ಈ ಮನೆ ಮದ್ದು ಬಳಕೆ ಮಾಡಿ
* ನಿಮ್ಮ ಚರ್ಮ ಒಣಗುತ್ತಿದ್ದರೆ. ನಿಮ್ಮ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ ಎಂದರ್ಥ. ಹೀಗಾಗಿ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
* ಟೊಮೆಟೊ ರಸ ಮತ್ತು ಅಲೋವೆರಾ ಪೇಸ್ಟ್ ಅನ್ನು ನಿಮ್ಮ, ಕೈ ಕಾಲುಗಳಿಗೆ ಹಚ್ಚಿ ಅರ್ಧ ಗಂಟೆ ಹಾಗೆಯೇ ಇಟ್ಟು ಸ್ನಾನ ಮಾಡಿ. ಇದನ್ನೂ ಓದಿ: ಹೊಟ್ಟೆ ಸಮಸ್ಯೆ ನಿವಾರಣೆಗೆ ಇಲ್ಲಿದೆ ಮನೆಮದ್ದು
* ತಣ್ಣನೆಯ ಎಲೆಕೋಸು ಎಲೆಗಳನ್ನು ಕಪ್ಪಾಗಿರುವ ಚರ್ಮದ ಮೇಲೆ ಕವರ್ ಮಾಡಿ ಬಳಿಕ ಕಾಲು ಗಂಟೆ ಬಿಟ್ಟು ನಂತರ ತೊಳೆಯಿರಿ. ಇದನ್ನೂ ಓದಿ: ದೇಹದ ತೂಕ ಮುಜುಗರ ಉಂಟುಮಾಡುತ್ತಿದೆಯಾ? ರಾಮಬಾಣದಂತಿವೆ ಈ ಮನೆಮದ್ದುಗಳು
* ಮೊಸರು ಚರ್ಮವನ್ನು ತಂಪಾಗಿಸುವ ಗುಣ ಹೊಂದಿದೆ. ಅಷ್ಟೇ ಅಲ್ಲ ಟ್ಯಾನ್ ಕೂಡ ಹೋಗಲಾಡಿಸುತ್ತದೆ. ಆದ್ದರಿಂದ ಇದನ್ನು 15 ರಿಂದ 20 ನಿಮಿಷಗಳ ಕಾಲ ಕಪ್ಪಾಗಿರುವ ಭಾಗಗಳ ಮೇಲೆ ಇಟ್ಟು, ನಂತರ ತೊಳೆಯಿರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ಮುಖದ ಟ್ಯಾನ್ ಮಾಯವಾಗುತ್ತೆ. ಇದನ್ನೂ ಓದಿ: ಡಾರ್ಕ್ ಸರ್ಕಲ್‍ಗೆ ಇಲ್ಲಿದೆ ಪರಿಹಾರ