ಮಂಡ್ಯ: ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕೀಯಕ್ಕೆ ಪ್ರವೇಶಿಸಲು ಸಿದ್ಧತೆ ನಡೆಸಿರುವ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರಿಗೆ ಬಿಗ್ ಶಾಕ್‌ವೊಂದು ಎದುರಾಗಿದೆ. ಸಮಲತಾ ಅವರು ಸ್ಪರ್ಧೆಗೆ ಕಣ್ಣಿಟ್ಟಿರುವ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಸ್ಪರ್ಧೆಗೆ ಸಂಕಷ್ಟ ಎದುರಾಗಿದೆ.
ಹೌದು, ಮಂಡ್ಯ (Mandya) ಮತ್ತು ಮೇಲುಕೋಟೆಯಲ್ಲಿ (Melukote) ಸುಮಲತಾ ಸ್ಪರ್ಧೆಗೆ ರೈತ ಸಂಘ ವಿರೋಧ ವ್ಯಕ್ತಪಡಿಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಗೆಲುವಿಗೆ ರೈತ ಸಂಘವೇ ಪ್ರಮುಖ ಪಾತ್ರವಹಿಸಿತ್ತು. ಆದರೆ ಈ ಬಾರಿ ಮಂಡ್ಯ, ಮೇಲುಕೋಟೆಯಲ್ಲಿ ರೈತ ಸಂಘದ ಸದಸ್ಯರೇ ಸ್ಪರ್ಧೆಗೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಸುಮಲತಾ ಅವರ ಸ್ಪರ್ಧೆಗೆ ಕಂಟಕ ಎದುರಾಗಿದೆ. ಇದನ್ನೂ ಓದಿ: 50 ಸಾವಿರ ವರ್ಷಕ್ಕೊಮ್ಮೆ ಗೋಚರಿಸುವ ವಿಸ್ಮಯ – ಬೆಂಗಳೂರಲ್ಲಿ ಗೋಚರಿಸಲಿಲ್ಲ ಹಸಿರು ಧೂಮಕೇತು
Advertisement
Advertisement
ಮಂಡ್ಯದಿಂದ ಮಧುಚಂದನ್, ಮೇಲುಕೋಟೆಯಿಂದ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಸ್ಪರ್ಧೆ ಖಚಿತವಾಗಿದೆ. ಸರ್ವೋದಯ ಕರ್ನಾಟಕ ಪಕ್ಷ ಈ ಇಬ್ಬರು ಹೆಸರನ್ನು ಈಗಾಗಲೇ ಘೋಷಣೆ ಮಾಡಿದೆ. ಟಿಕೆಟ್ ಘೋಷಣೆ ಬೆನ್ನಲ್ಲೆ ಕ್ಷೇತ್ರದಲ್ಲಿ ಆಕ್ಟಿವ್ ಆಗಿ ಅಭ್ಯರ್ಥಿಗಳು ಕೆಲಸ ಮಾಡುತ್ತಿದ್ದಾರೆ.
Advertisement
Advertisement
ಮಂಡ್ಯ ಮತ್ತು ಮೇಲುಕೋಟೆ ಎರಡು ಕ್ಷೇತ್ರಗಳಲ್ಲಿ ಸುಮಲತಾಗೆ ರೈತ ಸಂಘ ಬೆಂಬಲ ನೀಡಲ್ಲ. ಈಗಾಗಲೇ ಕುಸ್ತಿ ಅಖಾಡಕ್ಕೆ ಧುಮುಕಿದ್ದೀವಿ. ಯಾರೇ ಬಂದ್ರು ಹೋರಾಡ್ತೀವಿ. ಸುಮಲತಾ ಆದ್ರು ಸರಿ, ಬೇರೆ ಯಾರೇ ಆದ್ರು ಸರಿ. ಸ್ಪರ್ಧೆಯಿಂದೆ ಹಿಂದೆ ಸರಿಯುವ ಮಾತೆ ಇಲ್ಲ ಎಂದ ರೈತ ಸಂಘದ ನಾಯಕರು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ, ಅವ್ರನ್ನ ಬಿಟ್ಟು ಹೋದ್ರೆ ದೇವರಿಂದ ದೂರವಾದಂತೆ: ಜಮೀರ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k