ಬೆಂಗಳೂರು: ಮೋಡ ಕವಿದ ವಾತಾವರಣ ಇರೋದ್ರಿಂದ ಬೆಂಗಳೂರಿನಲ್ಲಿ (Bengaluru) ಹಸಿರು ಧೂಮಕೇತುವಿನ (Green Comet) ಗೋಚರ ಸಾಧ್ಯವಾಗಿಲ್ಲ.
ಗುರುವಾರ ಮುಂಜಾನೆ 5 ಗಂಟೆ ಸುಮಾರಿಗೆ ಹಸಿರು ಧೂಮಕೇತು ಗೋಚರವಾಗಬೇಕಿತ್ತು. ಆದ್ರೆ ಬೆಂಗಳೂರಿನಲ್ಲಿ ದಟ್ಟವಾದ ಮೋಡ ಇರುವುದರಿಂದ ಹಸಿರು ಧೂಮಕೇತು (Green Comet) ಕಣ್ತುಂಬಿಕೊಳ್ಳಲು ಆಗಲಿಲ್ಲ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
Advertisement
Advertisement
ಸುಮಾರು 50 ಸಾವಿರ ವರ್ಷಗಳ ಹಿಂದೆ ಅಂದ್ರೆ ಶಿಲಾ ಯುಗದ ಸಂದರ್ಭದಲ್ಲಿ ಭೂಮಿಯ ಸಮೀಪದಲ್ಲಿ ಹಾದು ಹೋಗಿದ್ದ ಹಸಿರು ಧೂಮಕೇತು ಮತ್ತೊಮ್ಮೆ ಭೂಮಿಯ ಸಮೀಪಕ್ಕೆ ಬಂದಿದೆ. ಆಕಾಶದಲ್ಲಿ ಸಂಭವಿಸುವ ಕೌತುಕವನ್ನು ಬರಿಗಣ್ಣಿನಿಂದ ಕಣ್ತುಂಬಿಕೊಳ್ಳಬಹುದು ಎಂದು ನಾಸಾ (NASA) ತಿಳಿಸಿದೆ. ಉತ್ತರ ಧ್ರುವ ನಕ್ಷತ್ರ, ಸಪ್ತರ್ಷಿ ಮಂಡಲದ ಮಧ್ಯೆ ಇದು ಕಂಡುಬರಲಿದೆ.
Advertisement
ಭೂಮಿಗೆ 42 ಮಿಲಿಯನ್ ಕಿ.ಮೀ. ನಷ್ಟು ಸನಿಹಕ್ಕೆ ಈ ಗ್ರೀನ್ ಕಾಮೆಟ್ ಬರಲಿದೆ. ಆದ್ರೆ ಭಾರತದಲ್ಲಿ ಇದು ಬರಿಗಣ್ಣಿಗೆ ಕಾಣುವುದು ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಬೈನಾಕುಲರ್ ಮೂಲಕ ಇದನ್ನು ವೀಕ್ಷಣೆ ಮಾಡಬಹುದು ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ನಲ್ಲಿ ನಡೆದಿದ್ದು ಪ್ರತೀಕಾರದ ದಾಳಿ – ಸ್ಫೋಟದ ಸ್ಥಳದಲ್ಲಿ ಆತ್ಮಾಹುತಿ ಬಾಂಬರ್ನ ತುಂಡರಿಸಿದ ತಲೆ ಪತ್ತೆ
Advertisement
ಉತ್ತರ ದಿಕ್ಕಿನ ಡ್ರಾಕೊ ನಕ್ಷತ್ರಪುಂಜದ ಸಮೀಪ ಅಥವಾ ಸಪ್ತರ್ಷಿ ಮಂಡಲದ ಸಮೀಪ ಇದನ್ನ ಯಾವುದೇ ದೃಶ್ಯ ಉಪಕರಣಗಳ ಸಹಾಯವಿಲ್ಲದೇ ವೀಕ್ಷಿಸಬಹುದು. ಸೌರವ್ಯೂಹದ ಆಚೆಗಿನ ಕೌಡ್ನಿಂದ ಹೊರಬಂದು ಭೂಮಿಯ ಸಮೀಪಕ್ಕೆ ಧೂಮಕೇತು ಬರುತ್ತಿದ್ದು, ಇದಕ್ಕೆ ಹಸಿರು ಧೂಮಕೇತು ಎಂದು ಕರೆಯಲಾಗಿದೆ. ಮಂಜು ಮತ್ತು ಧೂಳಿನಿಂದ ಕೂಡಿರುವ ಈ ಧೂಮಕೇತುವನ್ನು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
50 ವರ್ಷಗಳ ಹಿಂದೆ ಭೂಮಿ ಸಮೀಪಕ್ಕೆ ಬಂದಿದ್ದ ಈ ಹಸಿರು ಧೂಮಕೇತು, 2022ರ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ವೀಕ್ಷಿಸಲಾಗಿತ್ತು. ಬುಧವಾರ ರಾತ್ರಿ 7 ಗಂಟೆಯಿಂದ ಗುರುವಾರ ಮುಂಜಾನೆ 4 ಗಂಟೆಯ ತನಕ ಇದು ಗೋಚರಿಸುತ್ತಿತ್ತು. ಈ ಧೂಮಕೇತುವಿಗೆ `C/2022 E3 (ZTF)’ ಎಂದು ಹೆಸರಿಡಲಾಗಿದೆ.
ಬುಧವಾರ ಹಾಗೂ ಗುರುವಾರ ಹಸಿರು ಧೂಮಕೇತುವನ್ನು, ಬೆಳಗಿನ ಜಾವ 5 ಗಂಟೆವರೆ ಬೈನಾಕೂಲರ್ ಮೂಲಕ ಕಣ್ತುಂಬಿಕೊಳ್ಳಬಹುದಿತ್ತು ಎಂದು ನೆಹರೂ ತಾರಾಲಯದ (Jawaharlal Nehru Planetarium) ಹಿರಿಯ ವಿಜ್ಞಾನಿ (Scientist) ಡಾ. ಆನಂದ್ ಸ್ಪಷ್ಟಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k