ಮಂಡ್ಯ: ಕಳೆದ ಲೋಕಸಭಾ ಚುನಾವಣೆಯ ವೇಳೆ ಇಂಡಿಯಾದ ರಾಜಕೀಯವೇ ಒಂದು ತೂಕ ಆದ್ರೆ ಮಂಡ್ಯದ (Mandya) ರಾಜಕೀಯವೇ ಮತ್ತೊಂದು ತೂಕ ಎಂದು ರಾಷ್ಟ್ರ ರಾಜಕೀಯಕ್ಕೆ ಪರಿಚಯ ಮಾಡಿಕೊಟ್ಟ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh), ಇದೀಗ ತಮ್ಮ ರಾಜಕೀಯ ಜೀವನದಲ್ಲಿ ಮತ್ತೊಂದು ಅಧ್ಯಾಯವನ್ನು ಬರೆಯಲು ಮುಂದಾಗಿದ್ದಾರೆ.
Advertisement
ಕಳೆದ ಲೋಕಸಭಾ ಚುನಾವಣೆಯ ವೇಳೆ ಒಂದು ಕಡೆ ಮೋದಿ ಮೇನಿಯಾ ಸದ್ದು ಮಾಡಿತ್ತು. ಈ ಸದ್ದಿನ ಮಧ್ಯೆ ಜನರ ಕಿವಿಯನ್ನು ಅರಳುವಂತೆ ಮಾಡಿದ್ದು ಸುಮಲತಾ ಅಂಬರೀಶ್ ಅವರ ಸ್ವಾಭಿಮಾನಿ ಕಹಳೆಯ ಶಬ್ಧ. ಹೌದು ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರ ಅಕ್ಷರಶಃ ರಾಜಕೀಯ ರಣರಂಗವಾಗಿ ಬದಲಾಗಿತ್ತು. ಇದಕ್ಕೆ ಜೆಡಿಎಸ್ (JDS) ಹಾಗೂ ಕಾಂಗ್ರೆಸ್ (Congress) ಪಕ್ಷದ ಅಭ್ಯರ್ಥಿಯಾಗಿ ಅಂದಿನ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumarswamy) ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumarswamy) ಹಾಗೂ ಸ್ವಾಭಿಮಾನದ ಹೆಸರಿನಲ್ಲಿ ಸ್ಪರ್ಧೆ ಮಾಡಿದ್ದ ರೆಬಲ್ ಸ್ಟಾರ್ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್. ಇವರಿಬ್ಬರ ಸ್ಪರ್ಧೆ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಇಡೀ ದೇಶದಲ್ಲಿ ಆ ವೇಳೆ ಹೈವೋಲ್ಟೇಜ್ ಕ್ರಿಯೇಟ್ ಮಾಡಿದ ಕ್ಷೇತ್ರ ಅಂದ್ರೆ ಅದು ಮಂಡ್ಯ ಆಗಿತ್ತು. ಅಷ್ಟರ ಮಟ್ಟಿಗೆ ನಿಖಿಲ್ ಹಾಗೂ ಸುಮಲತಾ ಅಂಬರೀಶ್ ಅವರ ನಡುವೆ ಫೈಟ್ ನಡೆಯಿತು. ಇಡೀ ಸರ್ಕಾರ ಹಾಗೂ ಎಲ್ಲಾ ಶಾಸಕರು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡಿದ್ತು. ಆದ್ರೆ ಸುಮಲತಾ ಅಂಬರೀಶ್ ಅವರ ಸ್ವಾಭಿಮಾನದ ಕಹಳೆಗೆ ಜನರು ಉಘೇ ಉಘೇ ಎಂದ ಕಾರಣ ಸುಮಲತಾ ಅಂಬರೀಶ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲವನ್ನು ದಾಖಲಿಸಿದ್ದರು. ಈ ಚುನಾವಣೆಯ ಬಳಿಕ ಜೆಡಿಎಸ್ ಭದ್ರ ಕೋಟೆಯಾಗಿದ್ದ ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ದಳಪತಿಗಳ ವಿರುದ್ಧ ಗುಡುಗಲು ಸಹ ಶುರ ಮಾಡಿದ್ರು. ಇದನ್ನೂ ಓದಿ: ಬಿಜೆಪಿಯ ಆಪರೇಷನ್ ಓಲ್ಡ್ ಮೈಸೂರಿಗೆ ಸಂಸದೆ ಸುಮಲತಾ ಡಾಕ್ಟರ್ – ಡಿಕೆಶಿಗೆ ಟ್ರಬಲ್?
Advertisement
Advertisement
ಲೋಕಸಭಾ ಚುನಾವಣೆಯ ಮೂಲಕ ದಳಪತಿಗಳಿಗೆ ನಡುಕ ಹುಟ್ಟಿಸಿದ ಸುಮಲತಾ ಅಂಬರೀಶ್ ಇದೀಗ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸೂಚನೆಯನ್ನು ಸಹ ನೀಡಿದ್ದು ಈ ಮೂಲಕ ಜೆಡಿಎಸ್ ನಾಯಕರಿಗೆ ಮತ್ತೊಮ್ಮೆ ರಾಜಕೀಯದಲ್ಲಿ ಮಾಸ್ಟರ್ ಸ್ಟ್ರೋಕ್ ನೀಡಲು ಮುಂದಾಗಿದ್ದಾರೆ. ಇಷ್ಟು ದಿನ ನೀವು ರಾಜ್ಯ ರಾಜಕೀಯಕ್ಕೆ ಬರ್ತೀರಾ ಮೇಡಂ ಎಂದು ಸುಮಲತಾ ಅವರನ್ನು ಕೇಳಿದ್ರೆ, ಇಲ್ಲ ನಾನು ಎಂಪಿ ಆಗಿಯೇ ಇರ್ತೀನಿ ಎಂದು ಹೇಳ್ತಾ ಇದ್ರು. ಆದ್ರೆ ಇದೀಗ ನಾನು ರಾಜಕೀಯಕ್ಕೆ ಬರುವ ನಿರ್ಧಾರವನ್ನು ಮಾಡಿ ಇರಲಿಲ್ಲ. ಇದೀಗ ರಾಜಕೀಯಕ್ಕೆ ಬಂದು ಮಂಡ್ಯ ಜನರ ಆಶೀರ್ವಾದದಿಂದ ಗೆದ್ದು ಎಂಪಿಯಾಗಿದ್ದೇನೆ. ಯಾವುದನ್ನು ಮೊದಲೇ ನಿರ್ಧಾರ ಮಾಡಲು ಆಗಲ್ಲ. ಎಂಎಲ್‍ಎ ಚುನಾವಣೆ ಇನ್ನೂ ದೂರ ಇದೆ. ದೇವರ ಆಶೀರ್ವಾದ ಇದ್ರೆ ಏನು ಬೇಕಾದ್ರು ಆಗಬಹುದು. ಮುಂದೆ ನಾನು ಸಂದರ್ಭಕ್ಕೆ ಅನುಗುಣವಾಗಿ ನಾನು ನಿರ್ಧಾರ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಲ್ಲದೇ, ಮಂಡ್ಯದ ಏಳು ಕ್ಷೇತ್ರಗಳು ನನ್ನದೇ ಏನು ಬೇಕಾದ್ರು ಆಗಬಹುದು ಎನ್ನುವ ಮೂಲಕ ಮುಂಬರುವ ಎಂಎಲ್‍ಎ ಚುನಾವಣೆಯಲ್ಲಿ ಸ್ಪರ್ಧೆಯ ಸೂಚನೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ನಮೋ ಅಶ್ವಮೇಧಯಾಗ ಶುರು – ಯುವ ಮತದಾರರೇ ಮೋದಿ ಟಾರ್ಗೆಟ್
Advertisement
ಒಂದು ಕಡೆ ತಾವು ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂಬ ಸಣ್ಣ ಹಿಂಟ್ ಕೊಟ್ರೆ, ಇನ್ನೊಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ (D.K Shivakumar) ಸಹ ತಿರುಗೇಟು ಕೊಟ್ಟಿದ್ದಾರೆ. ಸುಮಲತಾ ಅಂಬರೀಶ್ ಬಿಜೆಪಿ ಪಕ್ಷದ ಅಸೋಸಿಯೇಟ್ ಮೆಂಬರ್ ಎಂಬ ಡಿಕೆಶಿ ಹೇಳಿಕೆಗೆ ಸರಿಯಾಗಿಯೇ ಟಾಂಗ್ ಕೊಟ್ಟಿದ್ದಾರೆ. ನಾನು ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ. ಮೊದಲು ಕಾಂಗ್ರೆಸ್‍ನಿಂದಲೇ ಟಿಕೆಟ್ ಕೇಳಿದ್ದೆ, ಆಗ ಡಿ.ಕೆ.ಶಿವಕುಮಾರ್ ಅವರೇ ಟಿಕೆಟ್ ಕೊಡಲು ಆಗಲ್ಲ ಎಂದಿದ್ದು. ಪಕ್ಷೇತರವಾಗಿ ಗೆದ್ದ ಶರತ್ ಬಚ್ಚೇಗೌಡ ಅವರಿಗೆ ಅಭಿನಂದನೆ ಸಲ್ಲಿಸಿದ್ರು. ಆದ್ರೆ ನಾನು ಗೆದ್ದ ಬಳಿಕ ನಿಮ್ಮ ನಡೆ ಏನು ಎಂದು ಶಿವಕುಮಾರ್ ಅವರು ಕೇಳಲಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ನನ್ನ ಕೇಳಬಹುದಾಗಿತ್ತು. ಆದ್ರೆ ಇದ್ಯಾವುದನ್ನು ಕೇಳದೇ ನನ್ನ ಬಿಜೆಪಿಯ ಅಸೋಸಿಯೇಟ್ ಮೆಂಬರ್ ಎನ್ನುವುದು ಸರಿಯಲ್ಲ. ಇದನ್ನು ನೋಡಿದ್ರೆ ಡಿ.ಕೆ.ಶಿವಕುಮಾರ್ ಮಂಡ್ಯದಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಸುಮಲತಾ ಡಿಕೆಶಿ ಮೇಲೆಯೇ ಆರೋಪ ಮಾಡಿದ್ದಾರೆ.
ಒಟ್ಟಾರೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸುಮಲತಾ ಅಂಬರೀಶ್ ಇದೀಗ ರಾಜ್ಯ ರಾಜಕಾರಣಕ್ಕೆ ಇಳಿಯುವ ತಯಾರಿಯಲ್ಲಿದ್ದಾರೆ. ಒಂದು ವೇಳೆ ಸುಮಲತಾ ಅಂಬರೀಶ್ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರು ಸಹ ಯಾವ ಕ್ಷೇತ್ರದಿಂದ, ಯಾವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ ಅಥವಾ ಪಕ್ಷೇತರವಾಗಿಯೇ ಸ್ಪರ್ಧೆ ಮಾಡುತ್ತಾರಾ ಎಂಬ ಯಕ್ಷ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಹುಟ್ಟುಹಾಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k