ಮಂಡ್ಯ: ನನಗೆ ರಾಜಕೀಯ ಅನಿವಾರ್ಯ ಅಲ್ಲ, ಆಕಸ್ಮಿಕ ಎಂದು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ ಸ್ವಾರ್ಥ ಇದ್ದಿದ್ರೆ, ಮಗನ ಭವಿಷ್ಯ ಬೇಕು ಎಂದಿದ್ರೆ ಏನು ಬೇಕಾದ್ರು ಮಾಡಬಹುದಿತ್ತು. ಎಂಎಲ್‍ಸಿ ಪೋಸ್ಟ್ ಬಂದಿತ್ತು. ಬೆಂಗಳೂರಿನಲ್ಲಿ ಒಂದು ಕ್ಷೇತ್ರದಲ್ಲಿ ನಿಲ್ಲಿ ಎಂದಿದ್ರು. ಮಂಡ್ಯಗೆ ಬಂದು ಸರ್ಕಾರದ ವಿರುದ್ಧ ಸಿಎಂ ಮಗನ ಎದುರು ನಿಂತೆ. ಸ್ವಾರ್ಥ ಇದ್ದಿದ್ರೆ ನಾನು ಮಂಡ್ಯದಲ್ಲಿ ನಿಲ್ಲಬೇಕಿರಲಿಲ್ಲ. ನನ್ನ ಬೆಂಬಲಿಗರ ಭವಿಷ್ಯವನ್ನು ಏನು ನಾನು ನೋಡಿಲ್ಲ ಎಂದರು.
Advertisement
Advertisement
ಮಂಡ್ಯ ಜನ ಅಂಬರೀಶ್ (Ambareesh) ಅವರಿಗೆ ಪ್ರೀತಿ ಕೊಟ್ಟರು. ಅವರು ಹೋಗುವಾಗ ಮಹಾರಾಜನ ರೀತಿ ಕಳಿಸಿದ್ರಿ. ಈ ಪ್ರೀತಿಗಾಗಿ ನಾನು ಚುನಾವಣೆಗೆ ನಿಂತೆ. ಮಂಡ್ಯ ಜನ ನನ್ನ ಪರ ನಿಂತರು. ಚಿತ್ರರಂಗ, ಅಂಬರೀಶ್ ಅಭಿಮಾನಿಗಳು, ನನ್ನ ಜನ ಬೆಂಬಲಕ್ಕೆ ನಿಂತರು. ನಾನು ಯಾರು ಅಂಬರೀಶ್ ಯಾರು ಎಂದು ಇಂಡಿಯಾಗೆ ಹಲವು ವರ್ಷದಿಂದ ಗೊತ್ತು. ಈಗ ಅಲ್ಲ ನಾವು ಸಿನಿಮಾದಲ್ಲಿ ಇದ್ದಾಗಿನಿಂದ ನಮ್ಮ ಬ್ಯಾನರ್ ಹಾಕಿದ್ದಾರೆ ಎಂದು ಹೇಳಿದರು.
Advertisement
ಜನ ದುಡ್ಡು ಕೊಟ್ಟು ನಮ್ಮ ಸಿನಿಮಾ ನೋಡಿದ್ದಾರೆ. ಈಗ ಬೇರೆ ದಾರಿ ತುಳಿಯುವ ಅವಶ್ಯಕತೆ ಇಲ್ಲ. ಯಾವುದು ಅನಿವಾರ್ಯ ಅಲ್ಲ ಯಾವುದು ಶಾಶ್ವತ ಅಲ್ಲ. ನಾನು ರಾಜಕೀಯ ಪ್ರವೇಶ ಮಾಡಿ 4 ವರ್ಷ ಕಳೆದಿದೆ. ನನಗೆ ರಾಜಕೀಯ ಅನಿವಾರ್ಯ ಅಲ್ಲ ಆಕಸ್ಮಿಕ. ನನ್ನ ಸ್ವಾರ್ಥಕ್ಕೆ ರಾಜಕೀಯ ಪ್ರವೇಶ ಆಗಲಿಲ್ಲ. ಜನರ ಒತ್ತಾಯಕ್ಕೆ ಮಣಿದು ರಾಜಕೀಯಕ್ಕೆ ಬರಬೇಕಾಯ್ತು ಎಂದರು.
Advertisement
ನನ್ನ, ಮಗನ ಭವಿಷ್ಯ ಯೋಚಿಸಿದ್ದರೆ ನನ್ನ ಹೆಜ್ಜೆ ಬೇರೆ ಆಗಿರುತ್ತಿತ್ತು. ಅಂಬರೀಶ್ ಅವರಿಗಿದ್ದ ಪ್ರಭಾವ ಬಳಸಿ ನಾನು ಅಧಿಕಾರ ಪಡೆಯಬಹುದಿತ್ತು. ಆದರೆ ನಾನು ಸ್ವಾರ್ಥಕ್ಕೆ ರಾಜಕಾರಣ ಮಾಡಿಲ್ಲ. ಸರ್ಕಾರದ ಎದುರಿಸಿ ನಾನು ಚುನಾವಣೆಗೆ ನಿಂತೆ. ನನಗೆ ಮುಂದೆ ಏನಾಗುತ್ತೆ ಅನ್ನೋ ಯೋಚನೆ ಇರಲಿಲ್ಲ. ಜನರಿಗಾಗಿ ರಾಜಕೀಯಕ್ಕೆ ಬಂದೆ. ಜನರು ತೋರಿದ ಅಭಿಮಾನ ಪ್ರೀತಿಗೆ ಬೆಲೆ ಕೊಡದಿದ್ದರೆ ಮನುಷ್ಯತ್ವ ಇಲ್ಲದಂತಾಗುತ್ತಿತ್ತು ಎಂದು ತಿಳಿಸಿದರು.
ಅಂಬರೀಶ್ ಅಭಿಮಾನಿಗಳು, ಮಂಡ್ಯ ಜನರಿಗಾಗಿ ಹೋರಾಟ ಮಾಡಿದೆ. ನನಗೆ ಇದ್ಯಾವುದು ಬೇಡ ಎಂದಿದ್ದರೆ ನನಗೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ನಮ್ಮ ಬ್ಯಾನರ್, ಹೋರ್ಡಿಂಗ್ ಚಿಕ್ಕ ವಯಸ್ಸಿನಿಂದ ಹಾಕುತ್ತಿದ್ದಾರೆ. ನಾನ್ಯಾರು ಅಂಬರೀಶ್ ಯಾರು 40 ವರ್ಷದಿಂದ ಗೊತ್ತಿದೆ. ನನಗೆ ಯಾವದನ್ನು ಹುಡುಕಿಕೊಂಡು ಹೋಗುವ ಅವಶ್ಯಕತೆ ಇಲ್ಲ. ಜನ ನನ್ನ ಮೇಲೆ ನಂಬಿಕೆ ಇಟ್ಟಿದ್ರು. ಅಂಬರೀಶ್ ಅಣ್ಣನ ದಶಕಗಳ ಜನಸೇವೆ ಮುಂದುವರೆಸಬೇಕು ಎಂದು ನನಗೆ ಜನ ಬೆಂಬಲಿಸಿದ್ರು. ಚುನಾವಣೆಯಲ್ಲಿ ಮಾತ್ರ ನನಗೆ ಟಾರ್ಗೆಟ್ ಮಾಡಿದ್ರು ಎಂದು ಹೇಳಿದರು.