ಮೈಸೂರು: ಚಾಮರಾಜನಗರದ ಕಿಚ್‍ಗುತ್ ಮಾರಮ್ಮ ದೇವಸ್ಥಾನದ ಪ್ರಸಾದದಲ್ಲಿ ವಿಷ ಬೆರೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಭಟ್ಟ ಪುಟ್ಟಸ್ವಾಮಿ ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಘಟನೆ ಸಂಬಂಧ ಪುಟ್ಟಸ್ವಾಮಿ ಈಗಾಗಲೇ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶೀಘ್ರವೇ ಚಾಮರಾಜನಗರ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆಯಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
Advertisement
Advertisement
ಘಟನೆಯ ಬಳಿಕ ಯಾರಿಗೂ ಅನುಮಾನ ಬಾರದಿರಲಿ ಎಂದು ತನ್ನ ಮಗಳಿಗೂ ವಿಷ ಹಾಕಿ ಪುಟ್ಟಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾನೋ ಎಂಬ ಅನುಮಾನವೊಂದು ಮೂಡಿದೆ. ಯಾಕಂದ್ರೆ ತಾನು ಪ್ರಸಾದ ತಿಂದಿದ್ದೇನೆ ಎಂದು ಆಸ್ಪತ್ರೆಯಲ್ಲಿ ಪುಟ್ಟಸ್ವಾಮಿ ಹೈಡ್ರಾಮಾ ಮಾಡಿದ್ದಾನೆ. ಹೀಗಾಗಿ ಪೊಲೀಸರು ಆಸ್ಪತ್ರೆಯ ವೈದ್ಯರ ಬಳಿ ಪುಟ್ಟಸ್ವಾಮಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ವೇಳೆ ವೈದ್ಯರು ಪುಟ್ಟಸ್ವಾಮಿ ಸಂಪೂರ್ಣ ಆರೋಗ್ಯವಾಗಿದ್ದಾನೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯವಾಗಿರುವ ಕಾರಣ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
Advertisement
ಪುಟ್ಟಸ್ವಾಮಿ ಹೇಳಿದ್ದೇನು..?
ಮಾರಮ್ಮನ ಮೇಲಾಣೆ…ಮಾದಪ್ಪನ ಮೇಲಾಣೆ.. ಅಡುಗೆಯಲ್ಲಿ ನಾನು ವಿಷ ಹಾಕಿಲ್ಲ. ನಾನು 2 ಸಾವಿರ ಸಂಬಳ ಕ್ಕೆ ಕೆಲಸಕ್ಕೆ ಹೋದವನು. ನಾನ್ಯಾಕೆ ಇಂತಹ ಕೆಲಸ ಮಾಡಲಿ. ನನಗೆ ಅಂಬಿಕಾ ಆಗಲಿ, ಅಂಬಿಕಾ ಪತಿಯಾಗಲಿ ಯಾರು ಅಷ್ಟು ಪರಿಚಯವಿಲ್ಲ. ಸಾಲೂರು ಬುದ್ಧಿಯನ್ನು ಇತ್ತೀಚೆಗೆ ನೋಡಿಯೇ ಇಲ್ಲ. ನನ್ನ ಮೇಲೆ ಅನುಮಾನ ಪಡಬೇಡಿ. ಯಾರೇ ತಪ್ಪು ಮಾಡಿದ್ದರು ಶಿಕ್ಷೆಯಾಗಲಿ. ನಾನೇ ತಪ್ಪು ಮಾಡಿದ್ದೇನೆ ಅಂದ್ರೂ ಶಿಕ್ಷೆ ಕೊಡಿ. ಆದರೆ ನಾನಂತೂ ವಿಷ ಹಾಕಿಲ್ಲ. ನನ್ನ ಮಗಳು ಅಂಗವಿಕಲೆ. ನನ್ನ ಒಬ್ಬಳು ಮಗಳಿಗೆ ಕಾಲು ಬರುತ್ತಿರಲಿಲ್ಲ. ನನಗೆ ಮೂವರು ಮಕ್ಕಳಿದ್ದಾರೆ ಎಂದು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ. ಇದನ್ನೂ ಓದಿ: ಸುಳ್ವಾಡಿ ದುರಂತ- ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದ ತಂದೆಯ ಕಣ್ಣೀರ ಕಥೆ ಓದಿ
Advertisement
ಅಂಗವಿಕಲ ಮಗ್ಳನ್ನೇ ಕೊಲೆಗೈದ್ನಾ..?
ಪುಟ್ಟಸ್ವಾಮಿ ಸುಳ್ವಾಡಿಯ ಮಾರಮ್ಮನ ದೇವಾಸ್ವಾನದಲ್ಲಿ ರೈಸ್‍ಬತ್ ಪ್ರಸಾದ ತಯಾರಿಸಿದ್ದನು. ಈ ಪ್ರಸಾದ ತಿಂದು ಆತನ 12 ವರ್ಷದ ಮಗಳು ಅನಿತಾ ಮೃತಪಟ್ಟಿದ್ದಳು. ಆದ್ರೆ ವಿಷ ಹಾಕಿದ ವಿಷಯ ತಿಳಿಯಬಾರದು ಎಂದು ಪುಟ್ಟಸ್ವಾಮಿ ತಾನೂ ಪ್ರಸಾದ ತಿಂದಿದ್ದಾನೆ. ಬಳಿಕ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವ ನಾಟಕವಾಡಿದ್ದಾನೆ ಅನ್ನೋ ಅನುಮಾನ ಮೂಡಿದೆ.
ಒಟ್ಟಿನಲ್ಲಿ ಅಂಗವಿಕಲೆ ಮಗಳು ಪುಟ್ಟಸ್ವಾಮಿಗೆ ಭಾರವಾಗಿತ್ತು. ಹೀಗಾಗಿ ಅಡುಗೆ ಭಟ್ಟನೇ ವಿಷ ಹಾಕಿದ್ದಾನೆ ಅನ್ನೋ ಅನುಮಾನ ಪೊಲೀಸರಲ್ಲಿ ಬಲವಾಗಿ ಮೂಡಿದೆ.
https://www.youtube.com/watch?v=gE3_7jm0p4M
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv