ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಇಂದು ಬ್ರೂನೈ (Brunei) ದೇಶಕ್ಕೆ ಭೇಟಿ ನೀಡಲಿದ್ದಾರೆ. ಬ್ರೂನಿ ದೇಶದ ಸುಲ್ತಾನ, 7 ಸಾವಿರ ಕಾರುಗಳ ಒಡೆಯ ಹಾಜಿ ಹಸನಲ್ ಬೊಲ್ಕಿಯಾ (Hassanal Bolkiah) ಅವರು ಮೋದಿಯವರನ್ನು ಸ್ವಾಗತಿಸಲಿದ್ದಾರೆ.
ಸುಲ್ತಾನ್ ಹಸನಲ್ ಬೊಲ್ಕಿಯಾ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಬ್ರೂನೈ ದೇಶಕ್ಕೆ ಭೇಟಿ ನೀಡಲಿದ್ದಾರೆ. ಭಾರತದ ಇತಿಹಾಸದಲ್ಲಿ ಏಷ್ಯಾದ (Asia) ಆಗ್ನೇಯ ದೇಶಕ್ಕೆ ಭೇಟಿ ನೀಡುವ ಪ್ರಧಾನಿಯಲ್ಲಿ ಮೋದಿ ಮೊದಲಿಗರಾಗಲಿದ್ದಾರೆ. ಬ್ರೂನಿ ದೇಶಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಲಿರುವ ಅವರು ಉಭಯ ದೇಶಗಳ 40 ವರ್ಷಗಳ ರಾಜತಾಂತ್ರಿಕತೆ ಬಗ್ಗೆ ಚರ್ಚಿಸಲಿದ್ದಾರೆ. ಇದನ್ನೂ ಓದಿ: ಛತ್ತೀಸ್ಗಢದಲ್ಲಿ ಎನ್ಕೌಂಟರ್ – 9 ನಕ್ಸಲರನ್ನು ಬೇಟೆಯಾಡಿದ ಭದ್ರತಾ ಪಡೆ
Advertisement
Advertisement
ಹಸನಲ್ ಬೊಲ್ಕಿಯಾ ಅವರು ಇಂಗ್ಲೆಂಡ್ನ ರಾಣಿ 2ನೇ ಎಲಿಜಬೆತ್ ಅವರ ನಂತರ ವಿಶ್ವದಲ್ಲಿಯೇ ಅತೀ ಹೆಚ್ಚು ಆಳ್ವಿಕೆ ಮಾಡಿದ ದೊರೆಯಾಗಿದ್ದಾರೆ. ಅವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಖಾಸಗಿ ಕಾರುಗಳನ್ನು ಹೊಂದಿದವರಾಗಿದ್ದು, ಆ ಎಲ್ಲ ಕಾರುಗಳ ಒಟ್ಟು ಬೆಲೆ 4,197 ಕೋಟಿ (5 ಬಿಲಿಯನ್ ಡಾಲರ್) ಇದೆ. ಇದನ್ನೂ ಓದಿ: ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ | ಸೊಳ್ಳೆ ಉತ್ಪತ್ತಿಯಾದ್ರೆ ಬೀಳುತ್ತೆ ದಂಡ – ಮನೆ, ಹೋಟೆಲ್ ಮಾಲೀಕರಿಗೆ ಎಷ್ಟು?
Advertisement
ಬೊಲ್ಕಿಯಾ ಅವರ ಹತ್ತಿರ 7 ಸಾವಿರಕ್ಕಿಂತ ಹೆಚ್ಚು ಐಷರಾಮಿ ಕಾರುಗಳಿದ್ದು, ಅದರಲ್ಲಿ 6 ಸಾವಿರ ಕಾರುಗಳು ರೋಲ್ಸ್ ರಾಯ್ಸ್ ಕಾರುಗಳಾಗಿವೆ. ಇದು ಅಧಿಕೃತವಾಗಿ ಗಿನ್ನಿಸ್ ದಾಖಲೆ ಸೇರಿದೆ. ಅವರು 450 ಫೇರಾರಿ ಮತ್ತು 380 ಬೆಂಟ್ಲಿ ಹಾಗೆಯೇ ಲ್ಯಾಂಬೋರ್ಗಿನಿ, ಜಾಗ್ವಾರ್ಸ್, ಬಿಎಂಡಬ್ಯೂ, ಪೊರ್ಷಸ್, ಮೇಬ್ಯಾಕ್ಸ್, ಮೆಕ್ಲಾರೆನ್ಸ್ ಒಳಗೊಂಡಂತೆ ಹಲವಾರು ಕಾರುಗಳು ಹೊಂದಿದ್ದಾರೆ. ಅವರಲ್ಲಿದ್ದ ಬೆಂಟ್ಲಿ ಡೊಮಿನರ್ ಎಸ್ಯುವಿ ಎನ್ನುವ ಒಂದೇ ಕಾರು ಸುಮಾರು 67 ಕೋಟಿ (80 ಮಿಲಿಯನ್ ಡಾಲರ್) ಬೆಲೆಯುಳ್ಳದ್ದಾಗಿದೆ. 2007ರಲ್ಲಿ ತಮ್ಮ ಮಗಳ ಮದುವೆಯಲ್ಲಿ ರೋಲ್ಸ್ ರಾಯ್ಸ್ ಕಾರ್ ಒಂದಕ್ಕೆ ಸಂಪೂರ್ಣವಾಗಿ ಚಿನ್ನದ ಲೇಪನ ಮಾಡಿದ್ದರು. ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ಟಿವಿಗಾಗಿ ದರ್ಶನ್ ಮೊರೆ
Advertisement
ಸುಲ್ತಾನರ ವಾಸಸ್ಥಾನದ ಅರಮನೆ ನೈಸರ್ಗಿಕದಿಂದ ಕೂಡಿದ ವಿಶ್ವದ ಅತೀ ದೊಡ್ಡ ಅರಮನೆ ಎಂದು ಗಿನ್ನಿಸ್ ದಾಖಲೆ ಮಾಡಿದೆ. ಅವರ ವಾಸಸ್ಥಾನದ ಅರಮನೆಯಲ್ಲಿ 2 ಮಿಲಿಯನ್ ಚದರ ಅಡಿ ಪ್ರದೇಶದಲ್ಲಿ 22 ಕ್ಯಾರೆಟ್ ಚಿನ್ನವನ್ನು ಲೇಪಿಸಲಾಗಿದೆ. ಅರಮನೆಯು 5 ಸ್ನಾನದ ಕೊಳ, 1,700 ಮಲಗುವ ಕೋಣೆಗಳು, 257 ಶೌಚಾಲಯ ಮತ್ತು 110 ಗ್ಯಾರೇಜ್ಗಳನ್ನು ಹೊಂದಿದೆ.
ಸುಲ್ತಾನ್ ತನ್ನ ಸ್ವಂತದ ಖಾಸಗಿ ಮೃಗಾಲಯ ಹೊಂದಿದ್ದಾರೆ. ಅದರಲ್ಲಿ 30 ಬಂಗಾಳದ ಹುಲಿಗಳು, ವಿವಿಧ ಬಗೆಯ ಹಕ್ಕಿಗಳಿವೆ. ಇವರು 747 ಬೋಯಿಂಗ್ ವಿಮಾನಗಳು ಕೂಡ ಹೊಂದಿದ್ದಾರೆ. ಇದನ್ನೂ ಓದಿ: ದರ್ಶನ್ ತಪ್ಪು ಮಾಡಿದ್ದಕ್ಕೆ ಜೈಲಿಗೆ ಹೋಗಿದ್ದಾರೆ: ಜಮೀರ್