ಬೆಂಗಳೂರು: ಸರ್ಕಾರ ನಿಗದಿ ಮಾಡಿರೋ ಸಮಯದೊಳಗೆ ರಾಜ್ಯ ಶಿಕ್ಷಣ ನೀತಿ (State Education Policy) ವರದಿ ಸರ್ಕಾರಕ್ಕೆ ಸಲ್ಲಿಕೆ ಮಾಡೋದಾಗಿ ಸರ್ಕಾರ ರಚನೆ ಮಾಡಿರೋ ರಾಜ್ಯ ಶಿಕ್ಷಣ ನೀತಿ ಕಮಿಷನ್ ಅಧ್ಯಕ್ಷ ಸುಖ್ ದೇವ್ ತೋರಟ್ (Sukhadeo Thorat) ತಿಳಿಸಿದ್ದಾರೆ.
ರಾಜ್ಯ ಶಿಕ್ಷಣ ನೀತಿ ರಚನೆ ಸಂಬಂಧ ಸರ್ಕಾರ ರಚನೆ ಮಾಡಿದ್ದ ಕಮಿಷನ್ ಇಂದು (ಶುಕ್ರವಾರ) ಮೊದಲ ಸಭೆ ನಡೆಸಿತು. ಸಭೆ ಬಳಿಕ ಮಾತಾಡಿದ ಕಮಿಷನ್ ಅಧ್ಯಕ್ಷ ಸುಖ್ ದೇವ್ ತೋರಟ್, ಕಮಿಷನ್‌ಗೆ ಸರ್ಕಾರ ಸಂಪೂರ್ಣ ಅಧಿಕಾರ ಕೊಟ್ಟಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ನೀತಿ ರಚನೆಗೆ ಸರ್ಕಾರ ಕಮಿಷನ್ ರಚನೆ ಮಾಡಿದೆ. ಮೊದಲ ಸಭೆಯಲ್ಲಿ ಸದ್ಯ ರಾಜ್ಯದಲ್ಲಿ ಇರುವ ವ್ಯವಸ್ಥೆ ಸ್ಟಡಿ ಮಾಡಲಾಗಿದೆ. ಶೈಕ್ಷಣಿಕ ವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಬೇಕಾದ ಪ್ರಾಥಮಿಕ ಸಭೆ ಮಾಡಿದ್ದೇವೆ. ಸದ್ಯ ರಾಜ್ಯದಲ್ಲಿ ಇರೋ ಶಿಕ್ಷಣ ನೀತಿ ಬಗ್ಗೆ ಪರಾಮರ್ಶೆ ಮಾಡಿದ್ದೇವೆ. ಗುಣಮಟ್ಟದ ಶಿಕ್ಷಣದ ಜೊತೆ ವ್ಯಾಲ್ಯುಬೇಸ್ ಶಿಕ್ಷಣ ನೀಡುವುದು ನಮ್ಮ ಮೊದಲ ಆದ್ಯತೆ ಆಗಿರಲಿದೆ. ವರದಿ ಸಿದ್ದತೆ ಈಗ ಪ್ರಾರಂಭ ಮಾಡಲಾಗಿದೆ. 6 ತಿಂಗಳಲ್ಲಿ ಸರ್ಕಾರಕ್ಕೆ ನಮ್ಮ ಕಮಿಷನ್ ವರದಿ ನೀಡಲಿದೆ. ವರದಿ ಜಾರಿ ಮಾಡೋದು ಸರ್ಕಾರಕ್ಕೆ ಬಿಟ್ಟ ನಿರ್ಧಾರ ಎಂದರು. ಇದನ್ನೂ ಓದಿ: ಮುಂದಿನ 23 ದಿನ ತಮಿಳುನಾಡಿಗೆ ನಿತ್ಯ 2,600 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಆದೇಶ
Advertisement
Advertisement
ರಾಜ್ಯದಲ್ಲಿ ಈಗ ಇರುವ ಪಾಲಿಸಿಗಳ ರಿವ್ಯೂ ಮಾಡ್ತೀವಿ. NEP ಸೇರಿದಂತೆ ಹಲವು ಎಜುಕೇಶನ್ ಪಾಲಿಸಿ ರಿವ್ಯೂ ಮಾಡ್ತೀವಿ. ರಿವ್ಯೂ ಮಾಡಿದ ಬಳಿಕ ಚರ್ಚೆ ಮಾಡಿ ಉತ್ತಮ ಪಾಲಿಸಿ ರೆಡಿ ಮಾಡುವ ಕೆಲಸ ಮಾಡ್ತೀವಿ. ಶೈಕ್ಷಣಿಕ ವ್ಯವಸ್ಥೆಗೆ ಅನುಕೂಲವಾಗಿ ಇರೋ ಶಾಲೆಗಳು, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಆಲ್ ಇಂಡಿಯಾ ಸರ್ವೆ, ನ್ಯಾಷನಲ್ ಸ್ಯಾಂಪಲ್ ಸರ್ವೆ, ನ್ಯಾಕ್ ರಿಪೋರ್ಟ್, ಎಲ್ಲರದ ಅಧ್ಯಯನ ಮಾಡಲಿದೆ. ವಿವಿಧ ವರದಿಯಲ್ಲಿರೋ ಅಂಕಿಅಂಶಗಳನ್ನು ಪಡೆದ ಶಿಕ್ಷಣ ನೀತಿ ಸಿದ್ದ ಮಾಡ್ತೀವಿ. ಕಮಿಷನ್‌ಗೆ 6 ತಿಂಗಳು ಸಾಕಾಗದೇ ಹೋದರೆ ಸಮಯ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಮಾಡ್ತೀವಿ ಎಂದು ತಿಳಿಸಿದರು.
Advertisement
ವರದಿ ಸಿದ್ದ ಮಾಡೋ ಮುನ್ನ ಎಲ್ಲಾ ವಿವಿಯ ವಿಸಿಗಳು, ಶಿಕ್ಷಕರು, ವಿದ್ಯಾರ್ಥಿಗಳು, NGOಗಳು, ಶಿಕ್ಷಣ ಸಂಸ್ಥೆಗಳ ಜೊತೆ ಸಭೆಗಳನ್ನ ಮಾಡ್ತೀವಿ. ರಾಜ್ಯದ 4 ವಿಭಾಗವಾರು ಸಭೆ ಮಾಡ್ತೀವಿ. ಎಲ್ಲರ ಅಭಿಪ್ರಾಯ ಪಡೆದು ಪಾಲಿಸಿ ಸಿದ್ದತೆ ಕ್ರಮವಹಿಸುತ್ತೇವೆ. ಲಭ್ಯ ಇರುವ ಎಲ್ಲಾ ರಿಪೋರ್ಟ್‌ಗಳು, ಅಂಕಿಗಳು, ವಿವಿಧ ಪಾಲಿಸಿಗಳು ಎಲ್ಲವನ್ನು ಅಧ್ಯಯನ ಮಾಡಿ ಪಾಲಿಸಿ ಸಿದ್ದತೆ ಮಾಡ್ತೀವಿ. ಇದೊಂದು ಉತ್ತಮ ಪಾಲಿಸಿ ಆಗಲಿದೆ. ಶಾಶ್ವತವಾಗಿ ಕರ್ನಾಟಕ ಶಿಕ್ಷಣ ವ್ಯವಸ್ಥೆಯನ್ನ ಉತ್ತಮಗೊಳಿಸುವ ಪಾಲಿಸಿ ಇದಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಶೀಘ್ರವೇ ವಿಪಕ್ಷ ನಾಯಕನ ಆಯ್ಕೆ: ಯಡಿಯೂರಪ್ಪ
Advertisement
ಕರ್ನಾಟಕದಲ್ಲಿ ಇರೋ ಎಲ್ಲಾ ಶಾಲೆಗಳಿಗೆ ಈ ಪಾಲಿಸಿ ಮಾಡಲಿದ್ದೇವೆ. ಕರ್ನಾಟಕ ಸರ್ಕಾರ ಕೊಟ್ಟಿರೋ ಚೌಕಟ್ಟಿಲ್ಲಿ ಪಾಲಿಸಿ ಇರಲಿದೆ. ಇದೊಂದು ಸಮಗ್ರವಾದ ವರದಿ ಆಗಲಿದೆ. ಸಭೆಯಲ್ಲಿ ಹೇಗೆ ಪಾಲಿಸಿ ಮಾಡಬೇಕು, ಅದರ ರಚನೆ ಹೇಗೆ ಇರಬೇಕು ಅಂತ ಚರ್ಚೆ ಆಗಿದೆ. ಈಗ ಇರುವ ಪಾಲಿಸಿ ದಾಖಲೆಯಾಗಿ ಇಟ್ಟುಕೊಂಡು ಪಾಲಿಸಿ ರಚನೆಗೆ ನಿರ್ಧಾರ ಮಾಡಲಾಗಿದೆ. ಪಾಲಿಸಿ ರಚನೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಲು 9 ಉಪ ಸಮಿತಿ ಮಾಡಲಾಗಿದೆ. ಉಪ ಸಮಿತಿಗಳು ಒಂದೊಂದು ಕ್ಷೇತ್ರದಲ್ಲಿ ಪರಿಶೀಲನೆ ಮಾಡಿ ವರದಿಯನ್ನು ಕೊಡ್ತಾರೆ. ಅದರ ಆಧಾರದಲ್ಲಿ ಸಮಗ್ರ ವರದಿ ಸಿದ್ದ ಮಾಡ್ತೀವಿ ಅಂತ ತಿಳಿಸಿದರು.
Web Stories