ಸಾಲು ಸಾಲು ನಟಿಯರ ಆತ್ಮಹತ್ಯೆ : ಏನಾಗ್ತಿದೆ ಬಣ್ಣದ ಜಗತ್ತಿನೊಳಗೆ?

Public TV
2 Min Read
FotoJet 71

ಣ್ಣದ ಜಗತ್ತು ಆತ್ಮಹತ್ಯೆಯ ತವರುಮನೆ ಆಗುತ್ತಿದೆಯಾ ಎನ್ನುವ ಚರ್ಚೆ ಇದೀಗ ಶುರುವಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಆತ್ಮಹತ್ಯೆ ಕೇಸ್ ಗಳು ಕೇವಲ ಬಣ್ಣದ ಜಗತ್ತಿನಲ್ಲಿ ಆಗಿವೆ. ಅದರಲ್ಲೂ ಕಳೆದ ಇಪ್ಪತ್ತು ದಿನಗಳಲ್ಲಿ ಮೂವರು ನಟಿಯರು ನೇಣಿಗೆ ಶರಣಾಗುವ ಮೂಲಕ ಕಲರ್ ಫುಲ್ ಜಗತ್ತಿನೊಳಗಿನ ಕರಾಳಮುಖವನ್ನು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ : ತೆರೆಯ ಮೇಲೂ ನಿರ್ದೇಶಕನಾಗಿ ನಟಿಸಿದ ಯೋಗರಾಜ್ ಭಟ್

FotoJet 2 39

ಕೇರಳದ ಕೋಯಿಕ್ಕೋಡ್ ನಲ್ಲಿ ರೂಪದರ್ಶಿ ಶಹನಾ ಗುರುವಾರ ರಾತ್ರಿ 11.30ಕ್ಕೆ ಪರಂಬಿಲ್ ಬಜಾರ್ ನಲ್ಲಿರುವ ತಮ್ಮ ಅಪಾರ್ಟಮೆಂಟ್ ನಲ್ಲಿ ಕಿಟಕಿಯ ಗ್ರೀಲ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಪತಿಯೇ ಕಾರಣವೆಂದು ಕುಟುಂಬ ಆರೋಪಿಸಿತ್ತು. ಕೇವಲ ಇಪ್ಪತ್ತರ ವಯಸ್ಸಿನ ಈ ಹುಡುಗಿ ಕೌಟುಂಬಿಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸುದ್ದಿ ಆಯಿತು. ಇವರ ಪತಿಯನ್ನು ಪೊಲೀಸ್ ನವರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣ ನಡೆದದ್ದು 12 ಮೇ 2022ರಲ್ಲಿ.

FotoJet 1 41

ಬಂಗಾಳಿ ಮೂಲದ ನಟಿ ಪಲ್ಲವಿ ಡೇ ಕೂಡ ಕೋಲ್ಕತ್ತಾದ ಅಪಾರ್ಟ್ಮೆಂಟ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಳೆದ ವಾರವಷ್ಟೇ ಓದಿದ್ದೇವೆ. ಕೇವಲ 21 ವರ್ಷದ ಪಲ್ಲವಿ ಕೋಲ್ಕತ್ತಾದ ಅಪಾರ್ಟಮೆಂಟ್ ಬಾಡಿಗೆ ಪಡೆದು ಸ್ನೇಹಿತರೊಂದಿಗೆ ವಾಸಿವಿದ್ದರು. ಅವರ ಜೀವನದಲ್ಲಿ ಅದೇನು ಬಿರುಗಾಳಿ ಎದ್ದಿತ್ತೋ, ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗಲೂ ಅವರ ಸಾವಿಗೆ ಕಾರಣ ಸಿಕ್ಕಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

bidisha de majumdar 3 1

ಪಲ್ಲವಿ ಡೇ ಆತ್ಮಹತ್ಯೆಯ ಕೇಸು ಇನ್ನೂ ಮಾಸಿಲ್ಲ, ನಟಿ ಮತ್ತು ರೂಪದರ್ಶಿಯಾಗಿ  ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಬಿದಿಶಾ, ಕೋಲ್ಕತ್ತಾದ ದಮ್ ಡಮ್‍ ನಲ್ಲಿರುವ ತಮ್ಮ ಅಪಾರ್ಟಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಮಾಡೆಲ್ ಪಲ್ಲವಿ ಡೇ ಕೂಡ ಆತ್ಮಹತ್ಯೆಗೆ ಶರಣಾಗಿ ದಿಗ್ಭ್ರಮೆ ಮೂಡಿಸಿದ್ದರು. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

bidisha de majumdar 2 1

ಕೇವಲ 21 ವರ್ಷದ ಈ ನಟಿ ಕಮ್ ಮಾಡೆಲ್, ನಾಲ್ಕು ತಿಂಗಳ ಹಿಂದೆಯಷ್ಟೇ ಬಾಡಿಗೆ ಪಡೆದು, ಈ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದರೆ, ಇದೀಗ ಮೇ 25 ರಂದು ಬುಧವಾರ ಸಂಜೆ ನಾಗರ್ ಬಜಾರ್ ಪ್ರದೇಶದಲ್ಲಿರುವ ಆಕೆ ಫ್ಲಾಟ್ ನಿಂದ ಪೊಲೀಸರು ಶವವನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ಆಕೆ ಡೇಟ್ ನಲ್ಲಿದ್ದರು ಎನ್ನಲಾಗುತ್ತಿದೆ. ಇತ್ತೀಷೆಗಷ್ಟೇ ಅವರು ಗೆಳೆಯನಿಂದ ದೂರವಾಗಿ, ಆ ಖಿನ್ನತೆಯಲ್ಲಿ ಬಳಲುತ್ತಿದ್ದರು ಎನ್ನುವ ಸುದ್ದಿಯಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದ್ದು, ಪೊಲೀಸ್ ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ

Share This Article
Leave a Comment

Leave a Reply

Your email address will not be published. Required fields are marked *