ತಮ್ಮ ನಿರ್ದೇಶನದ ಬ್ಯುಸಿ ನಡುವೆಯೂ ಯೋಗರಾಜ್ ಭಟ್ ಆಗೊಂದು ಈಗೊಂದು ಸಿನಿಮಾದಲ್ಲಿ ನಟಿಸುತ್ತಲೇ ಇರುತ್ತಾರೆ. ಈ ಹಿಂದೆ ರಿಷಭ್ ಶೆಟ್ಟಿ ನಟನೆಯ ‘ಬೆಲ್ ಬಾಟಮ್’ ಸಿನಿಮಾದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರವೊಂದನ್ನು ಮಾಡಿದ್ದರು. ಆ ಪಾತ್ರದಲ್ಲಿ ನಿಜವಾಗಿಯೂ ಕಾಣಿಸಿಕೊಂಡಿದ್ದು ಯೋಗರಾಜ್ ಭಟ್ ಅವರಾ? ಎನ್ನುವಂತೆ ಅವರನ್ನು ಮೇಕ್ ಓವರ್ ಮಾಡಲಾಗಿತ್ತು. ಇದೀಗ ರಿಷಭ್ ಜತೆ ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಭಟ್. ಇದನ್ನೂ ಓದಿ : ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ
Advertisement
ರಿಷಭ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾದಲ್ಲಿ ಯೋಗರಾಜ್ ಭಟ್ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಆ ಪಾತ್ರವು ಸಿನಿಮಾ ನಿರ್ದೇಶಕನನ್ನು ಪ್ರತಿನಿಧಿಸಲಿದೆಯಂತೆ. ಆ ಪಾತ್ರವನ್ನು ಇವರು ನಿರ್ವಹಿಸಿದ್ದಾರೆ. ‘ಹರಿಕಥೆ ಅಲ್ಲ, ಗಿರಿಕಥೆ’ ಸಿನಿಮಾದ ಕಥೆಯೇ ವಿಶೇಷವಾಗಿದೆಯಂತೆ. ಇದು ಸಹಾಯಕ ನಿರ್ದೇಶಕರ ಬದುಕಿನ ಕುರಿತಾಗಿದ್ದು, ಅವರಿಗೆ ಸ್ಫೂರ್ತಿ ನೀಡುವಂತ ಪಾತ್ರದಲ್ಲಿ ಭಟ್ ನಟಿಸಿದ್ದಾರಂತೆ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು
Advertisement
Advertisement
ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ, ಇಬ್ಬರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ವಿಶೇಷ. ರಿಷಭ್ ಶೆಟ್ಟಿ ನಾಯಕನಾದರೆ, ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಮೂಡಿ ಬಂದಿವೆ. ಇದನ್ನೂ ಓದಿ : ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ
Advertisement
ರಿಷಭ್ ಮಾತ್ರವಲ್ಲ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಕೂಡ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾಂತೆ. ಇವರ ಮಗನ ಪಾತ್ರದಲ್ಲಿ ರಿಷಭ್ ನಟಿಸಿದ್ದಾರೆ. ತಪಸ್ವಿನಿ ಮತ್ತು ರಚನಾ ಇಂದರ್ ಇಬ್ಬರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.