ಹುಬ್ಬಳ್ಳಿ: ಇತ್ತೀಚೆಗೆ ಸ್ವಾಮೀಜಿಗಳ (Swamiji) ಮೇಲೆ ಹಲವಾರು ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಅನೇಕ ಸ್ವಾಮೀಜಿಗಳು ಆತ್ಮಹತ್ಯೆಯ (Suicide) ನಿರ್ಧಾರಕ್ಕೆ ಮುಂದಾಗುತ್ತಿದ್ದಾರೆ. ಇದು ಸರಿಯಲ್ಲ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ (Dayananda Swamiji) ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸನ್ಯಾಸಿಯಾದವರು ಸನ್ಯಾಸತ್ವದ ನೀತಿಗಳನ್ನು ಪಾಲಿಸಿ, ತನ್ನ ಸ್ವಾಮೀತ್ವ ಜೀವನ ನಡೆಸಬೇಕು. ಅದನ್ನು ಬಿಟ್ಟು ಆಸ್ತಿ, ಅಧಿಕಾರಕ್ಕಾಗಿ ಬಡೆದಾಡಿಕೊಂಡು ಸಮಾಜದ ಎದುರಿಗೆ ಬರುವುದು ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕರ್ನಾಟಕ ವಿವಿಯಲ್ಲಿದ್ದ ಉಗಾಂಡ ದೇಶದ ವಿದ್ಯಾರ್ಥಿ ನಾಪತ್ತೆ
Advertisement
&
Advertisement
ಮಠ ಮಾನ್ಯಗಳು ಸಮಾಜದಲ್ಲಿ ಕೆಟ್ಟ ವಿಚಾರಗಳನ್ನು ತಿದ್ದಿ, ಸುಸಂಸ್ಕೃತ ವಾತಾವರಣವನ್ನು ಕಟ್ಟಬೇಕು. ಆ ಕೆಲಸಗಳಲ್ಲಿ ಸ್ವಾಮೀಜಿಗಳು ಕಾರ್ಯೋನ್ಮುಖವಾಗಬೇಕು. ಅದನ್ನು ಬಿಟ್ಟು ಅವರ ಮೇಲೆ ಆರೋಪಗಳು ಬಂದಕೂಡಲೇ ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನ.11ಕ್ಕೆ ಬೆಂಗಳೂರಿಗೆ ಮೋದಿ – ಅಂದು ಏನೇನು ಕಾರ್ಯಕ್ರಮ ನಡೆಯುತ್ತೆ?