ಕಾರವಾರ: ಚಲಿಸುತ್ತಿದ್ದ ಲಾರಿಯೊಂದು ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂರ್ಟ್‌ನಿಂದ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹುಬ್ಬಳ್ಳಿ-ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ರ ಅರೆಬೈಲ್ ಘಟ್ಟದಲ್ಲಿ ನಡೆದಿದೆ.
ಬಾಗಲಕೋಟೆಯಿಂದ ಸಕ್ಕರೆ ತುಂಬಿಕೊಂಡು ಯಲ್ಲಾಪುರ ಮಾರ್ಗದಲ್ಲಿ ಕೇರಳಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಯಲ್ಲಾಪುರ ವ್ಯಾಪ್ತಿಯ ಅರೆಬೈಲ್ ಘಟ್ಟದಲ್ಲಿ ಇಂಜಿನ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಲಾರಿಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಲಾರಿಯಿಂದ ಜಿಗಿದು ಚಾಲಕ, ಕ್ಲೀನರ್ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸೌಧದಲ್ಲೇ ಪಾಕ್ ಜಿಂದಾಬಾದ್ ಘೋಷಣೆ – 9 ತಿಂಗಳು ಕಳೆದರೂ ಇನ್ನೂ ಚಾರ್ಜ್‌ಶೀಟ್ ಹಾಕಿಲ್ಲ
ಬೆಂಕಿ ಅವಘಡಕ್ಕೆ ಲಕ್ಷಾಂತರ ಮೌಲ್ಯದ ಸಕ್ಕರೆ ಹಾಗೂ ಲಾರಿ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆದ್ದಾರಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.