ಬೆಂಗಳೂರು: ಜನಸಾಮಾನ್ಯ ಪಾಲಿಗೆ ದರ ಏರಿಕೆಯಿಂದ ಕಹಿಯಾಗಿರುವ ಸಕ್ಕರೆ (Sugar), ಬೆಲ್ಲ (Jaggery) ಮತ್ತೆ ದರ ಏರಿಕೆ ಕಂಡಿದೆ.
ಬೆಲ್ಲದ ದರ ಕೆಜಿಗೆ ಏಕಾಏಕಿ 12 ರೂಪಾಯಿ ಹೆಚ್ಚಳವಾಗಿದೆ. ಕಳೆದ ಮೂರ್ನಾಲ್ಕು ದಿನದ ಹಿಂದೆ 66 ರೂಪಾಯಿ ಇದ್ದ ಕೆ.ಜಿ ಸಕ್ಕರೆ, ಇಂದು 70 ರೂ.ಗೆ ಏರಿಕೆಯಾಗಿದೆ. ಇದನ್ನೂ ಓದಿ: ಬರಗಾಲದ ಎಫೆಕ್ಟ್ – ಗಗನಕ್ಕೇರಿದ ‘ಸಕ್ಕರೆ ನಾಡಿನ’ ಬೆಲ್ಲದ ಬೆಲೆ
ಬೆಲ್ಲ ನಾಲ್ಕು ದಿನದ ಹಿಂದೆ ಕೆ.ಜಿಗೆ 68 ರೂ. ಇತ್ತು. ಇಂದು 12 ರೂ. ಏರಿಕೆ ಕಂಡಿದ್ದು, ಕೆಜಿಗೆ 80 ರೂ. ತಲುಪಿದೆ. ಸದ್ಯ ಎರಡರ ದರ ಏರಿಕೆ ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ.
ಸಿಹಿ ತಿನಿಸು ವ್ಯಾಪಾರಿಗಳು ಮತ್ತು ಟೀ-ಕಾಫಿ ವ್ಯಾಪಾರಿಗಳು ಸೇರಿದಂತೆ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದೆ. ಇದನ್ನೂ ಓದಿ: ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ಗೊತ್ತಿದೆ: ಡಿಸಿ ವಿರುದ್ಧ ರೇವಣ್ಣ ಗರಂ
