ಶಿವಮೊಗ್ಗ: ಪ್ರಿಯಾಂಕ್ ಖರ್ಗೆ ಅವರು ಇಲ್ಲದಿರುವ ವಿಷಯಗಳನ್ನು ಸೃಷ್ಟಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬಿಟ್ ಕಾಯಿನ್ ವಿಚಾರದ ಬಗ್ಗೆ ಸರಿಯಾದ ತನಿಖೆ ನಡೆದರೆ ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬರುತ್ತಾರೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ, ಜಿಲ್ಲೆಯ ಶಿಕಾರಿಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರು ಮೊದಲು ಸತ್ಯವನ್ನು ಅರ್ಥ ಮಾಡಿಕೊಂಡು ಮಾತನಾಡುವುದನ್ನು ಕಲಿಯಬೇಕು. ಕೇಂದ್ರ ಸರ್ಕಾರ ಈ ಬಗ್ಗೆ ಸ್ಪಷ್ಟಪಡಿಸಿದೆ ಎಂದರು. ಇದನ್ನೂ ಓದಿ: ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ
ದೇಶದಲ್ಲಿ ಬಿಟ್ ಕಾಯಿನ್ ಕಳವಿನ ಬಗ್ಗೆಯಾಗಲಿ, ದುರುಪಯೋಗವಾಗಿದೆ ಎಂಬ ಬಗ್ಗೆಯಾಗಲಿ ಒಂದೇ ಒಂದು ದೂರು ಆದರೂ ದಾಖಲಾಗಬೇಕಿತ್ತು. ಅಂತಹ ಯಾವುದೇ ದಾಖಲಾತಿಗಳೇ ಆಗಿಲ್ಲ. ಭಾರತದಲ್ಲಿ ಸರ್ಕಾರ ಯಾವುದೇ ವಿದೇಶಿ ತನಿಖಾ ತಂಡ ಬಂದು ತನಿಖೆ ನಡೆಸಲು ಅವಕಾಶವಿದೆ ಅಂತ ಸ್ಪಷ್ಟಪಡಿಸಿದೆ ಎಂದರು. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?