‘ದಿ ಕಾಶ್ಮೀರಿ ಫೈಲ್ಸ್’ ಖ್ಯಾತಿಯ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈಗ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಮೂಲಕ ಸದ್ದು ಮಾಡ್ತಿದ್ದಾರೆ. ರಿಲೀಸ್‌ಗೂ ಮುನ್ನವೇ ಸಿನಿಮಾ ಗಮನ ಸೆಳೆಯುತ್ತಿದೆ. ಸೆಲೆಬ್ರಿಟಿಗಳಿಗಾಗಿ ವಿಶೇಷ ಶೋವೊಂದನ್ನ ಬೆಂಗಳೂರಿನಲ್ಲಿ (ಸೆ.18) ಆಯೋಜಿಸಲಾಗಿತ್ತು. ಈ ವೇಳೆ ಸುಧಾ ಮೂರ್ತಿ ಅವರು ಆಗಮಿಸಿದ್ದರು. ದಿ ವ್ಯಾಕ್ಸಿನ್ ವಾರ್ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:‘ಆದಿಪುರುಷ್’ ಸೋಲಿನ ಬಳಿಕ ಮಾಸ್ ಆಗಿ ಎಂಟ್ರಿ ಕೊಟ್ರು ಕೃತಿ ಸನೋನ್

Thank you @SmtSudhaMurty ji for your inspiring words at the screening of #TheVaccineWar #ATrueStory. pic.twitter.com/xw5Jpa8iLL
— Vivek Ranjan Agnihotri (@vivekagnihotri) September 18, 2023
ಮಹಿಳಾ ವಿಜ್ಞಾನಿಗಳು ಕೊವಿಡ್ ಸಂದರ್ಭದಲ್ಲಿ ಲ್ಯಾಬ್‌ಗೆ ಬಂದು ಸಂಶೋಧನೆ ಮಾಡಿದ್ದರು. ಇದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕೊವಾಕ್ಸಿನ್ ಏನು ಎಂಬುದು ಸಾಮಾನ್ಯ ಜನರಿಗೆ ಅರ್ಥವಾಗುವುದಿಲ್ಲ. ಆದರೆ, ಹಿಂದಿರುವ ಶ್ರಮವನ್ನು ಈ ಸಿನಿಮಾ ತೋರಿಸುತ್ತದೆ. ಎಲ್ಲಾ ವಿಜ್ಞಾನಿಗಳು ಮಾಡಿದ್ದು ನಿಸ್ವಾರ್ಥದ ಕೆಲಸ. ಕೊವಿಡ್ ಅವಧಿಯಲ್ಲಿ ಅವರು ಗರಿಷ್ಟ ಸಮಯವನ್ನು ಔಷಧ ಕಂಡು ಹಿಡಿಯಲು ಕಳೆದರು. ಇದರಿಂದ ನಾವು ಸುಖವಾಗಿ ಬದುಕುವಂತಾಯಿತು ಎಂದು ಸುಧಾ ಮೂರ್ತಿ ಮಾತನಾಡಿದ್ದರು. ಕಲಾವಿದರ ನಟನೆ, ವಿವೇಕ್ ಅಗ್ನಿಹೋತ್ರಿ ನಿರ್ದೇಶನ ಮತ್ತು ತಂಡದ ಶ್ರಮಕ್ಕೆ ಭೇಷ್ ಎಂದಿದ್ದಾರೆ.
ಇದೇ ಸೆ.28ರಂದು ‘ದಿ ವ್ಯಾಕ್ಸಿನ್ ವಾರ್’ (The Vaacine War) ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದಲ್ಲಿ ಕಾಂತಾರ ನಟಿ ಸಪ್ತಮಿ ಗೌಡ, ಅನುಪಮ್ ಖೇರ್, ಪಲ್ಲವಿ ಜೋಶಿ, ರೈಮಾ ಸೇನ್ ಸೇರಿದಂತೆ ಹಲವರು ನಟಿಸಿದ್ದಾರೆ. ‘ದಿ ಕಾಶ್ಮೀರಿ ಫೈಲ್ಸ್’ ಸಕ್ಸಸ್ ನಂತರ ಈ ಸಿನಿಮಾಗೆ ವಿವೇಕ್ ಅಗ್ನಿಹೋತ್ರಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ರಿಲೀಸ್‌ಗೆ ಫ್ಯಾನ್ಸ್ ಕಾಯ್ತಿದ್ದಾರೆ.
‘ಕಾಂತಾರ’ (Kantara) ಸಿನಿಮಾದ ಸಕ್ಸಸ್ ನಂತರ ಸಪ್ತಮಿ ಗೌಡ (Saptami Gowda) ನಟನೆಯ ಮೊದಲ ಬಾಲಿವುಡ್ ಸಿನಿಮಾ ಇದಾಗಿದೆ.

