ಬೆಂಗಳೂರು: ದೇಶದ ಸೇವೆ ಮಾಡುವ ವೇಳೆ ತಮ್ಮ ಪ್ರಾಣ ಪಣಕ್ಕಿಟ್ಟು ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವಾಗಲು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿಯವರು ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದ್ದಾರೆ.
ಅ.15 ರಂದು ಮೈಸೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಗಧಿಯಾಗಿರುವ ಕಾರ್ಯಕ್ರಮದಲ್ಲಿ ಮೈಸೂರು, ಮಂಡ್ಯ, ಹಾಸನ ಜಿಲ್ಲೆಯ ಯೋಧರ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಲಾಗುತ್ತದೆ.
Advertisement
Advertisement
ಈ ಕುರಿತು ಸಂಸದ ಪ್ರತಾಪ್ ಸಿಂಹ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಸುಧಾ ಮೂರ್ತಿ ಅವರೊಂದಿನ ಮಾತುಕತೆಯ ಬಗ್ಗೆ ಬರೆದುಕೊಂಡಿದ್ದಾರೆ. ಒಮ್ಮೆ ಅವರೊಂದಿಗೆ ಫೋನಿನಲ್ಲಿ ಮಾತನಾಡುವ ವೇಳೆ ನಿನ್ನ ಕ್ಷೇತ್ರಕ್ಕೆ ನನ್ನಿಂದ ಯಾವ ಸಹಾಯ ಬೇಕು ಎಂದು ಕೇಳಿದ್ದರು. ಅದಕ್ಕೆ ನಾನು ಕೊಡಗಿನ ಪ್ರವಾಹ ಸಂತ್ರಸ್ತರಿಗೆ ಮನೆ, ಶಾಲೆಗಳಿಗೆ ಕಂಪ್ಯೂಟರ್ ಬೇಕು ಎಂದು ಹೇಳಿದ್ದೆ. ಅವರು ತಕ್ಷಣವೇ ಸಮ್ಮತಿ ಸೂಚಿಸಿದರು. ಅಲ್ಲದೇ ನಿಮ್ಮ ಕ್ಷೇತ್ರದ ಹುತಾತ್ಮ ಯೋಧರ ಕುಟುಂಬಕ್ಕೆ 10 ಲಕ್ಷ ರೂ. ನೀಡುವುದಾಗಿಯೂ ತಿಳಿಸಿದರು. ಇದಕ್ಕೆ ನನ್ನ ಕೇತ್ರದ ಆಚೆಗೂ ಹುತಾತ್ಮರಾಗಿರುವ ಯೋಧರ ಮಾಹಿತಿ ನೀಡುವುದಾಗಿ ತಿಳಿಸಿದ್ದೆ. ಅದಕ್ಕೂ ಸುಧಾ ಮೂರ್ತಿ ಒಪ್ಪಿಕೊಂಡರು ಅವರ ಈ ಕಾರ್ಯಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ
Advertisement
Thank u Sudha Murthy Madam. pic.twitter.com/ltHxqY3pjZ
— Pratap Simha (@mepratap) October 14, 2018
Advertisement
ಈಗಾಗಲೇ ಹುತಾತ್ಮ ಯೋಧರ ಮಾಹಿತಿ ಪಡೆದಿದ್ದು, ಅವರಿಗೆ ಸುಧಾಮೂರ್ತಿ ಅವರಿಂದ ಹಣದ ನೆರವು ನೀಡಲಾಗುತ್ತದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪರಿಹಾರ ಮೊತ್ತ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದಸರಾ ವೇಳೆ ಮಾರುಕಟ್ಟೆಗೆ ಭೇಟಿ ನೀಡಿ ಸರಳತೆ ಮೆರೆದ ಸುಧಾಮೂರ್ತಿ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv