ಬೆಂಗಳೂರು: ಎಲ್ಲರಿಗೂ ಗೊತ್ತಿರೋ ಹಾಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲೂ ಆ್ಯಕ್ಟೀವ್ ಆಗಿರುತ್ತಾರೆ. ಈಗ ಸುದೀಪ್ ಟ್ವಿಟ್ಟರ್ ನಲ್ಲಿ 11 ಲಕ್ಷ ಅಭಿಮಾನಿಗಳನ್ನು ಕಮ್ ಫಾಲೋವರ್ಸ್ ರನ್ನು ಹೊಂದಿದ್ದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
2009ರಲ್ಲಿ ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದರು. ಆದರೆ ಈಗ ಅವರ ಫಾಲೋವರ್ಸ್ ಗಳ ಸಂಖ್ಯೆ 11 ಲಕ್ಷ ಏರಿದೆ. ಸುದೀಪ್ ಇದೂವರೆಗೂ ಟ್ವಿಟ್ಟರ್ ನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ವೀಟ್ ಮಾಡಿದ್ದಾರೆ.
- Advertisement
ಶಾರೂಖ್ ಖಾನ್, ಸಲ್ಮಾನ್ ಖಾನ್, ರಾಜ್‍ಮೌಳಿ, ದರ್ಶನ್ ತುಗೂದೀಪ್, ರಕ್ಷಿತ್ ಶೆಟ್ಟಿ ಸೇರಿ 47ಕ್ಕೂ ಹೆಚ್ಚು ಮಂದಿಯನ್ನು ಸುದೀಪ್ ಫಾಲೋ ಮಾಡುತ್ತಿದ್ದಾರೆ. ಇದರಲ್ಲಿ 26 ಅವರ ಫ್ಯಾನ್ ಕ್ಲಬ್‍ಗಳನ್ನು ಫಾಲೋ ಮಾಡುತ್ತಿರುವುದು ವಿಶೇಷ.
- Advertisement
ನಿಮ್ಮ ಜೀವನದಲ್ಲಿ ನನ್ನನ್ನೂ ಒಬ್ಬ ಸ್ನೇಹಿತನನ್ನಾಗಿ ಮಾಡಿದ್ದಕ್ಕೆ ಧನ್ಯವಾದಗಳು ಹಾಗೂ ನಿಮ್ಮ ಜೀವನದಲ್ಲಿ ಇನ್ನೂ ನನ್ನನ್ನು ಒಬ್ಬನನ್ನು ಆಗಿಸಿದ್ದಕ್ಕೆ ಆ ಎಲ್ಲಾ 11 ಲಕ್ಷ ಜನರಿಗೆ ನನ್ನ ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
Wanna thank th new 100k frnz who have made me a part of their lives…n wanna thank th 1m frnz for still keeping me in ur lives..mch luv.
— Kichcha Sudeepa (@KicchaSudeep) September 23, 2017