ಚಾಮರಾಜನಗರ: ಬಿಜೆಪಿ (BJP) ಪಕ್ಷದಿಂದ ನಟ ಸುದೀಪ್ (Sudeep) ಸಚಿವ ವಿ.ಸೋಮಣ್ಣ (V Somanna) ಪರವಾಗಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಶುಕ್ರವಾರ ಚಾಮರಾಜನಗರದಲ್ಲಿ (Chamarajanagar) ನಾಯಕರು ರೋಡ್ ಶೋ (Road Show) ನಡೆಸುತ್ತಿದ್ದ ವೇಳೆ ಸುದೀಪ್ ಹತ್ತಿರ ಹೋಗಲು ಧಾವಿಸಿದ ಅಭಿಮಾನಿ (Fan) ಸೋಮಣ್ಣ ಅವರನ್ನು ಬಿಳಿಸಿರುವ ಪ್ರಸಂಗ ನಡೆದಿದೆ.
ಸಚಿವ ಸೋಮಣ್ಣ, ಕೊಳ್ಳೇಗಾಲ ಎನ್ ಮಹೇಶ್, ಗುಂಡ್ಲುಪೇಟೆ ನಿರಂಜನ್ ಕುಮಾರ್, ಹನೂರು ಪ್ರೀತನ್ ನಾಗಪ್ಪ ಪರ ಸುದೀಪ್ ಚಾಮರಾಜನಗರಲ್ಲಿ ರೋಡ್ ಶೋ ನಡೆಸಿದ್ದಾರೆ. ಗುಂಡ್ಲುಪೇಟೆ ಮೂಲಕ ರೋಡ್ ಶೋ ಆರಂಭ ಮಾಡಲಾಗಿದ್ದು, ಚಾಮರಾಜನಗರ, ಕೊಳ್ಳೇಗಾಲ, ಹನೂರು ಕ್ಷೇತ್ರದಲ್ಲಿ ರೋಡ್ ಶೋ ನಡೆದಿದೆ.
ರೋಡ್ ಶೋ ವೇಳೆ ಸಚಿವ ಸೋಮಣ್ಣ ಹಾಗೂ ಸುದೀಪ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸುತ್ತಿದ್ದರು. ಆಗ ಸುದೀಪ್ ಬಳಿ ತೆರಳಲು ಅಭಿಮಾನಿಯೊಬ್ಬ ಕಾರಿನ ಮೇಲೆ ಹತ್ತಿದ್ದಾನೆ. ಬಳಿಕ ಆತ ಆಯತಪ್ಪಿದ್ದು, ಸಚಿವ ಸೋಮಣ್ಣ ಅವರನ್ನು ಹಿಡಿದುಕೊಂಡು ಕೆಳಕ್ಕೆ ಬಿದ್ದಿದ್ದಾನೆ. ಈ ವೇಳೆ ಸೋಮಣ್ಣ ಕೂಡಾ ಬಿದ್ದಿದ್ದು, ಅವರನ್ನು ಸುದೀಪ್ ಕಾರಿನ ಟಾಪ್‌ನಿಂದ ಕೆಳಕ್ಕೆ ಬೀಳದಂತೆ ಹಿಡಿದಿದ್ದರು. ಇದನ್ನೂ ಓದಿ: ತಂದೆಗೆ ಬಿಜೆಪಿ ಟಿಕೆಟ್ ಸಿಕ್ಕ ಖುಷಿಗೆ ಗಾಳಿಯಲ್ಲಿ ಗುಂಡು ಪ್ರಕರಣ – ಅಭ್ಯರ್ಥಿ ಪುತ್ರನ ವಿರುದ್ಧ ಎಫ್‍ಐಆರ್
ಅಬ್ಬರದ ಪ್ರಚಾರದಲ್ಲಿ ನಟ ಸುದೀಪ್‌ರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಸಂತೇಮರಹಳ್ಳಿಯ ವೃತ್ತದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ರೋಡ್ ಶೋನಿಂದ ಒಬ್ಬ ವಿದ್ಯಾರ್ಥಿಗೂ ತೊಂದರೆಯಾಗಬಾರದು ಅಂದ್ರು ಪ್ರಧಾನಿ: ಶೋಭಾ ಕರಂದ್ಲಾಜೆ