ಬೆಳಗಾವಿ: ಕರ್ನಾಟಕದ ರನ್ನ ಕಿಚ್ಚ ಸುದೀಪ್ (Sudeep) ಅವರಿಗೆ ಇಂದು ಜನ್ಮದಿನದ ಸಂಭ್ರಮ. ಕಿಚ್ಚನ ಹುಟ್ಟು ಹಬ್ಬಕ್ಕೆ (Birth Day) ಅವರ ಅಭಿಮಾನಿಯೊಬ್ಬರು ಅನಾಥ ಕುಟುಂಬಕ್ಕೆ ಭರ್ಜರಿ ಗಿಫ್ಟ್ ನೀಡಿದ್ದಾರೆ.
ಬೆಳಗಾವಿ ತಾಲೂಕಿನ ಮಾರ್ಕಂಡೇಯ ನಗರದಲ್ಲಿ ಒಂದು ಗುಂಟೆ ಜಾಗದಲ್ಲಿ ಬಡ ಮಹಿಳೆ ರತ್ನವ್ವ ಅವರಿಗೆ ಕಿಚ್ಚನ ಅಭಿಮಾನಿ ಆದಿಶೇಷ ಮನೆ (House) ನಿರ್ಮಾಣ ಮಾಡಿಕೊಟ್ಟಿದ್ದಾರೆ. ಬಡ ಮಹಿಳೆಗೆ ಸೂರು ಒದಗಿಸುವುದರ ಮೂಲಕ ಕಿಚ್ಚನ ಬರ್ತಡೇಯನ್ನು ವಿಭಿನ್ನವಾಗಿ ಆಚರಿಸಲಾಗಿದೆ. ಇದನ್ನೂ ಓದಿ: ಬಿಗ್ ಬಾಸ್ ಪ್ರೋಮೋ ರಿಲೀಸ್ – ಸ್ಪರ್ಧಿಗಳ ಬಗ್ಗೆ ಮಾಹಿತಿಯೂ ಔಟ್
ಸುದೀಪ್ ಹುಟ್ಟುಹಬ್ಬವನ್ನು ಮನೆಯ ಮುಂದೆ ಕೇಕ್ ಕಟ್ ಮಾಡಿ ರಿಬ್ಬನ್ ಟೇಪ್ ಕತ್ತರಿಸಿ ಗೃಹ ಪ್ರವೇಶ ಕಾರ್ಯಕ್ರಮ ಮಾಡಲಾಯಿತು. ತಂದೆ ತಾಯಿ ಇಲ್ಲದ ಒಂಭತ್ತು ಜನ ಮೊಮ್ಮಕ್ಕಳೊಂದಿಗೆ ರತ್ನವ್ವ ಬದುಕು ಸಾಗಿಸುತ್ತಿದ್ದಾರೆ.
ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಸದ್ಯ ರತ್ನವ್ವ ಒಬ್ಬರೇ ಆಸರೆಯಾಗಿದ್ದು ಮನೆಯ ಸಂಕಷ್ಟವನ್ನು ಗಮನಿಸಿ ಆದಿಶೇಷ ನಾಯಕ ಮನೆ ನಿರ್ಮಿಸಿಕೊಟ್ಟಿದ್ದಾರೆ.