ಬೆಳ್ಳಂಬೆಳಗ್ಗೆ ಕಿಚ್ಚ ಸುದೀಪ್ (Kichcha Sudeep) ಪುತ್ರಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಆಶ್ಚರ್ಯ ಮೂಡಿಸಿದ್ದಾರೆ. ಅಪ್ಪ ಸುದೀಪ್, ಅಮ್ಮ ಪ್ರಿಯಾರಿಂದ ಅರಿಶಿಣ ಹಚ್ಚಿಸಿಕೊಳ್ಳುವ ಫೋಟೋಗಳನ್ನ ಸಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಥಟ್ ಅಂತ ನೋಡಿದ್ರೆ ಸಾನ್ವಿಯದ್ದೇ ಮದುವೆಯಾ ಎಂದು ಕೇಳುವಂತಿದೆ ಫೋಟೋಗಳು. ಆದರೆ ಈ ಶಾಸ್ತ್ರ ಸುದೀಪ್ ಅಕ್ಕನ ಮಗನ ಮದುವೆಯಲ್ಲಿ ನಡೆದಿದೆ. ಅದರ ಫೋಟೋಗಳನ್ನ ಸಾನ್ವಿ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಮರಳಿ ಮನಸಾಗಿದೆ ಚಿತ್ರದ ಟೀಸರ್ ರಿಲೀಸ್
ಸುದೀಪ್ ಅಕ್ಕನ ಮಗನ ಮದುವೆ ಶಾಸ್ತ್ರದಲ್ಲಿ ಸುದೀಪ್ ಪುತ್ರಿ ಸಾನ್ವಿಗೂ ಅರಿಶಿಣ ಹಚ್ಚಲಾಗಿದೆ. ಶಾಸ್ತ್ರದಲ್ಲಿ ಹೆಣ್ಣುಮಕ್ಕಳಿಗೂ ಅರಿಶಿಣ ಹಚ್ಚುವ ಪದ್ಧತಿ ಬಹುಶಃ ಇರುತ್ತೆ. ಹೀಗಾಗೇ ಸಾನ್ವಿ ಕೂಡ ಅರಿಶಿಣ ಹಚ್ಚಿಸಿಕೊಂಡಿದ್ದಾರೆ. ಸುದೀಪ್ ಅಕ್ಕನ ಮಗನ ವಿವಾಹದ ಹಿನ್ನೆಲೆ ಕುಟುಂಬದಲ್ಲಿ ಈ ಶಾಸ್ತ್ರ ನಡೆದಿದೆ. ಸಾಂಪ್ರದಾಯಿಕ ಲುಕ್‌ನಲ್ಲಿ ಸುದೀಪ್ ಪುತ್ರಿ ಸಾನ್ವಿ ಭಾರಿ ಮಿಂಚಿದ್ದಾರೆ.

