ಕಿಚ್ಚ ಸುದೀಪ್ (Sudeep) ಸದ್ಯ 46ನೇ ಸಿನಿಮಾದ (Cinema) ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ ಅವರ ತಮ್ಮ 50ನೇ ಸಿನಿಮಾವರೆಗೂ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಂದಕಿಶೋರ್, ಅನೂಪ್ ಭಂಡಾರಿ ಸೇರಿದಂತೆ ಹಲವು ನಿರ್ದೇಶಕರ ಚಿತ್ರಗಳಲ್ಲಿ ಅವರು ನಟಿಸಲಿದ್ದಾರೆ. ಅಲ್ಲಿಗೆ ಸುದೀಪ್ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ನಟರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಸದ್ಯ ಸುದೀಪ್ ಚೆನ್ನೈನಲ್ಲಿ (Chennai) ಬೀಡುಬಿಟ್ಟಿದ್ದಾರೆ. ಅವರ ನಟನೆಯ ಕೆ-46 ಸಿನಿಮಾದ ಶೂಟಿಂಗ್ ಮಹಾಬಲಿಪುರಂನಲ್ಲಿ (Mahabalipuram)ನಡೆಯುತ್ತಿದೆ. ಈ ಸಿನಿಮಾದ ಶೂಟಿಂಗ್ ಗಾಗಿ ಬೃಹತ್ ಪ್ರಮಾಣದ ಸೆಟ್ ಗಳನ್ನು ಹಾಕಲಾಗಿದೆ. ಒಂದೇ ಹಂತದಲ್ಲೇ ಈ ಸಿನಿಮಾದ ಚಿತ್ರೀಕರಣ ಮಾಡಲು ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ. ಇದನ್ನೂ ಓದಿ:ಮದುವೆಯಾದ ಒಂದೇ ವರ್ಷಕ್ಕೆ ಪತಿಯನ್ನು ಕಳೆದುಕೊಂಡ ನಟಿ ಶ್ರುತಿ
ಕಾಲಿವುಡ್ ನ ಖ್ಯಾತ ನಿರ್ಮಾಣ ಸಂಸ್ಥೆ ‘ವಿ ಕ್ರಿಯೇಷನ್’ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಕಲೈಪುಲಿ ಎಸ್ ಧಾನು ಚಿತ್ರದ ನಿರ್ಮಾಪಕರು. ಸಿನಿಮಾದ ವಿಶೇಷವೆಂದರೆ ಮೊದಲು ಚಿತ್ರವನ್ನು ಕನ್ನಡದಲ್ಲೇ ಶೂಟ್ ಮಾಡಿ, ನಂತರ ತಮಿಳಿಗೆ ಡಬ್ ಮಾಡುತ್ತಾರಂತೆ ನಿರ್ದೇಶಕರು. ಹಾಗಾಗಿ ತಂತ್ರಜ್ಞರ ಯಾದಿಯಲ್ಲಿ ಬಹುತೇಕ ಕನ್ನಡಿಗರೇ ಇದ್ದಾರೆ.
ಸತತ ಚಿತ್ರೀಕರಣದ ನಂತರ ಸಣ್ಣದೊಂದು ಬ್ರೇಕ್ ತೆಗೆದುಕೊಂಡು, ಸೆಪ್ಟಂಬರ್ 2ಕ್ಕೆ ಬೆಂಗಳೂರಿಗೆ ಆಗಮಿಸಲಿದ್ದಾರೆ ಸುದೀಪ್. ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಮತ್ತೆ ಚಿತ್ರೀಕರಣಕ್ಕೆ ವಾಪಸ್ಸಾಗಲಿದ್ದಾರೆ. ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಈಗಿನಿಂದಲೇ ಅಭಿಮಾನಿಗಳು ಕೂಡ ಸಿದ್ದತೆ ನಡೆಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]