ಮಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್ ಅವರು ಕುಟುಂಬ ಸಮೇತರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿಕೊಟ್ಟು, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಪತ್ನಿ ಪ್ರಿಯಾ ಜೊತೆ ಕ್ಷೇತ್ರಕ್ಕೆ ಆಗಮಿಸಿದ ಸುದೀಪ್ ಅವರು ಸುಬ್ರಹ್ಮಣ್ಯದ ಸಂಪುಟ ನರಸಿಂಹ ಮಠದಲ್ಲಿ ಆಶ್ಲೇಷ, ನಾಗ ಪ್ರತಿಷ್ಠೆ ಪೂಜೆ ಮಾಡಿದ್ದಾರೆ. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದರ್ಶನವನ್ನು ಪಡೆದಿದ್ದಾರೆ. ಇದನ್ನೂ ಓದಿ: ಫೆಬ್ರವರಿ 24ಕ್ಕೆ ತೆರೆ ಮೇಲೆ ವಿಕ್ರಾಂತ್ ರೋಣ
ಸುದೀಪ್ ಅವರು ಚಿತ್ರರಂಗದಲ್ಲಿ ಸದಾ ಬ್ಯುಸಿ ಆಗಿರುತ್ತಾರೆ. ಆದರೆ ಸಿನಿಮಾ ಕೆಲಸಗಳ ಜೊತೆ ಕುಟುಂಬಕ್ಕೂ ಪ್ರಾಮುಖ್ಯತೆ ನೀಡುತ್ತಾ ಸಮಯ ಕಳೆಯುತ್ತಾರೆ. ಈಗ ಅವರು ಪತ್ನಿ ಪ್ರಿಯಾ ಜೊತೆಗೆ ನಾಗ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನವನ್ನು ಪಡೆದಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು – ರಾಜ್ ಮನೆ ಇದೀಗ ಮ್ಯೂಸಿಯಂ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಇದೆ. ಸುದೀಪ್ ಸದ್ಯ, ವಿಕ್ರಾಂತ್ ರೋಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಚಿತ್ರತಂಡ ಸಿನಿಮಾವನ್ನು 2022ರ ಫೆ.24ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಇದನ್ನೂ ಓದಿ: ದೆಹಲಿಯಿಂದ ಮನೆಗಳತ್ತ ಮುಖಮಾಡಿದ ರೈತರು- ಪೊಲೀಸರಿಂದ ಬ್ಯಾರಿಕೇಡ್ ತೆರವು