ನಿಮ್ಮ ಬೆಂಬಲದಿಂದ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ- ಫ್ಯಾನ್ಸ್‌ಗೆ ಸುದೀಪ್‌ ಥ್ಯಾಂಕ್ಸ್

Public TV
1 Min Read
sudeep

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Sudeep) ಅವರು ಜ.31ಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 29 ವರ್ಷಗಳು ಪೂರೈಸಿವೆ. ಹಾಗಾಗಿ ಪ್ರೋತ್ಸಾಹಿಸಿ ಬೆಂಬಲಿಸಿದ ಫ್ಯಾನ್ಸ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದನ್ನೂ ಓದಿ:‘ಅಂಕಲ್, ಆಂಟಿ ಲವ್‌ಸ್ಟೋರಿ’ ಎಂದು ಟ್ರೋಲ್ ಮಾಡಿದವರಿಗೆ ತಕ್ಕ ಉತ್ತರ ಕೊಟ್ಟ ಗೌತಮಿ

SUDEEP

ಸುದೀಪ್ ಪೋಸ್ಟ್‌ನಲ್ಲಿ 29 ವರ್ಷಗಳು.. ಈವರೆಗಿನ ನನ್ನ ಈ ಸುದೀರ್ಘ ಪ್ರಯಾಣಕ್ಕಾಗಿ ನನ್ನಲ್ಲಿ ಕೃತಜ್ಞತಾ ಭಾವನೆ ಇದೆ. ಅಭಿಮಾನಿಗಳನ್ನು ರಂಜಿಸೋದು, ಪ್ರತಿನಿಧಿಸುವ ಕತೆಗಳಿಗೆ ನಾನು ಪಾತ್ರವಾಗುವುದು ನನ್ನ ಪಾಲಿಗೆ ಅತ್ಯಂತ ಗೌರವದ ಕೆಲಸ. ನಿಮ್ಮಿಂದ ಸಿಕ್ಕಿರುವ ಸತತ ಪ್ರೀತಿ, ಬೆಂಬಲ ನನ್ನಲ್ಲಿ ಸ್ಫೂರ್ತಿ ತುಂಬುತ್ತಲೇ ಬರುತ್ತಿದೆ. ಅಂಥ ಡೆಡಿಕೇಟೆಡ್ ಅಭಿಮಾನಿಗಳನ್ನು ಹೊಂದಿರೋದು ನನ್ನ ಸೌಭಾಗ್ಯ ಎಂದಿದ್ದಾರೆ.

ನೀವು ನೀಡುತ್ತಿರುವ ಬೆಂಬಲದಿಂದಲೇ ಪ್ರತಿ ಸವಾಲುಗಳನ್ನು ಎದುರಿಸುವ ಹುಮ್ಮಸ್ಸು ನೀಡಿದೆ. ಅದ್ಯಾವ ಮಟ್ಟಿಗೆ ಅರ್ಥಪೂರ್ಣವಾಗಿದೆ ಎಂದು ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ. ಈ ಅದ್ಭುತವಾದ ಪ್ರಯಾಣದ ಭಾಗವಾಗಿದ್ದಕ್ಕಾಗಿ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಷ್ಟೇ ನಾನು ಹೇಳಬಲ್ಲೇ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚ ಬರೆದುಕೊಂಡಿದ್ದಾರೆ.

ಇನ್ನೂ ಸುದೀಪ್ ಅವರು ‘ಸ್ಪರ್ಶ’ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟರು. ಆ ನಂತರ ಹುಚ್ಚ, ನಂದಿ, ಕಾಶಿ, ತಿರುಪತಿ, ಹುಬ್ಬಳ್ಳಿ, ಗೂಳಿ, ವೀರ ಮದಕರಿ, ಕೆಂಪೇಗೌಡ ಇತ್ತೀಚಿನ ‘ಮ್ಯಾಕ್ಸ್’ (Max Film) ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.

Share This Article