ಕ್ಯಾಪ್ಟನ್ ಸ್ಥಾನಕ್ಕೆ ಬೆಲೆ ಕೊಡದ ವಿನಯ್, ಮೈಕಲ್‌ಗೆ ಬೆಂಡೆತ್ತಿದ ಕಿಚ್ಚ

Public TV
3 Min Read
vinay

ಬಿಗ್ ಬಾಸ್ ಮನೆಯ (Bigg Boss) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೀಗ 90 ದಿನ ಕಳೆದು ಮುನ್ನುಗ್ಗತ್ತಿದೆ. ಇದರ ನಡುವೆ ಮೈಕಲ್ ಸಿಡುಕು ವರ್ತನೆಗೆ ಸುದೀಪ್ ಖಡಕ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ಯಾಪ್ಟನ್ ಸ್ಥಾನಕ್ಕೆ ಗೌರವ ನೀಡದ ಮೈಕಲ್‌ಗೆ (Michael) ಸುದೀಪ್ (Sudeep)  ಬೆಂಡೆತ್ತಿದ್ದಾರೆ.

Ishani Michael 1

ಬಿಗ್ ಬಾಸ್ ಮನೆಗೆ ಕಾಲಿಟ್ಟಾಗ ಮೈಕಲ್‌ಗೆ ಅಷ್ಟಾಗಿ ಕನ್ನಡ ಬರುತ್ತಿಲ್ಲ. ಇಲ್ಲಿಗೆ ಬಂದ್ಮೇಲೆಯೇ ಅವರ ಕನ್ನಡ ಸಾಕಷ್ಟು ಇಂಪ್ರೂವ್ ಆಗಿತ್ತು. ಕನ್ನಡದ ಮಣ್ಣಿನ ಮಗ ಎಂದೇ ಮೈಕಲ್ ಬಿಂಬಿತರಾದರು. ಬಿಗ್ ಮನೆಗೆ ಬಂದ ಮೊದಲ 6 ವಾರದಲ್ಲಿ ಅವರ ಆಟ, ಮಾತು, ನಡೆ- ನುಡಿ ಎಲ್ಲವೂ ಪ್ರೇಕ್ಷಕರ ಗಮನ ಸೆಳೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಮಾತಿನ ವೈಖರಿಯೇ ಬದಲಾಗಿದೆ. ಅದರಲ್ಲೂ ಮನೆಯ ಕ್ಯಾಪ್ಟನ್‌ಗೆ ಮೈಕಲ್ ಉಲ್ಟಾ ಮಾತನಾಡುತ್ತಾರೆ.

Michael 1

ವಾರಾಂತ್ಯದ ಮಾತುಕತೆಯಲ್ಲಿ ಸಂಗೀತಾ (Sangeetha Sringeri) ಅವರ ಕ್ಯಾಪ್ಟನ್ಸಿ ಯಾರಿಗೆ ಇಷ್ಟ ಆಯಿತು, ಯಾರಿಗೆ ಇಷ್ಟ ಆಗಿಲ್ಲ ಎಂದು ಸುದೀಪ್ ಕೇಳಿದರು. ಇಷ್ಟ ಆಗಿಲ್ಲ ಎನ್ನುವುದಕ್ಕೆ ಕಾರ್ತಿಕ್- ಪ್ರತಾಪ್ ಕೈ ಎತ್ತಿದರು. ಇಷ್ಟ ಆಗುತ್ತಿದೆ ಎನ್ನುವುದಕ್ಕೆ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಕೈ ಎತ್ತಿದರು. ವಿನಯ್, ನಮ್ರತಾ, ಮೈಕಲ್ ಮೊದಲಾದವರು ಸುಮ್ಮನೆ ಇದ್ದರು. ಈ ಬಗ್ಗೆ ಕೇಳಿದ್ದಕ್ಕೆ ಮೈಕಲ್ ಉಲ್ಟಾ ಮಾತನಾಡಿದರು. ಇದನ್ನೂ ಓದಿ:ಜಾಹ್ನವಿಯಲ್ಲಿ ಹುಡುಗರು ಮೊದಲು ನೋಡೋದೇನು? : ಬೋಲ್ಡ್ ಉತ್ತರ ಕೊಟ್ಟ ನಟಿ

michael

ಸಂಗೀತಾ ಕ್ಯಾಪ್ಟನ್ಸಿ ಏನೂ ಬದಲಾವಣೆ ತರುತ್ತಿಲ್ಲ. ಹೀಗಿರುವಾಗ ಹೇಳೋದು ಏನು ಎಂದು ಮೈಕಲ್ ಪ್ರಶ್ನೆ ಮಾಡಿದರು. ಇದು ಸುದೀಪ್‌ಗೆ ಕೋಪ ತರಿಸಿತ್ತು. ಒಂದು ರೇಟಿಂಗ್ ಅಥವಾ ವೋಟಿಂಗ್ ಬರುತ್ತದೆ. ಅದಕ್ಕೆ ಉತ್ತರಿಸಿದ್ರೆ ಮಾತಾಡೋಣ. ಜಡ ಹಿಡಿದ ದೇಹ ಭಾಷೆ ಬೇಡ. ಸುಮ್ನೆ ಒಂದು ಹಿಂಟ್ ಕೊಡ್ತೀನಿ. ಇದೆಲ್ಲ ನನ್ನತ್ರ ಬೇಡ. ನಾನು ಸರಿ ಇಲ್ಲ. ಪ್ರೀತಿಯಿಂದ ಮಾತನಾಡಿದ್ರೆ ಮಾತನಾಡುವುದಕ್ಕೆ ಬರುತ್ತದೆ. ನನ್ನ ವ್ಯಕ್ತಿತ್ವ ಟೆಸ್ಟ್ ಮಾಡಬೇಡಿ ಎಂದು ಮೈಕಲ್‌ಗೆ ಸಖತ್ ಆಗಿಯೇ ಕಿಚ್ಚ ಬೆಂಡೆತ್ತಿದ್ದಾರೆ.

vinay gowda 3

ಸುದೀಪ್ ಅವರಿಗೆ ಬಿಗ್ ಬಾಸ್ ಶೋ ಇಷ್ಟ. ಈ ಕಾರಣಕ್ಕೆ ಅವರು ಸಿನಿಮಾ ಕೆಲಸಗಳ ಮಧ್ಯೆ ಪ್ರತಿ ವಾರ ಬಿಡುವು ಮಾಡಿಕೊಂಡು ಅದರ ನಿರೂಪಣೆ ಮಾಡೋಕೆ ಬರುತ್ತಾರೆ. ಈ ಶೋ ನಂಬಿಕೊಂಡು ನಾನಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಬಿಗ್ ಬಾಸ್ ಬಿಟ್ಟು ನನಗೆ ಹೊರಗೊಂದು ಜೀವನ ಇದೆ. ಕನ್ನಡಕ ಹಾಕಿಕೊಂಡು ಮಾತಾಡೋದು ಮಾತ್ರ ಅಲ್ಲ. ಇದೆಲ್ಲ ಅಲ್ಲಿಯರವರತ್ರ ಇಟ್ಕೊಳ್ಳಿ. ಇದನ್ನು ನಾನು ಸಿಟ್ಟಿನಿಂದ ಹೇಳುತ್ತಿಲ್ಲ. ಪ್ರೀತಿ ಹಾಗೂ ಗೌರವದಿಂದ ಹೇಳ್ತಾ ಇದೀನಿ. ಬಿಗ್ ಬಾಸ್ ಮನಸ್ಸಿಗೆ ಹತ್ತಿರವಾದ ಶೋ. ಹಾಗಂತ ನನ್ನ ವ್ಯಕ್ತಿತ್ವ ಪರೀಕ್ಷೆ ಮಾಡಬಾರದು. ಕೂರಿಸಿಕೊಂಡು ಮಾತಾಡ್ತಾ ಇದೀನಿ. ಅಲ್ಲಿಂದ ಗೌರವ ಆರಂಭ ಆಗುತ್ತದೆ ಎಂದರು.

ಬಳಿಕ ಕ್ಯಾಪ್ಟನ್ಸಿ ಸ್ಥಾನಕ್ಕೆ ಬೆಲೆ ಕೊಡದ ವಿನಯ್ (Vinay Gowda) ಸಮರ್ಥನೆಗೆ ಕಿಚ್ಚ ಸುದೀಪ್, ನಾನು ಸುಮ್ಮನೆ ಈ ವೇದಿಕೆ ಮೇಲೆ ನಿಂತಿಲ್ಲ ಅಂತ್ಹೇಳಿ ತಿರುಗೇಟು ಕೊಟ್ಟರು. ನಿಮ್ಮ ಅಭಿಪ್ರಾಯವನ್ನ ನನಗೆ ಹೇಗೆ ಹೇಳಿದ್ರೋ, ಅದೇ ರೀತಿ ತನಿಷಾಗೆ ವ್ಯಕ್ತಪಡಿಸಿದ್ರಾ? ಎಂದು ಕಿಚ್ಚ ಸುದೀಪ್ ಕೇಳಿದಾಗ, ಇಲ್ಲ. ಅದು ನನ್ನ ತಪ್ಪು ಎಂದು ವಿನಯ್ ಒಪ್ಪಿಕೊಂಡರು. ಅದಕ್ಕೆ, ಈಗೋ ಫಾಲ್ಸ್ ಆಟಿಟ್ಯೂಡ್ ಹೊರಗೆ ಬರೋದು ಆಗಲೇ ಅಲ್ವಾ? ನಿಮ್ಮನ್ನ ನೋಡಿ ಮೈಕಲ್ ಕೂಡ ಶುರು ಮಾಡಿಕೊಂಡರು. ಈ ಮನೆಯಲ್ಲಿ ಕ್ಯಾಪ್ಟನ್‌ಶಿಪ್‌ಗೆ ಏನಿದೆ ಬೆಲೆ? ಒದ್ದಾಡಿ ಒದ್ದಾಡಿ ಆ ಬೀಗ ತೆಗೆಸಿದ್ರಿ ಎಂದು ಹೇಳಿ ವಿನಯ್‌ಗೆ ಕಿಚ್ಚ ಸುದೀಪ್ ಕಿವಿ ಹಿಂಡಿದರು. ಈ ಮೂಲಕ ವಿನಯ್ ಮತ್ತು ಮೈಕಲ್ ಇಬ್ಬರಿಗೂ ಸುದೀಪ್ ಖಡಕ್ ಕ್ಲಾಸ್ ತೆಗೆದುಕೊಂಡರು.

Share This Article