ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯ ‘ಬಿಗ್ ಬಾಸ್ ಸೀಸನ್ 11’ರ ಪ್ರಾರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಇನ್ನೂ ಪ್ರತಿ ಸೀಸನ್ನಲ್ಲೂ ಸುದೀಪ್ ನಯಾ ಹೇರ್ ಸ್ಟೈಲ್ ಮತ್ತು ಸ್ಟೈಲೀಶ್ ಉಡುಗೆ ಧರಿಸುವ ಮೂಲಕ ಹೈಲೆಟ್ ಆಗಿದ್ದಾರೆ. ಈ ಬಾರಿ ಡ್ರೆಸ್ ಸ್ಟೈಲ್ (Costume) ಹೇಗಿರುತ್ತೆ ಎಂದು ಎದುರಾದ ಪ್ರಶ್ನೆಗೆ, ಬಾಳೆ ಎಲೆ ಎಂದಷ್ಟೇ ಹೇಳಿ ತಮಾಷೆಯಾಗಿ ನಟ ರಿಯಾಕ್ಟ್ ಮಾಡಿದ್ದಾರೆ.
Advertisement
ಬಿಗ್ ಬಾಸ್ ಶೋ (Bigg Boss Kannada 11) ಕುರಿತ ಪ್ರೆಸ್ ಮೀಟ್ನಲ್ಲಿ ಈ ಬಾರಿ ಸುದೀಪ್ ಕಾಸ್ಟ್ಯೂಮ್ ಹೇಗಿರುತ್ತೆ? ನಟ ವಿವರಿಸಿದ್ದಾರೆ. ಡ್ರೆಸ್ ಬಗ್ಗೆ ಎದುರಾದ ಪ್ರಶ್ನೆಗೆ, ಬಾಳೆ ಎಲೆ ಎಂದಷ್ಟೇ ಉತ್ತರಿಸಿ ನಟ ಸ್ಮೇಲ್ ಮಾಡಿದ್ದಾರೆ. ಬಳಿಕ ವಾರಾಂತ್ಯದಲ್ಲಿ ಶೋ ಮಾಡುವಾಗ ಅಲ್ಲಿರುವ ಸ್ಪರ್ಧಿಗಳು ನಮಗೋಸ್ಕರ ಚೆಂದವಾಗಿ ರೆಡಿಯಾಗಿ ಕುತಿರುತ್ತಾರೆ. ನನಗೆ ಅಲ್ಲಿಂದ ಆಸಕ್ತಿ ಬರುತ್ತದೆ. ಅವರೇ ನನಗೆ ಪ್ರೇರಣೆ ಎಂದಿದ್ದಾರೆ.
Advertisement
Advertisement
ನಾನು ಪ್ರತಿ ಬಾರಿ ಶೋ ಮಾಡುವಾಗ ಡಿಸೈನರ್ಸ್ ತುಂಬಾ ಸಮಯ ಕೊಟ್ಟು ನಿಗಾ ವಹಿಸಿ ಅವರು ಕೆಲಸ ಮಾಡುತ್ತಾರೆ. ಈ ಬಾರಿ ಕಾಸ್ಟ್ಯೂಮ್ ಹೇಗಿರುತ್ತದೆ? ಎಂಬುದು ನನಗೂ ಗೊತ್ತಿಲ್ಲ. ಅದರ ಬಗ್ಗೆ ನಾನು ಕೂಡ ಕ್ಯೂರಿಯಸ್ ಆಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:‘ಬಿಗ್ ಬಾಸ್ ಸೀಸನ್ 11’ ಮಾಡೋದು ಬೇಡ ಅಂತ ಯೋಚಿಸಿದ್ದು ನಿಜ: ಸುದೀಪ್
Advertisement
ಈ ವೇಳೆ, ಈ ಬಾರಿ ಬಿಗ್ ಬಾಸ್ ಶೋಗೆ ಅತಿಥಿಯಾಗಿ ಹೋಗ್ತಾರಾ? ಇಲ್ವಾ ಎಂಬುದರ ಬಗ್ಗೆ ಕೂಡ ತಿಳಿಸಿದ್ದಾರೆ. ಚಂದನ್ ಶೆಟ್ಟಿ ಇದ್ದ ಸೀಸನ್ನಲ್ಲಿ ಸುದೀಪ್ ಎಂಟ್ರಿ ಕೊಟ್ಟು ಸರ್ಪ್ರೈಸ್ ಕೊಟ್ಟಿದ್ದರು. ಆ ನಂತರ ಹೋಗಿರಲಿಲ್ಲ. ಈ ಬಾರಿ ಅಗತ್ಯ ಇದ್ದರೆ ಹೋಗುತ್ತೇನೆ. ಸಂದರ್ಭ ಮೇಲೆ ಅವಲಂಭಿತವಾಗಿರುತ್ತದೆ ಎಂದಿದ್ದಾರೆ ಸುದೀಪ್.
ಅಂದಹಾಗೆ, ಸೆ.29ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಕಿಚ್ಚನ ನಯಾ ಖದರ್ ನೋಡೋಕೆ ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.
ಬಿಗ್ ಬಾಸ್ ಬರಲಿರುವ ಕೆಲ ಸ್ಪರ್ಧಿಗಳ ಹೆಸರು ಸದ್ದು ಮಾಡುತ್ತಿದೆ. ಮೋಕ್ಷಿತಾ ಪೈ, ಹುಲಿ ಕಾರ್ತಿಕ್, ಸುಕೃತಾ ನಾಗ್, ಕಿರುತೆರೆ ನಟಿ ಅಮೂಲ್ಯ, ಭವ್ಯಾ ಗೌಡ, ವರ್ಷಾ ಕಾವೇರಿ ಸೇರಿದಂತೆ ಅನೇಕರು ಹೆಸರು ಚಾಲ್ತಿಯಲ್ಲಿದೆ. ಯಾರೆಲ್ಲಾ ದೊಡ್ಮನೆ ಬರುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.