Connect with us

Bengaluru City

ಆಚಾರ್ಯರ ಕೆನ್ನೆಗೆ ಬಾರಿಸಿದ್ದ ಕಿರಿಕ್ ರಾಣಿಗೆ ಕಿಚ್ಚ ಸುದೀಪ್ ಕ್ಲಾಸ್

Published

on

ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚಿನ ನೋಡುಗರನ್ನು ಹೊಂದಿದ ಪವರ್ ಫುಲ್ ರಿಯಾಲಿಟಿ ಶೋ. ಆದರೆ ಈ ಬಾರಿ ಬಿಗ್‍ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿದ್ದ ನಟಿ ಸಂಯುಕ್ತಾ ಹೆಗಡೆ ಸ್ಪರ್ಧಿಯಾಗಿರುವ ಸಮೀರ್ ಆಚಾರ್ಯರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಔಟ್ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶನಿವಾರ ಸುದೀಪ್ ಈ ವಿಷಯದ ಕುರಿತು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

ಎಲ್ಲಾ ವಿಚಾರಗಳಿಗೂ ದೃಷ್ಟಿ ಬೊಟ್ಟು ಇಡುವಂತಹ ಘಟನೆ ನಡೆಯುತ್ತದೆ. ಆ ಘಟನೆ ನಡೆಯಬಾರದಿತ್ತು, ಆದ್ರೆ ನಡೆದು ಹೋಯ್ತು. ಸಂಯುಕ್ತಾ ಅತಿಥಿಯಾಗಿ ಬಂದಿದ್ರೂ ಸಮೀರ್ ಆಚಾರ್ಯರ ಮೇಲೆ ಅನಿವಾರ್ಯ ಕಾರಣಗಳಿಂದಾಗಿ ಅಥವಾ ಅನಿವಾರ್ಯದಿಂದಾಗಲೀ ಕೈ ಮಾಡಿದ್ದು ತಪ್ಪು ಮತ್ತು ನೋವಿನ ಸಂಗತಿ. ಹೊಡೆದಿದ್ದು ಬೇರೆ ಆ ನಂತರ ಬಿಗ್ ಬಾಸ್ ಗೆ ಕೊಟ್ಟಂತಹ ಕಾರಣಗಳು ಮತ್ತು ವಿವರಣೆಗಳು ಯಾವುದು ಒಪ್ಪುವ ಹಾಗಿರಲಿಲ್ಲ. ಹಾಗಾಗಿ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಮನೆಯಿಂದ ಹೊರ ಹೋದರು. ಆದ್ರೆ ಸಂಯುಕ್ತಾ ಇದು ಸರಿ ಅಲ್ಲ(ನಾಟ್ ರೈಟ್) ಮುಂದಿನದು ನಿಮಗೆ ಬಿಟ್ಟಂತಹ ವಿಚಾರ ಎಂದು ಪರೋಕ್ಷವಾಗಿ ತಿಳಿ ಹೇಳಿದರು.

ಅಂದು ಮನೆಯಲ್ಲಿ ನಡೆದಿದ್ದೇನು?: ಬುಧವಾರ ಬಿಗ್ ಮನೆಯಲ್ಲಿ ಪುರುಷ ಮತ್ತು ಮಹಿಳಾ ಎಂಬ ಎರಡು ತಂಡಗಳನ್ನು ವಿಂಗಡಿಸಲಾಗಿತ್ತು. ನಂತರ ಎರಡೂ ತಂಡಕ್ಕೂ ಒಂದೊಂದು ದಾರಗಳ ಗೋಪುರವನ್ನು ನೀಡಲಾಗಿತ್ತು. ಸ್ಪರ್ಧಿಗಳು ತಮ್ಮ ಎದುರಾಳಿ ತಂಡದ ಗೋಪುರದ ದಾರಗಳನ್ನು ಕತ್ತರಿ ಮೂಲಕ ಕತ್ತರಿಸಬೇಕು. ಹೀಗೆ ಹೆಚ್ಚಿನ ದಾರಗಳನ್ನು ಕಟ್ ಮಾಡಿದ ತಂಡವನ್ನು ವಿಜಯಶಾಲಿ ತಂಡವಾಗಿ ಘೋಷಿಸಲಾಗುತ್ತದೆ ಎಂದು ಬಿಗ್ ಬಾಸ್ ತಿಳಿಸಿದ್ದರು. ಇದನ್ನೂ ಓದಿ: ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ: ಪ್ರಥಮ್ 

ಈ ಟಾಸ್ಕ್ ನಡೆಯುವಾಗ ಸಂಯುಕ್ತಾ ಎದುರಾಳಿ ತಂಡದ ಸಹಸ್ಪರ್ಧಿ ಚಂದನ್ ಶೆಟ್ಟಿ ಬಳಿಯಿರುವ ಕತ್ತರಿ ಪಡೆದುಕೊಳ್ಳಲು ಅವರ ಮೇಲೆಯೇ ಎರಗಿದ್ದರು. ಸ್ಥಳದಲ್ಲಿದ್ದ ಸಮೀರ್ ಆಚಾರ್ಯ, ಚಂದನ್ ನೆರವಿಗೆ ಧಾವಿಸಿದ್ದರು. ಇದರಿಂದ ಕೋಪಗೊಂಡ ಸಂಯುಕ್ತಾ ಎಲ್ಲೆಲ್ಲೊ ಮುಟ್ತೀರಾ ಎಂದು ಕಪಾಳಕ್ಕೆ ಬಾರಿಸಿದ್ದರು. ಘಟನೆ ಬಳಿಕ ಬಿಗ್ ಬಾಸ್ ಸಂಯುಕ್ತಾರನ್ನು ಮನೆಯಿಂದ ಕಿಕ್ ಔಟ್ ಮಾಡಲಾಗಿತ್ತು. ಇದನ್ನೂ ಓದಿ: ಕಿರಿಕ್ ಸಂಯುಕ್ತಾಗೆ ಜಗ್ಗೇಶ್ ಕ್ಲಾಸ್

ಬಿಗ್ ಬಾಸ್ ಮನೆಯಿಂದ ಹೊರಬಂದ ಸಂಯುಕ್ತಾ ಇದೂವರೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಈ ಹಿಂದೆ ತೆರೆ ಕಂಡಿದ್ದ `ಕಾಲೇಜ್ ಕುಮಾರ್’ ಸಿನಿಮಾ ವಿಚಾರವಾಗಿ ಸಂಯುಕ್ತಾ ಚಿತ್ರತಂಡದೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿದ ಬಳಿಕ ಜನ ಸಾಮಾಜಿಕ ಜಾಲತಾಣಗಳಲ್ಲಿ ಸಂಯುಕ್ತ ನಡೆಯನ್ನು ಈ ಟೀಕಿಸಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *