ಕಿಚ್ಚ ಸುದೀಪ್ (Sudeep) ಕೋರ್ಟಿಗೆ ಹೋಗಿರುವ ಬೆನ್ನಲ್ಲೇ ನಿರ್ಮಾಪಕ ಎನ್.ಕುಮಾರ್ (N. Kumar) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆಯಿಂದ ಪ್ರತಿಭಟನೆಗೆ ಕೂತಿದ್ದಾರೆ. ಹಲವು ನಿರ್ಮಾಪಕರು ಅವರಿಗೆ ಸಾಥ್ ನೀಡಿದ್ದಾರೆ. ಇಂದು ನಿರ್ಮಾಪಕರು ಮತ್ತು ವಾಣಿಜ್ಯ ಮಂಡಳಿ ಸಭೆ ಸೇರಿ ರವಿಚಂದ್ರನ್ (Ravichandran) ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇಂದು ಮಧ್ಯಾಹ್ನ ನಿರ್ಮಾಪಕರು ರವಿಚಂದ್ರನ್ ಅವರನ್ನು ಭೇಟಿ ಮಾಡಲಿದ್ದಾರೆ.
Advertisement
ನಿರ್ಮಾಪಕರ ಭೇಟಿ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ 1.30 ಕ್ಕೆ ರವಿಚಂದ್ರನ್ ಭೇಟಿಗೆ ಅವಕಾಶ ನೀಡಿದ್ದು, ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಮಾತುಕತೆ ನಡೆಯಲಿದೆ. ಈ ಭೇಟಿಗೆ ನಿರ್ಮಾಪಕರಿಗೆ ಸಾ.ರಾ ಗೋವಿಂದ್ (Sa. Ra. Govind) ಸಾಥ್ ನೀಡಲಿದ್ದಾರೆ. 20 ಕ್ಕೂ ಹೆಚ್ಚು ನಿರ್ಮಾಪಕರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಮಹೇಶ್ ಬಾಬು ಸಿನಿಮಾ ಬಗ್ಗೆ ಅಪ್‌ಡೇಟ್ ಹಂಚಿಕೊಂಡ ಮೀನಾಕ್ಷಿ ಚೌಧರಿ
Advertisement
Advertisement
ಈ ಕುರಿತು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ‘ಒಂದೂವರೆ ತಿಂಗಳಿಂದ ಎಲ್ಲಾ ವಿದ್ಯಾಮಾನಗಳನ್ನು ನೋಡ್ತಾ ಇದ್ದೀನಿ. ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲಿಯೇ ಇದ್ದೆ. ಆದ್ರೆ ಸಮಸ್ಯೆ ಬಗೆಹರಿಸಲೇ ಬೇಕಾಗಿದೆ. ಸುದೀಪ್ ಬೇರೆ ಅಲ್ಲ, ನಿರ್ಮಾಪಕರು ಬೇರೆ ಅಲ್ಲ. ನನ್ನ ಕಾಲದಲ್ಲಿ ಸುಮಾರು ಸಾವಿರಾರು ಇಂತ ಸಮಸ್ಯೆ ಬಗೆಹರಿಸಿದ್ದೇವೆ. ರನ್ನ ಚಿತ್ರ ಬಿಡುಗಡೆಯಾದಂತಹ ಸಂದರ್ಭದಲ್ಲಿ ನಡೆದ ಘಟನೆಯಿದು, ಕುಮಾರ್ ಅವರಿಗೆ ನಿರ್ಮಾಪಕರು ಹಣ ಕೊಡಬೇಕಾಗಿತ್ತು. ಸುದೀಪ್ ಅವರ ಬಳಿ ಕುಮಾರ್ ಕೇಳಿದ್ದರು. ಸುದೀಪ್ ಅವರೇ ಆ ಸಮಯದಲ್ಲಿ ವಾಣಿಜ್ಯ ಮಂಡಳಿಗೆ ಬಂದಿದ್ದರು. 2 ಕೋಟಿ 35 ಲಕ್ಷ ಹಣವನ್ನು ಕೊಟ್ಟಿದ್ದಕ್ಕೆ ಸಾಕ್ಷಿ ನಾನಿದ್ದೀನಿ. ಎಲ್ಲಾ ನಿರ್ಮಾಪಕರಿಗೂ ಇದು ಗೊತ್ತಿರುವ ವಿಚಾರ. ಇಂಥ ಸಮಸ್ಯೆಗಳು ಬಂದಾಗ ಸಂಧಾನ ಸಮಿತಿ ಅಂತ ಮಾಡ್ತೀವಿ. ಆ ಸಮಿತಿಯಲ್ಲಿ 15 ರಿಂದ 18 ಜನ ಇರ್ತಾರೆ. ಶಿವರಾಜ ಕುಮಾರ್, ರವಿಚಂದ್ರನ್, ಉಮೇಶ್ ಬಣಕಾರ್, ಕೆ ಮಂಜು, ನಾಗಣ್ಣ, ಗಂಗಾಧರ್ ಹೀಗೆ ಸಾಕಷ್ಟು ಜನ ಸಮಿತಿಯಲ್ಲಿದ್ದಾರೆ. ಎಲ್ಲರೂ ಸೇರಿ ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ’ ಅಂದರು.
Advertisement
ಕುಮಾರ್ ಮತ್ತು ಸುದೀಪ್ ಪ್ರಕರಣ (Controversy) ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಮೊದಲು ಪ್ರಕರಣಕ್ಕೆ ಶಿವರಾಜ್ ಕುಮಾರ್ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮೊದಲು ರವಿಚಂದ್ರನ್ ಅವರ ಆಗಮನವಾಗಿದೆ. ಅಲ್ಲಿ ಏನು ಮಾತಕತೆ ಆಗತ್ತೋ ಕಾದು ನೋಡಬೇಕಿದೆ.
Web Stories