ಸುದೀಪ್ ನನ್ನ ಸಹೋದರ ಇದ್ದಂತೆ: ಸಲ್ಮಾನ್ ಖಾನ್

Public TV
1 Min Read
salman khan sudeep 2

ಬೆಂಗಳೂರು: ಅಭಿನಯ ಚಕ್ರವರ್ತಿ ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.

ಮಂಗಳವಾರ ‘ದಬಾಂಗ್-3’ ಚಿತ್ರಕ್ಕಾಗಿ ಸಲ್ಮಾನ್ ಖಾನ್, ನಿರ್ದೇಶಕ ಪ್ರಭುದೇವ ಬೆಂಗಳೂರಿಗೆ ಆಗಮಿಸಿದ್ದರು. ಸುದೀಪ್ ಅವರು ಕೂಡ ಚಿತ್ರತಂಡದ ಜೊತೆ ಸೇರಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸಲ್ಮಾನ್, ಸುದೀಪ್ ನನ್ನ ಸಹೋದರ ಇದ್ದಂತೆ ಎಂದು ಹೇಳಿದ್ದಾರೆ.

ಸುದೀಪ್ ಜೊತೆ ನಟಿಸಿದ್ದು ನಿಮಗೆ ಹೇಗೆ ಎನಿಸಿತ್ತು ಎಂದು ಮಾಧ್ಯಮದವರು ಸಲ್ಮಾನ್ ಅವರು ಪ್ರಶ್ನಿಸಿದ್ದಾರೆ. ಆಗ ಸಲ್ಮಾನ್, ಸುದೀಪ್ ಜೊತೆ ಕೆಲಸ ಮಾಡಿದ್ದು ತುಂಬಾ ಚೆನ್ನಾಗಿತ್ತು. ಸುದೀಪ್ ನನ್ನ ಕಿರಿಯ ಸಹೋದರ ಸೋಹೆಲ್‍ನ ಸಹೋದರ ಇದ್ದಂತೆ. ಸೋಹೆಲ್‍ಗೆ ಸಹೋದರ ಎಂದರೆ ನನಗೂ ಸಹೋದರ ಇದ್ದಂತೆ. ನಮ್ಮ ಸಂಬಂಧ ಸಹೋದರರಂತೆ ಆಗಿದೆ. ಹಾಗಾಗಿ ಕೆಲಸ ಮಾಡುವುದರಲ್ಲಿ ನಮಗೆ ಖುಷಿಯಾಯಿತು ಎಂದರು.

Dabangg 2

ಇದೇ ವೇಳೆ ಸಲ್ಮಾನ್ ಅವರಿಗೆ ಕನ್ನಡದಲ್ಲಿ ಮಾತನಾಡುವುದಕ್ಕೆ ಕಷ್ಟವಾಯಿತಾ ಎಂದು ಪ್ರಶ್ನಿಸಿದ್ದಾಗ, ನನಗೆ ಕನ್ನಡ ಅಲ್ಲ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದಕ್ಕೆ ಕಷ್ಟವಾಯಿತು ಎಂದರು. ಬಳಿಕ ಕನ್ನಡದಲ್ಲಿ ಚಿತ್ರದ ಡೈಲಾಗ್ ಹೇಳಿ ಎಂದಾಗ ಸಲ್ಮಾನ್ ಅವರು ಸುದೀಪ್ ಅವರ ಸಹಾಯ ಪಡೆದು ‘ಟೈಮು ನಂದು, ತಾರೀಖು ನಂದು’ ಎಂದು ಖಡಕ್ ಡೈಲಾಗ್ ಹೇಳಿದ್ದಾರೆ.

ಸುದೀಪ್ `ದಬಾಂಗ್- 3′ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರವನ್ನು ನಟ, ನಿರ್ದೇಶಕ ಪ್ರಭುದೇವ ನಿರ್ದೇಶಿಸಿದ್ದು, ಸಲ್ಮಾನ್‍ಗೆ ನಾಯಕಿಯಾಗಿ ನಟಿ ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಸಲ್ಮಾನ್ ಮತ್ತು ಅರ್ಬಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಡಿಸೆಂಬರ್ 20ರಂದು ಈ ಚಿತ್ರ ಬಿಡುಗಡೆಯಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *