ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸದ್ಯದ ಸುದ್ದಿ ಅಂದರೆ ನಿರ್ಮಾಪಕ ಎನ್.ಕುಮಾರ್- ಕಿಚ್ಚ ಸುದೀಪ್ (Kiccha Sudeep) ಅವರ ವಿವಾದ. ತನ್ನಿಂದ ಹಣ ಪಡೆದು ಕಾಲ್‌ಶೀಟ್ ನೀಡುತ್ತಿಲ್ಲ ಎಂದು ಕುಮಾರ್ ಆರೋಪಿಸಿದ್ದರು. ಈ ವಿಚಾರವಾಗಿ ಸುದೀಪ್ ಕೋರ್ಟ್ ಮೆಟ್ಟಿಲೇರಿದ್ದರು. ಇಬ್ಬರ ಮಧ್ಯೆ ಜಟಾಪಟಿ ನಡೆಯುತ್ತಿದೆ. ಹೀಗಿರುವಾಗ ಸದ್ಯ ಸುದೀಪ್, ವಿವಾದ ಮರೆತು ಪಾರ್ಟಿ ಮೂಡ್‌ನಲ್ಲಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಕಿಚ್ಚ ಸುದೀಪ್ ಅವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಕಿಚ್ಚನ ಮೇಲೆ ಈ ರೀತಿ ಆರೋಪ ಮಾಡಿರೋದು ಸುದೀಪ್ ಫ್ಯಾನ್ಸ್‌ಗೆ ಬೇಸರವಾಗಿದೆ. ನೆಚ್ಚಿನ ನಟನ ವಿರುದ್ಧ ಆರೋಪಿಸಿದವರಿಗೆ ಕಿಚ್ಚನ ಫ್ಯಾನ್ಸ್ ಆಕ್ರೋಶ ಹೊರಹೊಕಿದ್ದಾರೆ. ಇನ್ನೂ ಕುಮಾರ್ ವಿರುದ್ಧ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಸದ್ಯ ಸಂಕಷ್ಟಗಳನ್ನ ಮರೆತು ಸುದೀಪ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ:‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಪ್ರಕಾಶ್ ರೈ- ರಮ್ಯಾಕೃಷ್ಣ
Today's Exclusive Pic With Team @rajasthanroyals meet @KicchaSudeep Anna And spent time with each other ????????#KicchaSudeep #KicchaBOSS???? #Kiccha46 pic.twitter.com/5Luu4BkjAs
— ABHINAYA CHAKRAVARTHY CULTS BIDAR (@ACC_BIDAR) July 18, 2023
ಜುಲೈ 18ರ ರಾತ್ರಿ ಸುದೀಪ್ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡದ ಸಂದೀಪ್ ಶರ್ಮಾ, ಕೆಸಿ ಕರಿಯಪ್ಪ, ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ, ‘ಹೆಬ್ಬುಲಿ’ ನಿರ್ದೇಶಕ ಕೃಷ್ಣ ಸೇರಿ ಮೊದಲಾದವರ ಜೊತೆ ಸುದೀಪ್ ಪಾರ್ಟಿ ಮಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ಸುದೀಪ್ ಸೂಪರ್ ಕೂಲ್ ಆಗಿರುವುದನ್ನು ನೋಡಿ ಕಿಚ್ಚನ ಫ್ಯಾನ್ಸ್ ಖುಷಿ ಕೊಟ್ಟಿದೆ.
ಇನ್ನೂ ಸುದೀಪ್ ನಟನೆಯ ‘K46’ ಸಿನಿಮಾ ಫಸ್ಟ್ ಲುಕ್ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ. ಚಿತ್ರದ ಮುಂದಿನ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]