ಫಿಲ್ಮ್ ಫೆಸ್ಟಿವಲ್‌ಗೆ ಸುದೀಪ್ ಅನುಪಸ್ಥಿತಿ ಬಗ್ಗೆ ಪರೋಕ್ಷವಾಗಿ ಕಿಡಿಕಾರಿದ್ದ ಶಾಸಕ ರವಿ ಗಣಿಗಗೆ ಕಿಚ್ಚನ ಆಪ್ತ ಚಂದ್ರಚೂಡ್ ತಿರುಗೇಟು ಕೊಟ್ಟ ಬೆನ್ನಲ್ಲೇ ಹೊಸ ಆರೋಪ ಮಾಡಿದ್ದಾರೆ. ಫಿಲ್ಮ್ ಫೆಸ್ಟಿವಲ್ ಕಿಚ್ಚನಿಗೆ ಆಹ್ವಾನ ಇರಲಿಲ್ಲ, ಸಾಧುಕೋಕಿಲ ಅವರಿಂದ ಯಶ್ (Yash), ಸುದೀಪ್ (Sudeep), ಧ್ರುವ ಸರ್ಜಾ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ ಎಂದು ಚಂದ್ರಚೂಡ್ (Chandrachud) ಪಬ್ಲಿಕ್ ಟಿವಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಸಾಧುಕೋಕಿಲ ಅವರು ಸಿನಿಮಾ, ಅಕಾಡೆಮಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈಗ ಅವರು ಅರ್ಧ ರಾಜಕಾರಣಿ ಬೇರೇ ಆಗಿದ್ದಾರೆ. ಯಾಕೆ ಸಾಧುಕೋಕಿಲ ಅವರು ತಪ್ಪು ಮಾಹಿತಿ ನೀಡ್ತಿದ್ದಾರೆ. ಅವರಿಗೆ ಸಂಘಟನೆಯ ಚತುರತೆ ಬರದೇ ಇರೋದ್ರಿಂದ, ಇಡೀ ಚಿತ್ರರಂಗಕ್ಕೆ ತಪ್ಪು ಮಾಹಿತಿ ಆಗೋ ಹಾಗೆ ಆಗಿದೆ. ಸುದೀಪ್ ಬಗ್ಗೆ ಮಾತ್ರವಲ್ಲ. ಸಾಧುಕೋಕಿಲರಿಂದ ಯಶ್, ಉಪೇಂದ್ರ, ಧ್ರುವ ಸರ್ಜಾ ಬಗ್ಗೆ ತಪ್ಪು ಮಾಹಿತಿ ಹೋಗ್ತಿದೆ ಎಂದು ಫಿಲ್ಮ್ ಫೆಸ್ಟಿವಲ್‌ಗೆ ಆಹ್ವಾನ ಇಲ್ಲದೇ ಇರೋ ಬಗ್ಗೆ ಸ್ಪಷ್ಟಪಡಿಸಿದರು.
ನಾನು ಕೂಡ ಒಬ್ಬ ಡೈರೆಕ್ಟರ್ ಕೂಡ ಚಲನಚಿತ್ರೋತ್ಸವಕ್ಕೆ ನನಗೆ ಕರೆದಿದ್ದೀರಾ? ನಾನು ನಿರ್ದೇಶಕರ ಸಂಘದಲ್ಲಿದ್ದೇನೆ ಪಾಸ್ ಕೊಟ್ಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಈ ವರ್ಷ ಅಂತ ಅಲ್ಲ ಪ್ರತಿ ವರ್ಷ ಫಿಲ್ಮ್ ಫೆಸ್ಟಿವಲ್ ನಡೆಯುವಾಗ ಹೀಗೆ ಅದ್ವಾನ ನಡೆಯುತ್ತಲೇ ಇರುತ್ತದೆ ಎಂದರು. ಇದನ್ನೂ ಓದಿ:ಚಲನಚಿತ್ರೋತ್ಸವಕ್ಕೆ ಸುದೀಪ್‌ಗೆ ಆಹ್ವಾನ ಕೊಟ್ಟಿರಲಿಲ್ವಾ?- ಶಾಸಕನ ಆರೋಪಕ್ಕೆ ಕಿಚ್ಚನ ಆಪ್ತ ಸ್ಪಷ್ಟನೆ
ಇನ್ನೂ ನನಗೆ ಶಾಸಕ ರವಿ ಗಾಣಿಗ ಅವರು ಕಾಲ್ ಮಾಡಿದ್ರು. ನನಗೆ ಸುದೀಪ್ ಸರ್ 2004ರಿಂದ ಅವಾರ್ಡ್‌ಗಳನ್ನೇ ತೆಗೆದುಕೊಳ್ತಿರಲಿಲ್ಲ ಅನ್ನೋ ಮಾಹಿತಿ ಗೊತ್ತಿರಲಿಲ್ಲ. ‘ರಂಗ ಎಸ್‌ಎಸ್‌ಎಲ್‌ಸಿ’ ಸಮಯದಲ್ಲಿ ಅವರಿಗೆ ಸ್ಟೇಟ್ ಅವಾರ್ಡ್ ಬರೋದು ಇರುತ್ತದೆ. ಅದರ ಹಿಂದಿನ ಸರ್ಕಾರದಿಂದ ಅವರಿಗೆ ಪತ್ರ ಬಂದಿರುತ್ತದೆ. ನಿಮಗೆ ರಾಜ್ಯೋತ್ಸವ ಬಂದಿದೆ ಅಂತ, ಮರುದಿನ ಆ ಅವಾರ್ಡ್ ಬೇರೆ ಅವರಿಗೆ ಕೊಡ್ತಾರೆ. ‘ಜಸ್ಟ್ ಮಾತ್ ಮಾತಲ್ಲಿ’ ಸಿನಿಮಾ ಪ್ರಶಸ್ತಿ ಅನೌನ್ಸ್ ಮಾಡೋ ಟೈಮ್‌ನಲ್ಲೂ ಹೀಗೆ ಆಯ್ತು ಎಂಬ ವಿಷ್ಯ ನನಗೆ ಸರ್ಕಾರದಿಂದ ಎಂದು ತಿಳಿದಿರಲಿಲ್ಲ. ಇಷ್ಟು ವರ್ಷ ಆದ್ರೂ ಸುದೀಪ್ ಅವರು ತಮಗೆ ಆಗಿರೋ ಅವಮಾನ ಎಲ್ಲೂ ಹೇಳಿಕೊಂಡಿಲ್ಲವಲ್ಲ ಎಂದು ರವಿ ಗಣಿಗ ಅವರು ತಮಗೆ ಹೇಳಿದರು ಎಂದು ಚಂದ್ರಚೂಡ್ ಈ ಬಗ್ಗೆ ಮಾತನಾಡಿದರು.
ಇಷ್ಟೇಲ್ಲ ವಿಚಾರ ಆಗಿದೆ ಎಂಬುದು ರವಿ ಗಾಣಿಗ ಅವರಿಗೆ ತಿಳಿದಿರಲಿಲ್ಲ. ಅದರಂತೆ ಡಿಸಿಎಂ ಅವರಿಗೂ ಇದರ ಬಗ್ಗೆ ತಿಳಿದಿಲ್ಲ. ಚಲನಚಿತ್ರೋತ್ಸವಕ್ಕೆ ಸುದೀಪ್ ಆಹ್ವಾನ ನೀಡಿಲ್ಲ. ಗೊತ್ತಿದ್ರೆ ಅವರು ಸ್ಯಾಂಡಲ್‌ವುಡ್ ನಟರಿಗೆ ನೆಟ್ಟು ಬೋಲ್ಟು ಟೈಟ್ ಮಾಡ್ತೀನಿ ಅಂತ ಹೇಳ್ತಿರಲಿಲ್ಲ. ನಟ್ಟು ಬೋಲ್ಟು ಸರಿ ಮಾಡೋದಾದ್ರೆ 2024ರ ಸಬ್ಸಿಡಿ ಕೊಟ್ಟು ಸರಿ ಮಾಡಿ ಎಂದಿದ್ದಾರೆ.
ಇನ್ನೂ ಚಿತ್ರರಂಗದ ನಟರ ಬಗ್ಗೆ ಡಿಸಿಎಂ ಡಿಕೆಶಿ ಅವರು ಜನರಲ್ ಆಗಿ ಹೇಳಿದ್ದಾರೆ. ಸುದೀಪ್ ಅವರನ್ನೇ ಟಾರ್ಗೆಟ್ ಮಾಡಿ ಮಾತನಾಡಿಲ್ಲ. ಕರ್ನಾಟಕ ರಾಜ್ಯದಲ್ಲೇ ಸುದೀಪ್ ಆಗಿರೋ ಅವಮಾನದಿಂದ ಅವರು ಯಾವುದೇ ಅವಾರ್ಡ್ ತೆಗೆದುಕೊಳ್ತಿಲ್ಲ ಕ್ಲ್ಯಾರಿಟಿ ನೀಡಿದ್ದಾರೆ.
ಸುದೀಪ್ ಸರ್ ಅವರು ಡಿಕೆಶಿ ಅವರ ಹತ್ತಿರ ತುಂಬಾ ಚೆನ್ನಾಗಿದ್ದಾರೆ. ಒಂದು ಸಿಸಿಎಲ್‌ಗೆ ಆಹ್ವಾನ ಕೊಡೋದಕ್ಕೆ ಹೋದಾಗ ಒಟ್ಟಿಗೆ ಟಿಫನ್ ಮಾಡಿದ್ವಿ ಎಂದಿದ್ದಾರೆ. ಈ ವೇಳೆ, ‘ಬಿಲ್ಲ ರಂಗಾ ಭಾಷಾ’ ಚಿತ್ರಕ್ಕೆ ಪರ್ಮೀಷನ್ ಕೇಳೋಕೆ ಹೋಗಿರಲಿಲ್ಲ. ಚಿತ್ರಕ್ಕೆ ಒಂದು ಸೆಟ್ ಹಾಕಬೇಕಿತ್ತು. ನಮಗೆ 12ರಿಂದ 15 ಏಕರೆ ಜಾಗ ಬೇಕಿತ್ತು. ಅದಕ್ಕೆ ಉಪಕರಣಗಳು ಬೇಕಿತ್ತು ಹಾಗಾಗಿ ಡಿಕೆಶಿ ಅವರ ಬಳಿ ಚರ್ಚಿಸಿದ್ವಿ ಎಂದರು.