ಕನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಶುರುವಾಗುತ್ತಿದ್ದಂತೆ ಈ ಬಾರಿ ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಹೀಗೆ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿತ್ತು. ಆ ನಂತರ ಬಿಗ್ ಬಾಸ್ ಪ್ರೋಮೋ ಮೂಲಕ ಎಲ್ಲಾ ವದಂತಿಗಳಿಗೂ ಉತ್ತರ ಸಿಕ್ಕಿತ್ತು. ಆದರೆ ಅಸಲಿಗೆ ಏನಾಗಿತ್ತು ಎಂದು ಸುದೀಪ್ (Sudeep) ವಿವರಿಸಿದ್ದಾರೆ. ಈ ಸೀಸನ್ ನಿರೂಪಣೆ ಮಾಡೋದು ಬೇಡ ಅಂತ ಯೋಚನೆ ಮಾಡಿದ್ದು ನಿಜ ಎಂದು ನಟ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
Advertisement
ಕಳೆದ 10 ವರ್ಷಗಳಿಂದ `ಬಿಗ್ ಬಾಸ್’ ಶೋ ನಿರೂಪಣೆ ಮಾಡುತ್ತಲೇ ಬಂದಿದ್ದೇನೆ. ಈ ಬಾರಿ ಬೇರೆಯವರು ನಿರೂಪಣೆ ಮಾಡಲಿ ಎಂದೇ ನಿರ್ಧರಿಸಿದ್ದೆ, ಹಾಗಂತ ವಾಹಿನಿಯ ಜೊತೆ ಒಡನಾಟ ಚೆನ್ನಾಗಿರಲಿಲ್ಲ ಅಂತ ಅಲ್ಲ. ತಂಡ ನನ್ನನ್ನು ತಂಬಾ ಚೆನ್ನಾಗಿ ನೋಡಿಕೊಂಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
Advertisement
ಪ್ರತಿ ಬಾರಿ ಬಿಗ್ ಬಾಸ್ ಶುರು ಆಗ್ತಿದ್ದಂತೆ ನನ್ನ ಲೈಫ್ ಮ್ಯೂಟ್ ಆಗುತ್ತದೆ. 4 ದಿನ ಹೊರಗೆ ಹೋಗಬಹುದು ಅಷ್ಟೇ, ಮತ್ತೆ ಶುಕ್ರವಾರ ಬರಬೇಕಾಗುತ್ತದೆ. ಹಾಗಾಗಿ 10 ವರ್ಷ ಆಯ್ತು ಬೇರೆಯವರು ಮಾಡಲಿ ಅಂತ ಇತ್ತು. ಎಲ್ಲರೂ ನನ್ನ ಒಪ್ಪಿಸೋಕೆ ವಾಹಿನಿ ತಂಡ ಮನೆಗೆ ಬಂದಿತ್ತು. ಬಿಗ್ ಬಾಸ್ ಅನ್ನೋದು ಬ್ಯೂಟಿಫುಲ್ ವೇದಿಕೆ, ಹಾಗಾಗಿ ಆ ನಂತರ ನಿರೂಪಣೆ ಮಾಡಲು ಒಪ್ಪಿಕೊಂಡಿರೋದಾಗಿ ತಿಳಿಸಿದರು. ಇದನ್ನೂ ಓದಿ:ಮಕ್ಕಳ ಜೊತೆ ಗ್ರೀಸ್‌ನಲ್ಲಿ ನಯನತಾರಾ ವೆಕೇಷನ್
Advertisement
90% ಜನ ಈ ಶೋ ನೋಡ್ತಾರೆ, ಹಾಗಾಗಿ ‘ಬಿಗ್ ಬಾಸ್’ ಕಾರ್ಯಕ್ರಮ ಮಾಡಲು ಇದು ಒಂದು ಕಾರಣ. ಸಿನಿಮಾದ ಜೊತೆ ಈ ಶೋನಿಂದ ತುಂಬಾ ಪ್ರೀತಿ ಸಿಕ್ಕಿದೆ ಎಂದಿದ್ದಾರೆ ಸುದೀಪ್. ಇನ್ನೂ 10 ವರ್ಷದಲ್ಲಿ ರೀಟೇಕ್ ತಗೆದುಕೊಂಡಿಲ್ಲ. ಮನೆಗೆ ಹೋದ್ಮೇಲೆ ನೋ ರೀಟೇಕ್ ಎಂದಿದ್ದಾರೆ. ಶೋ ಮಾಡುವಾಗ ಬಹಳ ಹೊತ್ತು ನಿಂತರೆ ಕಾಲು ನೋವು ಬರುತ್ತದೆ. ಎಲ್ಲವನ್ನೂ ನಿಭಾಯಿಸಿಕೊಂಡು ಮಾಡುತ್ತಿದ್ದೆ ಎಂದಿದ್ದಾರೆ.