ʻನನ್ನ ದೇಹ ಚರ್ಚೆಯ ವಿಷಯವಲ್ಲʼ ಎಂದು ಟ್ರೋಲಿಗರಿಗೆ ತಿರುಗೇಟು ನೀಡಿದ್ದ ಪುತ್ರಿ ಸಾನ್ವಿ (Sanvi Sudeep) ಹೇಳಿಕೆಯನ್ನು ಕಿಚ್ಚ ಸುದೀಪ್ (Kichcha Sudeep) ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಕೆಟ್ಟ ಕಾಮೆಂಟ್ಸ್ ಮಾಡುವವರ ವಿರುದ್ಧವೂ ಗುಡುಗಿದ್ದಾರೆ.
ʻನನ್ನ ದೇಹ ಇನ್ಯಾರದ್ದೋ ಚರ್ಚೆಯ ವಸ್ತುವಲ್ಲ, ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ಖಂಡಿತ ಕೇಳುತ್ತೇನೆʼ ಎಂದು ಸುದೀಪ್ ಪುತ್ರಿ ಇನ್‌ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನ ಸಮರ್ಥಿಸಿಕೊಂಡಿರುವ ಸುದೀಪ್, ನನ್ನ ಮಗಳು ರಿಯಾಕ್ಟ್ ಮಾಡಿದ್ದು ತಪ್ಪಾ? ಯಾವುದೇ ಹೆಣ್ಣುಮಕ್ಕಳಾದ್ರೂ ಮಾತನಾಡ್ತಿದ್ರು ತಾನೆ..? ಹೆಣ್ಣಾಗಿ ಏನ್ ಮಾಡ್ಬೇಕು ಅದನ್ನೇ ಮಗಳು ಮಾಡಿದ್ದಾಳೆ. ನಾನು ಹೇಳಿಕೆ ಕೊಡೋಕೂ ಮುನ್ನವೇ ನನ್ನ ಮಗಳು ಮಾತನಾಡಬೇಕಿತ್ತಾ ಹಾಗಾದ್ರೆ ಎಂದಿದ್ದಾರೆ.
ಬೆಂಗಳೂರಿನ ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರಲ್ಲಿ ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಬಳಿಕ ಸುದೀಪ್ ತಮ್ಮ ಅಭಿಪ್ರಾಯ ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಮಾರ್ಕ್ ಸಿನಿಮಾ ಬಿಡುಗಡೆ ಬಳಿಕ ಫ್ಯಾನ್ಸ್‌ವಾರ್ ನಡುವಿನ ಪೈಪೋಟಿ ನಡುವೆ ಕುಟುಂಬವನ್ನ ಎಳೆತಂದಿದ್ದ ಕಿಡಿಗೇಡಿಗಳು ಸಾನ್ವಿ ಸುದೀಪ್ ವಿರುದ್ಧ ಟ್ರೋಲ್ ಮಾಡಿದ್ದರು. ಕೆಟ್ಟ ಕಾಮೆಂಟ್ಸ್ ಮಾಡುತ್ತಿದ್ದರು. ಈ ಬಗ್ಗೆ ಸುದೀಪ್ ವಿರುದ್ಧ ಕಿಡಿ ಕಾರಿದ್ದರು. ನನ್ನ ಮಗಳು ನನಗಿಂತಲೂ ಧೈರ್ಯವಂತೆ ಎಂದಿದ್ದರು ಕಿಚ್ಚ. ಈ ಘಟನೆ ಬಳಿಕ ಸಾನ್ವಿ ಸುದೀಪ್ ಇನ್‌ಸ್ಟಾ ಸ್ಟೋರಿಯಲ್ಲಿ ನನ್ನ ದೇಹ ಇನ್ನೊಬ್ಬರ ಚರ್ಚೆಯ ವಸ್ತುವಲ್ಲ ಎಂದು ಹೇಳುವ ಮೂಲಕ ನೇರವಾಗೇ ತಿವಿದಿದ್ದರು.


