ಬೆಂಗಳೂರು: ಸ್ಯಾಂಡಲ್‍ವುಡ್‍ನ ಬಾದ್‍ಷಾ ಎಂದೇ ಖ್ಯಾತಿ ಪಡೆದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
Advertisement
ತಾಯವ್ವ ಸಿನಿಮಾದ ಮೂಲಕ ಪೋಷಕ ಪಾತ್ರಧಾರಿಯಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಸುದೀಪ್, ಮೊದಲ ಬಾರಿಗೆ ನಟರಾಗಿ ಅಭಿನಯಿಸಿದ ಸಿನಿಮಾ ಸ್ಪರ್ಶ(2000), ಆದರೆ ಸುದೀಪ್ ಜೀವನ ದಿಕ್ಕನ್ನೇ ಬದಲಿಸಿದ ಸಿನಿಮಾ ಹುಚ್ಚ. ಹುಚ್ಚ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಎಂದೇ ಜನಪ್ರಿಯರಾದ ಸುದೀಪ್, ಈವರೆಗೂ ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ:ವ್ಯಾಲೆಂಟೈನ್ಸ್ ಡೇ ವಿಶೇಷ – ಸುದೀಪ್‍ಗೆ ಪತ್ನಿ ಪ್ರಿಯಾರಿಂದ ಸ್ಪೆಷಲ್ ಗಿಫ್ಟ್!
Advertisement
Advertisement
ಕನ್ನಡದಲ್ಲಿ ಈವರೆಗೂ 48, ಹಿಂದಿಯಲ್ಲಿ 7, ತೆಲುಗಿನಲ್ಲಿ 3, ತಮಿಳಿನ ಒಂದು ಸಿನಿಮಾದಲ್ಲಿ ಸುದೀಪ್ ಬಣ್ಣಹಚ್ಚಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟರಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ಕಥೆ, ಚಿತ್ರಕಥೆಗಾರ, ವಿತರಕ, ಬಿಗ್ ಬಾಸ್ ನಿರೂಪಕ ಮತ್ತು ಹಿನ್ನೆಲೆ ಗಾಯಕರಾಗಿ ಸುದೀಪ್‍ರವರು ಕನ್ನಡ ಭಾಷೆಯ ಚಲನಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಇದನ್ನೂ ಓದಿ:ಸುದೀಪ್‍ಗೆ ದುಬಾರಿ BMW M5 ಕಾರು ಗಿಫ್ಟ್ ಕೊಟ್ಟ ಸಲ್ಮಾನ್
Advertisement
ಹುಚ್ಚ, ನಂದಿ ಮತ್ತು ಸ್ವಾತಿ ಮುತ್ತು ಚಿತ್ರಗಳಿಗಾಗಿ ಸತತ ಮೂರು ವರ್ಷಗಳ ಕಾಲ ಕನ್ನಡದ ಅತ್ಯುತ್ತಮ ನಟನೆಗಾಗಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದಿದ್ದಾರೆ. 2013 ರಿಂದ ಟೆಲಿವಿಷನ್ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಕನ್ನಡದ ನಿರೂಪಕರಾಗಿದ್ದಾರೆ. ತೆಲುಗಿನ ‘ಈಗ’ ಸಿನಿಮಾದ ಮೂಲಕ ಟಾಲಿವುಡ್‍ಗೆ ಎಂಟ್ರಿ ಕೊಟ್ಟ ಸುದೀಪ್, ತಮ್ಮ ಮೊದಲ ಸಿನಿಮಾದಲ್ಲಿಯೇ ಟಾಲಿವುಡ್ ಪ್ರೇಕ್ಷಕರ ಮನಗೆಲ್ಲುವ ಮೂಲಕ ಸೈ ಎನಿಸಿಕೊಂಡರು. ನಂತರ ಬಾಹುಬಲಿ ಪ್ರಭಾಸ್, ಚಿರಂಜೀವಿ ಅಷ್ಟೇ ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆಗೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಸುದೀಪ್‍ಗೆ ‘ಕನ್ನಡ ಚಿತ್ರರಂಗದ ಹೆಮ್ಮೆ’ ಪ್ರಶಸ್ತಿ
ಸದ್ಯ ದಕ್ಷಿಣ ಭಾರತದ ಬ್ಯುಸಿಯೆಸ್ಟ್ ನಟರಾಗಿ ಮಿಂಚುತ್ತಿರುವ ಸುದೀಪ್ ಈವರೆಗೂ ಫಿಲ್ಮ್ ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ನಂದಿ ಪ್ರಶಸ್ತಿ ಸೇರಿದಂತೆ ಹಲವರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.