‘ವಿಕ್ರಾಂತ್‌ ರೋಣ’ ನಿರ್ದೇಶಕನ ಜೊತೆ ಕೈಜೋಡಿಸಿದ ಕಿಚ್ಚ- ಸೆ.2ರಂದು ಸಿಗಲಿದೆ ಅಪ್‌ಡೇಟ್‌

Public TV
1 Min Read
sudeep

ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ (Sudeep) ಸದ್ಯ ‘ಮ್ಯಾಕ್ಸ್’ ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಇದರ ನಡುವೆ ನಿರ್ದೇಶಕ ಅನೂಪ್ ಭಂಡಾರಿ (Anup Bhandari) ಜೊತೆ ಸಿನಿಮಾ ಮಾಡುವ ಕುರಿತು ಸುದೀಪ್‌ ಹುಟ್ಟುಹಬ್ಬದಂದು (ಸೆ.2) ಗುಡ್‌ ನ್ಯೂಸ್‌ ಸಿಗಲಿದೆ. ಇದನ್ನೂ ಓದಿ:ಕೈಯಲ್ಲಿ ಬೆಡ್‌ ಶಿಟ್‌ ಹಿಡ್ಕೊಂಡು ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್‌

ಅನೂಪ್ ಮತ್ತು ಸುದೀಪ್ ಈಗಾಗಲೇ ಜೊತೆಯಾಗಿ ‘ವಿಕ್ರಾಂತ್ ರೋಣ’ (Vikrant Rona) ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಹೊಸ ಚಿತ್ರಕ್ಕಾಗಿ ಇಬ್ಬರೂ ಜೊತೆಯಾಗ್ತಿದ್ದಾರೆ. ಸುದೀಪ್ ಜೊತೆ ಅನೂಪ್ ಚೆಂದದ ಫೋಟೋಶೂಟ್ ಮಾಡಿಸಿ ಸೆ.2ರಂದು ಬೆಳಗ್ಗೆ 10 ಗಂಟೆಗೆ ಸಿನಿಮಾ ಕುರಿತು ಮಾಹಿತಿ ಸಿಗಲಿದೆ ಎಂಬುದನ್ನು ಅಧಿಕೃತವಾಗಿ ತಿಳಿಸಿದ್ದಾರೆ. ವಿ ಆರ್ ಬ್ಯಾಕ್ ಎಂದಿದ್ದಾರೆ.

‘ಮ್ಯಾಕ್ಸ್’ (Max Kannada Film) ಸಿನಿಮಾ ರಿಲೀಸ್‌ಗೂ ಮುನ್ನವೇ ಹೊಸ ಪ್ರಾಜೆಕ್ಟ್ ಕುರಿತು ಕ್ರೇಜಿ ಅಪ್‌ಡೇಟ್ ಕೊಡೋಕೆ ರೆಡಿಯಾಗಿರೋದಕ್ಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

Share This Article